ಪೈಲಟ್ ಆಗುವ ಆಸೆ ಹೊಂದಿರೋ ಬಾಲಕನ ಆಸೆಗೆ ಸಾಥ್ ನೀಡಿದ್ರು ರಾಹುಲ್

ತಿರುವನಂತಪುರ: ಪೈಲಟ್ ಆಗುವ ಕನಸು ಹೊಂದಿರುವ ಕೇರಳದ 9 ವರ್ಷದ ಬಾಲಕನ ಆಸೆಗೆ ರಾಹುಲ್ ಗಾಂಧಿ ಒಂದು ಹೆಜ್ಜೆ ಹತ್ತಿರವಾಗುವಂತೆ ಮಾಡಿದ್ದಾರೆ. ಸದ್ಯ ಈ ಕುರಿತಂತೆ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವೈರಲ್ ಆಗುತ್ತಿರುವ ವೀಡಿಯೋದಲ್ಲಿ, ಪೈಲಟ್ ಆಗಬೇಕೆಂದು ಆಸೆ ಹೊಂದಿರುವ ಬಾಲಕನಿಗೆ ಫ್ಲೈಟ್ ಕಾಕ್‍ಪಿಟ್‍ನ ಕಾರ್ಯವಿಧಾನವನ್ನು ವಿವರಿಸಲಾಗಿದೆ. ರಾಹುಲ್ ಗಾಂಧಿ ಎರಡು ದಿನ ಕೇರಳ ಚುನಾವಣಾ ಪ್ರಚಾರಕ್ಕಾಗಿ ತೆರಳಿದ್ದ ವೇಳೆ ಬಾಲಕನನ್ನು ಕಣ್ಣೂರು ಜಿಲ್ಲೆಯ ಕೀಝುರ್ಕುವಿನ ಸ್ಥಳೀಯ ಚಹಾ ಅಂಗಡಿಯಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಬಾಲಕನು ಮಾತನಾಡಿದ ಇಂಗ್ಲೀಷ್ ಹಾಗೂ ಹಿಂದಿ ಭಾಷೆಯನ್ನು ನೋಡಿ ಮನಸೋತು, ಬಾಲಕನಿಗೆ ನಿನ್ನ ಆಸೆ ಏನು ಎಂದು ಕೇಳಿದ್ದಾರೆ.

ಆಗ ಬಾಲಕ ನಾನು ಹಾರಾಡಬೇಕು. ನಾನು ಪೈಲಟ್ ಆಗುವ ಕನಸನ್ನು ಹೊಂದಿದ್ದೇನೆ ಎಂದು ತಿಳಿಸಿದ್ದಾನೆ. ಹೀಗಾಗಿ ಮರುದಿನವೇ ರಾಹುಲ್ ಗಾಂಧಿ ಫ್ಲೈಟ್ ವ್ಯವಸ್ಥೆಗೊಳಿಸಿ ಬಾಲಕ ಹಾಗೂ ಆತನ ತಂದೆಯನ್ನು ಬರಮಾಡಿಕೊಂಡಿದ್ದಾರೆ.

ವೀಡಿಯೋದಲ್ಲಿ ಬಾಲಕ ಕುಳಿತುಕೊಂಡಿದ್ದು, ಮಹಿಳಾ ಪೈಲಟ್ ವಿಮಾನವನ್ನು ಹಾರಿಸುವ ಕಾರ್ಯವಿಧಾನವನ್ನು ವಿವರಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ವೀಡಿಯೋವನ್ನು ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದ್ವೈತ್, ಕನಸಿನ ಮೊದಲ ಹೆಜ್ಜೆ ಇಟ್ಟಿದ್ದಾನೆ. ಇದೀಗ ಸಮಾಜ ರಚಿಸುವುದು ನಮ್ಮ ಕರ್ತವ್ಯವಾಗಿದ್ದು, ಅವನಿಗೆ ಹಾರಲು ಅವಕಾಶ ನೀಡಲಾಗಿದೆ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

 

View this post on Instagram

 

A post shared by Rahul Gandhi (@rahulgandhi)

ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಹಲವಾರು ಕಾಮೆಂಟ್‍ಗಳು ಹರಿದುಬರುತ್ತಿದೆ.

Comments

Leave a Reply

Your email address will not be published. Required fields are marked *