ಪೊಲೀಸ್ ಅಧಿಕಾರಿ ಮುಖವಾಡ ಧರಿಸಿ ವಂಚಿಸುತ್ತಿದ್ದ ವ್ಯಕ್ತಿ ಅರೆಸ್ಟ್

-ಸ್ಥಳ, ಫೋನ್ ನಂಬರ್ ಬದಲಾಯಿಸಿ ತಪ್ಪಿಸಿಕೊಳ್ಳುತ್ತಿದ್ದ

ನವದೆಹಲಿ: ಉತ್ತರ ಪ್ರದೇಶದಲ್ಲಿ ನಾನು ಪೊಲೀಸ್ ಅಧಿಕಾರಿಯಾಗಿದ್ದೇನೆ ಎಂದು ಮುಖವಾಡ ಹಾಕಿ ಮಹಿಳೆಯರನ್ನು ಬಲೆಗೆ ಬೀಳಿಸಿಕೊಂಡು ವಂಚನೆ, ಅತ್ಯಾಚಾರ ಮಾಡುತ್ತಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಸಂದೀಪ್(28) ಕುಮಾರ್ ಎಂದು ಗುರುತಿಸಲಾಗಿದೆ. ಈತ ಕೆಲವು ಮಹಿಳೆಯರೊಂದಿಗೆ ಸಂಪರ್ಕದಲ್ಲಿದ್ದಾನೆ. ಆಗಾಗ್ಗೆ ಎನ್‍ಸಿಆರ್-ದೆಹಲಿಯ ಬಾರ್‍ಗಳಿಗೆ ಭೇಟಿ ನೀಡುತ್ತಿದ್ದನು. ಪೊಲೀಸ್ ಎಂದು ಹೇಳಿ ಮಹಿಳೆಯರನ್ನು ಬಲೆಗೆ ಬೀಳಿಸಿಕೊಂಡು ವಂಚಿಸುತ್ತಿದ್ದನು.

ಪಹರ್‍ಗಂಜ್ ಪ್ರದೇಶದ ಹೋಟೆಲ್‍ವೊಂದರಲ್ಲಿ ಮಹಿಳೆಯೊಬ್ಬರ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಸೆಪ್ಟೆಂಬರ್ 6 ರಂದ ಪಹರ್‍ಗಂಜ್ ಪೊಲೀಸ್ ಠಾಣೆಗೆ ಕರೆ ಬಂದಿತು. ಆ ಕರೆಯ ಹೇಳಿಕೆಯ ಮೇರೆಗೆ ಐಪಿಸಿಯ ಸೆಕ್ಷನ್ 376 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿತ್ತು.

ಪೊಲೀ ತನಿಖೆಯಲ್ಲಿ ಹೋಟೆಲ್ ಬುಕ್ ಮಾಡಲು ಆರೋಪಿಗಳು ಬಳಸಿದ ಗುರುತು ನಕಲಿ ಎಂದು ತಿಳಿದುಬಂದಿದೆ. ಹಲವಾರು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದ್ದೇವೆ. ತಾಂತ್ರಿಕ ತಜ್ಞರಿಂದ ಕರೆ ವಿವರ ದಾಖಲೆಗಳನ್ನು ಪಡೆದುಕೊಂಡೆವು. ಆರೋಪಿ ತನ್ನ ಮೊಬೈಲ್ ಸಂಖ್ಯೆ ಮತ್ತು ಸ್ಥಳಗಳನ್ನು ಆಗಾಗ್ಗೆ ಬದಲಾಯಿಸುತ್ತಿರುವುದರಿಂದ ಪೊಲೀಸ್ ಬಲೆಯಿಂದ ತಪ್ಪಿಸಿಕೊಳ್ಳುತ್ತಿದ್ದನು ಎಂದು ಕೇಂದ್ರ ದೆಹಲಿಯ ಡಿಸಿಪಿ ಸಂಜಯ್ ಭಾಟಿಯಾ ಹೇಳಿದ್ದಾರೆ.

ಆರೋಪಿಯನ್ನು ಹಿಡಿಯುವ ಸಲುವಾಗಿ ಅವನ ಫೋಟೋವನ್ನು ಬಾರ್‍ಗಳಲ್ಲಿ ತೋರಿಸಲಾಯಿತು. ಕೊನೆಗೆ ಬಾರ್‍ನಲ್ಲಿ ಕೆಲಸ ಮಾಡುವವರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಲಾಯಿತು.

ವಿಚಾರಣೆಯಲ್ಲಿ ಆರೋಪಿ ಮೀರತ್ ಜಿಲ್ಲೆಯ ಬಹದ್ದೂರ್‍ಗ ನಿವಾಸಿ ಎಂದು ತಿಳಿದುಬಂದಿದೆ. ಈತನು 2 ಮದುವೆಯಾಗಿದ್ದಾನೆ. ಒಬ್ಬ ಮಗನು ಇದ್ದಾನೆ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *