ಪ್ರಧಾನಿಯನ್ನು ಭೇಟಿ ಮಾಡಿ ಕನಸು ನನಸು ಮಾಡಿಕೊಂಡ ಬಾಲಕಿ

ನವದೆಹಲಿ: ಅದೆಷ್ಟೋ ಮಂದಿ ತಮ್ಮ ನೆಚ್ಚಿನ ಸೆಲೆಬ್ರಿಟಿ ಮತ್ತು ನಾಯಕರನ್ನು ಭೇಟಿ ಮಾಡಬೇಕೆಂಬ ಕನಸು ಹೊಂದಿರುತ್ತಾರೆ. ಆದರೆ ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ. ಆದರೆ 10 ವರ್ಷದ ಬಾಲಕಿಯೊಬ್ಬಳು ಸಂಸತ್ತಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ತನ್ನ ಕನಸನ್ನು ಈಡೇರಿಸಿಕೊಂಡಿದ್ದಾಳೆ.

ಹೌದು. ಮಹಾರಾಷ್ಟ್ರದ ಹಿರಿಯ ಬಿಜೆಪಿ ನಾಯಕ ರಾಧಾಕೃಷ್ಣ ವಿಕೆ. ಪಾಟೀಲ್ ಅವರ ಮೊಮ್ಮಗಳು ಮತ್ತು ಮಹಾರಾಷ್ಟ್ರದ ಅಹ್ಮದ್ ನಗರದ ಬಿಜೆಪಿ ಸದಸ್ಯ ಮತ್ತು ಸಂಸತ್ ಸದಸ್ಯ ಡಾ. ಸುಜಯ್ ವಿ.ಕೆ ಪಾಟೀಲ್ ಅವರ ಮಗಳು ಮೋದಿಯವರನ್ನು ಭೇಟಿ ಮಾಡಿದ್ದಾಳೆ.

ಬಹಳ ದಿನದಿಂದ ಮೋದಿಯವರನ್ನು ಭೇಟಿ ಮಾಡಬೇಕೆಂದು ಅನಿಶಾ ಅಂದುಕೊಂಡಿದ್ದಳು. ತಂದೆ ಡಾ. ಸುಜಯ್ ವಿ.ಕೆ ಪಾಟೀಲ್ ಸಂಸತ್ತಿನಲ್ಲಿದ್ದ ಸಭೆಗೆ ಅನಿಶಾಳನ್ನು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮೋದಿಯನ್ನು ಭೇಟಿ ಮಾಡಲು ಅಪಾಯಿಂಟ್ ಮೆಂಟ್ ಸಿಗದ ಕಾರಣ ಬಾಲಕಿ ಅವರ ತಂದೆಯ ಲ್ಯಾಪ್‍ಟಾಪ್ ಮೂಲಕ ಮೋದಿಗೆ ಇಮೇಲ್ ಕಳುಹಿಸಲು ನಿರ್ಧರಿಸಿದ್ದಾಳೆ. ಬಳಿಕ ಹಲೋ ಸರ್ ನಾನು ಅನಿಶಾ, ನಿಮ್ಮನ್ನು ಭೇಟಿ ಮಾಡಲು ಬಯಸುತ್ತೇನೆ ಎಂದು ಮೋದಿಯವರಿಗೆ ಮೇಲ್ ಮಾಡಿದ್ದಾಳೆ. ನಂತರ ಇದಕ್ಕೆ ಮೋದಿ ಉತ್ತರಿಸಿದ್ದು, ಅನಿಸಾ ಸಂತಸ ವ್ಯಕ್ತಪಡಿಸಿದ್ದಾಳೆ.

ಕೊನೆಗೆ ಬುಧವಾರ ಮಹಾರಾಷ್ಟ್ರ ನಾಯಕ ರಾಧಾಕೃಷ್ಣ ವಿ.ಕೆ ಪಾಟೀಲ್, ಅವರ ಪುತ್ರ ಅಹ್ಮದ್ ನಗರ ಸಂಸದ ಸುಜಯ್ ವಿ.ಕೆ ಪಾಟೀಲ್, ಸೊಸೆ ಧನಶ್ರೀ ಪಾಟೀಲ್ ಮತ್ತು 10 ವರ್ಷದ ಮೊಮ್ಮಗಳು ಅನಿಶಾ ಪಾಟೀಲ್ ಸಂಸತ್ತಿಗೆ ಬಂದು ಮೋದಿಯವರನ್ನು ಭೇಟಿ ಮಾಡಿದ್ದಾರೆ. ಆಗ ಮೋದಿಯವರು ಮೊದಲಿಗೆ ಅನಿಶಾ ಎಲ್ಲಿದ್ದಾಳೆ ಎಂದು ಪ್ರಶ್ನಿಸಿದ್ದಾರೆ. ನಂತರ ಅನಿಶಾಳನ್ನು ಮೋದಿಯವರು 10 ನಿಮಿಷಗಳ ಕಾಲ ಭೇಟಿ ಮಾಡಿದ್ದಾರೆ. ಈ ವೇಳೆ ಬಾಲಕಿ ಮೋದಿಯವರಿಗೆ ಕೆಲವು ಇಂಟ್ರೆಸ್ಟಿಂಗ್ ಪ್ರಶ್ನೆಗಳನ್ನು ಕೇಳಿದ್ದು, ಆಕೆಯ ಪ್ರಶ್ನೆಗಳಿಗೆ ಪ್ರಧಾನಿ ತಾಳ್ಮೆಯಿಂದ ಉತ್ತರ ನೀಡಿದ್ದಾರೆ.

ಇದು ನಿಮ್ಮ ಕಚೇರಿಯೇ? ನಿಮ್ಮ ಕಚೇರಿ ಎಷ್ಟು ದೊಡ್ಡದು? ನೀವು ಇಡೀ ದಿನ ಇಲ್ಲಿಯೇ ಕುಳಿತುಕೊಳ್ಳುತ್ತೀರಾ? ಎನ್ನುತ್ತಾ ಅನಿಶಾ ಮೋದಿಯವರ ಕ್ರೀಡೆ, ಅಧ್ಯಯನ ಮತ್ತು ಆಸಕ್ತಿ ಹೊಂದಿರುವ ಕ್ಷೇತ್ರ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾಳೆ. ಅಲ್ಲದೇ ನೀವು ಗುಜರಾತಿನವರು ಭಾರತದ ರಾಷ್ಟ್ರಪತಿ ಯಾವಾಗ ಆಗುತ್ತೀರಾ ಎಂಬ ಪ್ರಶ್ನೆಯನ್ನು ಸಹ ಕೇಳಿದ್ದಾಳೆ. ಇದನ್ನೂ ಓದಿ:ಸರ್ಕಾರ ಸಾರ್ವಜನಿಕ ಗಣೇಶೋತ್ಸವದ ನಿಷೇಧವನ್ನು ಹಿಂಪಡೆಯಬೇಕು: ಶ್ರೀರಾಮಸೇನೆ

Comments

Leave a Reply

Your email address will not be published. Required fields are marked *