ಪೊಲೀಸ್ ಠಾಣೆಗೆ ಬಂದು ಸೆಲ್‍ನಲ್ಲಿ ಕುಳಿತ ಹಾವು ಸೆರೆ

ಗದಗ: ವಿಷಕಾರಿ ಹಾವೊಂದು ಠಾಣೆಯನ್ನು ಒಳಪ್ರವೇಶಿಸಿ ಆರೋಪಿಗಳನ್ನು ಇರಿಸುವ ಸೆಲ್‍ನಲ್ಲಿ ಅವಿತು ಕೂತ ಘಟನೆ ನಗರದ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಠಾಣೆಯಲ್ಲಿ ಆರೋಪಿಗಳನ್ನು ಇರಿಸುವ ಸೆಲ್ ಪಕ್ಕದಲ್ಲಿ ‘ಹುರುಪಂಜರ್’ ಎಂಬ ಜಾತಿಯ ವಿಷಕಾರಿ ಹಾವು ಕಂಡಿದೆ. ಇದನ್ನು ಪೇದೆಯೊಬ್ಬರು ನೋಡಿ ಗಾಬರಿಗೊಂಡಿದ್ದಾರೆ. ಕೂಡಲೇ ಸ್ನೇಕ್ ರೆಹಮಾನ್ ಗೆ ಕರೆ ಮಾಡಿದ್ದಾರೆ. ಸ್ನೇಕ್ ರೆಹಮಾನ್ ಹಾಗೂ ಮಗ ತೌಶೀಫ್ ಇಬ್ಬರು ಕಾರ್ಯಚರಣೆ ನಡೆಸಿ ಹಾವನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ. ಇದನ್ನೂ ಓದಿ: ಸಚಿವೆ, ಶಾಸಕರ ಸಭೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ – 1 ಗಂಟೆಯಲ್ಲಿ 4 ಬಾರಿ ಕೈಕೊಟ್ಟ ಕರೆಂಟ್

ಹಾವನ್ನು ಹಿಡಿಯುವ ವೇಳೆ ಸುಮಾರು ಅರ್ಧ ಗಂಟೆ ಸಿಗದೇ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳಲು ಯತ್ನಿಸಿದೆ. ಅರ್ಧ ಗಂಟೆಗಳ ನಂತರ ಕೊನೆಗೂ ಸೆಲ್‍ನಲ್ಲಿ ಸ್ನೇಕ್ ಸೆರೆ ಸಿಕ್ಕಿದೆ. ಹಾವು ಸಿಕ್ಕ ನಂತರ ಪೊಲೀಸ್ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸುಮಾರು 5 ಸಅಡಿ ಉದ್ದವಿದ್ದ ಹಾವು ಪೊಲೀಸರಲ್ಲಿ ಆತಂಕ ಮೂಡಿಸಿತ್ತು. ನಂತರ ಸ್ನೇಕ್ ರೆಹಮಾನ್ ಅವರು ಹಿಡಿದು ಸುರಕ್ಷಿತವಾಗಿ ನಾರಾಯಣಪುರ ರಸ್ತೆಯ ಗದ್ದಿಹಳ್ಳದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

Comments

Leave a Reply

Your email address will not be published. Required fields are marked *