ಪೋಷಕರನ್ನು ನೆನೆದು ರಾಗಿಣಿ ದ್ವಿವೇದಿ ಕಣ್ಣೀರು

ಬೆಂಗಳೂರು: ಮಧ್ಯರಾತ್ರಿ ನಗರದ ಡೈಲಿ ಸರ್ಕಲ್ ನಲ್ಲಿರುವ ಮಹಿಳಾ ಸಾಂತ್ವನ ಕೇಂದ್ರಕ್ಕೆ ಪೋಷಕರು ಆಗಮಿಸಿದ್ದ ವಿಷಯ ಕೇಳಿ ನಟಿ ರಾಗಿಣಿ ದ್ವಿವೇದಿ ಕಣ್ಣೀರು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಶುಕ್ರವಾರ ರಾಗಿಣಿ ನಿವಾಸದ ಮೇಲೆ ದಾಳಿ ನಡೆಸಿದ್ದು ಅಧಿಕಾರಿಗಳು ವಿಚಾರಣೆಗಾಗಿ ನಟಿಯನ್ನ ಸಿಸಿಬಿ ಕಚೇರಿಗೆ ಕರೆ ತಂದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ, ರಾತ್ರಿ ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಲಾಗಿತ್ತು. ಮಧ್ಯರಾತ್ರಿ ರಾಗಿಣಿ ಭೇಟಿ ಮಾಡಲು ಪೋಷಕರು ದೌಡಾಯಿಸಿದ್ದು, ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಂದು ಗೇಟ್‍ನಲ್ಲಿ ಕಾದು ನಿಂತಿದ್ದರು. ನಟಿ ರಾಗಿಣಿ ತಾಯಿ ರೋಹಿಣಿ ದ್ವಿವೇದಿ ಮತ್ತು ತಂದೆ ರಾಕೇಶ್ ದ್ವಿವೇದಿ ಸಾಂತ್ವನ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲದೇ ಮಗಳು ರಾಗಿಣಿಗಾಗಿ ಊಟಕ್ಕಾಗಿ ಪಾಸ್ತಾ, ನೀರಿನ ಬಾಟಲ್ ಹಾಗೂ ಬಟ್ಟೆ ತಂದಿದ್ದರು. ಆದ್ರೆ ಅಧಿಕಾರಿಗಳು ಭೇಟಿಗೆ ಅನುಮತಿ ನೀಡದ ಹಿನ್ನೆಲೆ ಹಿಂದಿರುಗಿದ್ದರು. ಇದನ್ನೂ ಓದಿ: ಎರಡು ಬಾರಿ ಎಂಡಿಎಂಎ ಡ್ರಗ್ ಬಳಕೆ- ರಾಗಿಣಿ ತಪ್ಪೊಪ್ಪಿಗೆ!

ಇಂದು ಬೆಳಗ್ಗೆ ಮಗಳನ್ನ ಭೇಟಿಯಾಗಿ ರೋಹಿಣಿ ದ್ವಿವೇದಿ ಅವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಮಧ್ಯರಾತ್ರಿ ಬಂದು ಹೋಗಿರುವ ವಿಷಯ ತಿಳಿದು ರಾಗಿಣಿ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ. ಇಂದು ಸಹ ರಾಗಿಣಿ ಅವರನ್ನ ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ. ಇದನ್ನೂ ಓದಿ: ಸಿಸಿಬಿ ಪಂಜರದಲ್ಲಿ ತುಪ್ಪದ ಬೆಡಗಿ- ಅರೆಸ್ಟ್ ಆದ್ರೂ ಕಮ್ಮಿಯಾಗದ ಚಾರ್ಮಿಂಗ್– ಕಿಟಕಿ ಮೂಲಕ ಫ್ಲೈಯಿಂಗ್ ಕಿಸ್

Comments

Leave a Reply

Your email address will not be published. Required fields are marked *