ಪೊಲೀಸರಿಂದ ತಪ್ಪಿಸಿಕೊಳ್ಳಲು ಪತ್ನಿಯ ಪೆಟಿಕೋಟನ್ನೇ ಮಾಸ್ಕ್ ಮಾಡ್ಕೊಂಡ!

– ಬೈಕ್ ನಿಲ್ಲಿಸಿ ಬ್ಯಾಗಿಂದ ಪೆಟಿಕೋಟ್ ತೆಗೆದು ಕಟ್ಟಿಕೊಂಡ

ಭೋಪಾಲ್: ಚೀನಿ ವೈರಸ್ ಕೋವಿಡ್ 19 ನಮ್ಮ ದೇಶಕ್ಕೂ ಒಕ್ಕರಿಸಿದ ಬಳಿಕ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಕಾಲಿಟ್ಟರೆ ದಂಡ ಕೂಡ ಬೀಳುತ್ತದೆ. ಅಂತೆಯೇ ಮಾಸ್ಕ್ ಧರಿಸದೇ ಬಂದ ವ್ಯಕ್ತಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ತನ್ನ ಪತ್ನಿಯ ಪೆಟಿಕೋಟನ್ನೇ ಮಾಸ್ಕ್ ಮಾಡಿಕೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಕರ್ನಾಟಕದಂತೆ ಮಧ್ಯಪ್ರದೇಶದಲ್ಲೂ ಭಾನುವಾರ ಕಟ್ಟುನಿಟ್ಟಿನ ಲಾಕ್‍ಡೌನ್ ಹೇರಲಾಗಿತ್ತು. ಕೊರೊನಾ ಚೈನ್ ಬ್ರೇಕ್ ಮಾಡಲು ಲಾಕ್‍ಡೌನ್ ಒಂದೇ ಪರಿಹಾರ ಎಂದು ಅಲ್ಲಿನ ಸರ್ಕಾರ ಭಾನುವಾರ ಸಂಪೂರ್ಣ ಲಾಕ್‍ಡೌನ್ ಮಡಿ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲಾ ಕಡೆ ತಪಾಸಣೆಗಳನ್ನು ಕೂಡ ನಡೆಸುತ್ತಿದ್ದರು.

ಮಧ್ಯಪ್ರದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಮಾಸ್ಕ್ ಬಳಸುವಂತೆ ಕೆಲವೊಂದು ಮಾರ್ಗಸೂಚಿಗಳನ್ನು ಕೂಡ ಹೊರಡಿಸಿತ್ತು. ಆದರೆ ಸರ್ಕಾರದ ನಿಯಮವನ್ನು ವ್ಯಕ್ತಿಯೊಬ್ಬರು ಉಲ್ಲಂಘಿಸಿ ನಗೆಪಾಟಲಿಗೀಡಾಗಿದ್ದಾರೆ.

ಮಾಸ್ಕ್ ಹಾಕದೆ ಬಂದವರನ್ನು ಅಡ್ಡಗಟ್ಟಿ ದಂಡ ವಿಧಿಸುತ್ತಿದ್ದರು. ಈ ಮಧ್ಯೆ ದಮೋಹ್ ಜಿಲ್ಲೆಯ ಬಂದಕ್ಪುರ ಎಂಬಲ್ಲಿ ಕೂಡ ಪೊಲೀಸರು ಭಾನುವಾರ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಮಾಸ್ಕ್ ಧರಿಸದೇ ಹೋಗುತ್ತಿದ್ದವರು ಪೊಲೀಸರ ಕಣ್ಣಿಗೆ ಬಿದ್ದಿದ್ದಾರೆ.

ಪೊಲೀಸರ ಮುಂದೆಯೇ ಬೈಕಿನಲ್ಲಿ ಹೋಗುತ್ತಿದ್ದವನು ಮಾಸ್ಕ್ ಧರಿಸಿರಲಿಲ್ಲ. ಅಲ್ಲದೆ ಆತ ಪೊಲೀಸರು ಮಾಸ್ಕ್ ಹಾಕದವರಿಗೆ ದಂಡ ವಿಧಿಸುತ್ತಿರುವುದನ್ನು ನೋಡಿದ್ದಾನೆ. ಪರಿಣಾಮ ಪೊಲೀಸರು ನನಗೂ ಫೈನ್ ಹಾಕುತ್ತಾರೆ ಎಂದು ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬೈಕ್ ನಿಲ್ಲಿಸಿದ ತಕ್ಷಣ ತನ್ನ ಬ್ಯಾಗಿನಿಂದ ಪತ್ನಿಯ ಪೆಟಕೋಟ್ ತೆಗೆದುಕೊಂಡು ಬಾಯಿ ಹಾಗೂ ಮೂಗು ಮುಚ್ಚಿಕೊಂಡಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

Comments

Leave a Reply

Your email address will not be published. Required fields are marked *