ಪ್ರತೀಕ್ ಶೆಟ್ಟಿ ದೊಡ್ಡ ಡ್ರಗ್ಸ್ ಪೆಡ್ಲರ್ ಆಗಿದ್ದ: ಅಲೋಕ್ ಕುಮಾರ್

– ದೊಡ್ಡ ಸೆಲೆಬ್ರಿಟಿಗಳಿಗೆ ಕೊಕೇನ್ ಮಾರಾಟ ಮಾಡುತ್ತಿದ್ದ

ಬೆಂಗಳೂರು: ಸ್ಯಾಂಡಲ್‍ವುಡ್‍ಗೆ ಡ್ರಗ್ ಮಾಫಿಯಾ ನಂಟು ಇರೋದು ಸಿಸಿಬಿ ತನಿಖೆಯಿಂದ ಗೊತ್ತಾಗುತ್ತಿದೆ. ಇದರ ನಡುವೆಯೇ ಈ ಹಿಂದೆಯೇ ಪೆಡ್ಲರ್ ಪ್ರತೀಕ್ ಶೆಟ್ಟಿಯನ್ನು ಅರೆಸ್ಟ್ ಮಾಡಿದ್ದೇವು ಎಂದು ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅಲೋಕ್ ಕುಮಾರ್, 2018ರಲ್ಲೇ ಡ್ರಗ್ ಪೆಡ್ಲರ್ ಪ್ರತೀಕ್ ಶೆಟ್ಟಿ ಬಂಧನವಾಗಿತ್ತು. ಆದರೆ ಪ್ರತಿಕ್ ಶೆಟ್ಟಿ ಮತ್ತು ಕಾರ್ತಿಕ್ ರಾಜ್ ನಂಟಿನ ಬಗ್ಗೆ ಮಾಹಿತಿ ಲಭ್ಯವಾಗಿರಲಿಲ್ಲ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ. ಸದ್ಯ ಸಿಸಿಬಿ ಪೊಲೀಸರ ವಶದಲ್ಲಿರುವ ಕಾರ್ತಿಕ್ ರಾಜ್ ಮತ್ತು ಪೆಡ್ಲರ್ ಪ್ರತೀಕ್ ಶೆಟ್ಟಿ ಸೇರಿ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಪತ್ರೀಕ್ ಬಂಧನ ವೇಳೆ ಆಫ್ರಿಕನ್ ಪೆಡ್ಲರ್ ಒಬ್ಬನಿಂದ ಆತ ಡ್ರಗ್ಸ್ ಪಡೆಯುತ್ತಿದ್ದ. ಆತನ ಮೂಲಕ ನಗರದ ಒಳ್ಳೆ ಮನೆತನದ ಹುಡುಗಿಯರು, ಸೆಲೆಬ್ರಿಟಿಗಳು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು. ಈ ಬಗ್ಗೆ ಮಾಹಿತಿ ಸಿಕ್ಕ ವೇಳೆ ನಾವು ವಿದ್ಯಾರ್ಥಿಗಳು, ಸೆಲೆಬ್ರಿಟಿಗಳು, ಉದ್ಯಮಿಗಳಿಗೆ ಡ್ರಗ್ಸ್ ಕುರಿತು ಎಚ್ಚರಿಕೆ ನೀಡಿದ್ದೇವು. ಬಂಧಿತರ ವಿರುದ್ಧ ಕಲಂ 27ರ ಅನ್ವಯ ಪ್ರಕರಣವನ್ನು ದಾಖಲಿಸಿದ್ದೇವು ಎಂದು ಹೇಳಿದ್ದಾರೆ.

ಪ್ರೀತಿಕ್ ಶೆಟ್ಟಿ ಅಂಡ್ ಗ್ಯಾಂಗ್ ಇಂದಿರಾ ನಗರ, ಎಂ.ಜಿ ರೋಡ್ ಪಬ್ ಗಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿತ್ತು. ಆದರೆ ಕೆಲ ವಿಚಾರಗಳು ನಮ್ಮ ಗಮನಕ್ಕೆ ಬಂದರೂ ಅದನ್ನು ಸಾಬೀತು ಪಡಿಸಲು ನಮಗೇ ಸೂಕ್ತ ಸಾಕ್ಷಿ ಲಭ್ಯವಾಗಲಿಲ್ಲ. ಆದ್ದರಿಂದ ನಾವು ಅದನ್ನು ಬಹಿರಂಗವಾಗಿ ಪ್ರಸ್ತಾಪ ಮಾಡಿರಲಿಲ್ಲ. ಪ್ರತೀಪ್ ಶೆಟ್ಟಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ, ಕೆಲ ಗಣ್ಯರ ಜೊತೆ ಸಂಪರ್ಕವನ್ನು ಹೊಂದಿದ್ದ. ಆತನ ಬಂಧನದ ಬಳಿಕ ಡ್ರಗ್ಸ್ ದಂಧೆ ನಿಯಂತ್ರಣಕ್ಕೆ ಬಂದಿತ್ತು. ಸದ್ಯ ಪ್ರತಿಕ್ ಶೆಟ್ಟಿ ಮತ್ತು ಕಾರ್ತಿಕ್ ರಾಜ್ ನಂಟಿನ ಬಗ್ಗೆ ಮಾಹಿತಿ ಲಭ್ಯವಾಗಿರಲಿಲ್ಲ. ನಾವು ಯಾವುದೇ ಪ್ರಕರಣದಲ್ಲಿ ಸಾಕ್ಷಿ ಸಂಗ್ರಹಿಸದೆ ಅವರ ಹೆಸರು ಬಹಿರಂಗಗೊಳಿಸುವಂತಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *