ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಸೋಂಕಿತ- 3 ಪೊಲೀಸ್ ಸಿಬ್ಬಂದಿಗೆ ಕ್ವಾರಂಟೈನ್

ಧಾರವಾಡ: ರೋಗಿ ಸಂಖ್ಯೆ-3397 47 ವರ್ಷ ಪುರುಷನಿಗೆ ಮೇ 31 ರಂದು ಕೊರೊನಾ ಪಾಸಿಟಿವ್ ಖಚಿತವಾಗಿತ್ತು. ಈತನ ಸಂಪರ್ಕಕ್ಕೆ ಬಂದಿದ್ದ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.

ಸೋಂಕಿತ ವ್ಯಕ್ತಿ ಜಿಲ್ಲೆಯ ಕಲಘಟಗಿ ತಾಲೂಕಿನ ಬಿ.ಗುಡಿಹಾಳ ಗ್ರಾಮದ ನಿವಾಸಿಯಾಗಿದ್ದು, ಲಾಕ್‍ಡೌನ್ ಅವಧಿಯಲ್ಲಿ ಈತ ಬಾಡಿಗೆ ಬೊಲೆರೋ ವಾಹನದ ಮೂಲಕ ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿಯ ತರಕಾರಿ ಮಾರುಕಟ್ಟೆಗೆ 7-8 ಬಾರಿ ಹೋಗಿ ಬಂದಿದ್ದ. ಬಳಿಕ ಬಿ.ಗುಡಿಹಾಳದಿಂದ ಗ್ರಾಮದ ವ್ಯಕ್ತಿಯೊಬ್ಬರ ಶವಸಂಸ್ಕಾರ ಕಾರ್ಯದಲ್ಲಿ ಭಾಗಿಯಾಗಿದ್ದ.

ಸೋಂಕಿತ ವ್ಯಕ್ತಿ ಮಗನೊಂದಿಗೆ ದ್ವಿಚಕ್ರ ವಾಹನದ ಮೂಲಕ ಮಿಶ್ರಿಕೋಟಿಯಲ್ಲಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಿ ಮನೆಗೆ ಮರಳಿರುತ್ತಾನೆ. ಅಲ್ಲದೇ ಪ್ರಕರಣವೊಂದಕ್ಕೆ ಸಂಬಂಧಿಸಿ ಕಲಘಟಗಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ. ಈ ಹಿನ್ನೆಲೆ ಕಲಘಟಗಿ ಪೊಲೀಸ್ ಠಾಣೆಯ ಇಬ್ಬರು ಮುಖ್ಯ ಪೇದೆ ಮತ್ತು ಓರ್ವ ಪೇದೆಗೆ ಕೂಡಾ ಕ್ವಾರಂಟೈನ್ ಮಾಡಲಾಗಿದೆ.

Comments

Leave a Reply

Your email address will not be published. Required fields are marked *