ಅಂದರ್ ಬಾಹರ್ ಆಡುತ್ತಿದ್ದಾಗ ಸಿಕ್ಕಿ ಬಿದ್ರು ಪೊಲೀಸರು – ಹಿಡಿಯುವಷ್ಟರಲ್ಲಿ ಪರಾರಿ

ಧಾರವಾಡ: ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಬೇಕಾದ ಪೊಲೀಸರೇ ಅಂದರ್ ಬಾಹರ್ ಆಡುತ್ತಿದ್ದಾಗ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

ಧಾರವಾಡ ತಾಲೂಕಿನ ಗರಗ ಪೊಲೀಸ್ ಠಾಣಾ ವ್ಯಾಪ್ತಿಯ ಮುಮ್ಮಿಗಟ್ಟಿ ಬಳಿಯ ನೀಲಕಮಲ್ ಹೋಟೆಲ್ ಹತ್ತಿರದ ಉಡುಪಿ ಹೋಟೆಲ್ ಹಿಂಭಾಗದ ಕೋಣೆಯೊಂದರಲ್ಲಿ 10 ಜನ ಪೊಲೀಸರು ಜೂಜು ಆಡುತ್ತಿದ್ದ ವೇಳೆ ಧಾರವಾಡ ಸಿಎಸ್‍ಪಿ ತಂಡ ದಾಳಿ ನಡೆಸಿದೆ. ಇನ್ನೇನು ಅವರನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಹತ್ತೂ ಜನ ಪೊಲೀಸರು ಪರಾರಿಯಾಗಿದ್ದಾರೆ.

ಗರಗ ಗ್ರಾಮದ ಅನೀಲ್ ಉಳವಣ್ಣವರ್ ನನ್ನು ಗರಗ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನೀಲ್ ಉಳವಣ್ಣವರ ಜೊತೆ ಸೇರಿಕೊಂಡು ಗರಗ ಠಾಣೆಯ ಪೊಲೀಸರೇ ಆದ ಆತ್ಮಾನಂದ ಬೆಟಗೇರಿ, ಮಂಜುನಾಥ ನಾಗಾವಿ, ಸಶಸ್ತ್ರ ಮೀಸಲು ಪಡೆಯ ಪೊಲೀಸರಾದ ಮೈನುದ್ದೀನ್ ಮುಲ್ಲಾ, ಶಂಕರ ಭಜಂತ್ರಿ, ಬಸವರಾಜ ಮಠದ, ವರ್ಧಮಾನ ಹಟಿಂಗಳಿ, ಆರ್.ಎಸ್.ಜಂಗನವರ, ಹುಲಿಗೆಪ್ಪ ದೊಡಮನಿ, ಮಲ್ಲಿಕಾರ್ಜುನ ಶಿರೂರ ಹಾಗೂ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸ್ ಪೇದೆ ಸೈಯದಸಾಬ್ ಇಸ್ಮಾಯಿಲ್ ಎಂಬುವವರು ಅಂದರ್ ಬಾಹರ್ ಆಡುತ್ತಿದ್ದರು.

ಮಾಹಿತಿ ಮೇರೆಗೆ ಸ್ವತಃ ಡಿವೈಎಸ್‍ಪಿ ರವಿ ನಾಯಕ್ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಹತ್ತೂ ಜನ ಪೊಲೀಸರು ಪರಾರಿಯಾಗಿದ್ದಾರೆ. ಈ ವೇಳೆ 35 ಸಾವಿರ ರೂಪಾಯಿ, 1 ಮೊಬೈಲ್ ಹಾಗೂ 5 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

Comments

Leave a Reply

Your email address will not be published. Required fields are marked *