ಪೊಲೀಸ್ ಕೈಗೆ ಮಗುವನ್ನು ನೀಡಿ ಮತದಾನ ಮಾಡಿದ ಮಹಿಳೆ- ಮಾನವೀಯತೆ ಮೆರೆದ ಪೇದೆ

ಚೆನ್ನೈ: ಮತದಾನ ಮಾಡಲು ತಾಯಿ ಒಳಗಡೆ ಹೋದಾಗ ಪೊಲೀಸ್ ಮಗುವನ್ನು ಜೋಪಾನವಾಗಿ ನೋಡಿಕೊಂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಿನ್ನೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ತಾಯಿಯೊಬ್ಬರು ತನ್ನ ಕಂದಮ್ಮನನ್ನು ಪೊಲೀಸ್ ಕೈಗೆ ಇಟ್ಟು ಮತದಾನ ಮಾಡಲು ಒಳಗೆ ಹೋಗಿದ್ದರು. ಈ ವೇಳೆ ಪೊಲೀಸ್ ಪೇದೆ ಮಗುವನ್ನು ಜೋಪಾನವಾಗಿ ನೋಡಿಕೊಂಡಿದ್ದಾರೆ. ಪೊಲೀಸ್ ಪೇದೆ ಮಗುವನ್ನು ಹಿಡಿದು ನಿಂತಿರುವ ದೃಶ್ಯವನ್ನು ಅಲ್ಲೇ ಇರುವವರು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಪೊಲೀಸ್ ಪೇದೆಯ ಮಾನವೀಯತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಯಿ ವೋಟ್ ಮಾಡಲು ಬಂದ ವೇಳೆ ತಮ್ಮ ಒಂದು ತಿಂಗಳ ಮಗವನ್ನು ಸಿಬ್ಬಂದಿ ಬಳಿಕೊಟ್ಟು ಮತಗಟ್ಟೆ ಒಳಗೆ ಹೋಗಿದ್ದಾರೆ. ತಾಯಿ ಬರುವರೆಗೂ ಜೋಪಾನವಾಗಿ ನೋಡಿಕೊಂಡಿದ್ದಾರೆ. ಈ ದೃಶ್ಯ ಮನ ಮುಟ್ಟುವಂತಿದೆ ಎಂದು ಬರೆದುಕೊಂಡು ಫೋಟೋವನ್ನು ಆಂಧ್ರಪ್ರದೇಶದ ಪೊಲೀಸ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *