ಪೂರ್ವ ಲಡಾಕ್ ಗಡಿಯಲ್ಲಿ ಗುಂಡಿನ ಸದ್ದು – ಇಂದು ಭಾರತ, ಚೀನಾ ನಡುವೆ ಮಹತ್ವದ ಸಭೆ

ಲಡಾಕ್: ಪೂರ್ವ ಲಡಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಇಂದು ಭಾರತ-ಚೀನಾ ಸೇನೆಗಳ ನಡುವೆ ಆರನೇ ಹಂತದ ಮಹತ್ವದ ಮಾತುಕತೆ ನಡೆಯಲಿದೆ. ಗಡಿಯಲ್ಲಿರುವ ಚುಶುಲ್ ಮತ್ತು ಮೊಲ್ಡೊ ಮೀಟಿಂಗ್ ಪಾಯಿಂಟ್ ನಲ್ಲಿ ಈ ಸಭೆ ನಡೆಯಲಿದೆ.

ಎರಡು ಸೇನೆಗಳ ಕಾರ್ಫ್ಸ್ ಕಮಾಂಡರ್ ಮಟ್ಟದ ಸಭೆ ಇದಾಗಿದ್ದು, ಭಾರತದ ಪರ ಲೆಫ್ಟಿನೆಂಟ್ ಜನರಲ್ ಹರೇಂದ್ರ ಸಿಂಗ್ ಭಾಗಿಯಾಗಲಿದ್ದಾರೆ. ಇದೇ ಮೊದಲ ಬಾರಿ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ನವೀನ್ ಶ್ರೀ ವಾಸ್ತವ ಹಾಗೂ ಗೃಹ ಇಲಾಖೆಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಇದನ್ನೂ ಓದಿ:

45 ವರ್ಷಗಳ ಬಳಿಕ ಗಡಿಯಲ್ಲಿ ಮೂರು ಬಾರಿ ಗುಂಡಿನ ಸದ್ದು ಮೊಳಗಿದ್ದು, ಎರಡು ಸೇನೆಯಿಂದ ಗುಂಡಿನ ಸದ್ದು ಮೊಳಗಿದೆ. ಪರಿಸ್ಥಿತಿ ನಿಯಂತ್ರಿಸಲು ಹಾಗೂ ಗಡಿಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಇಂದಿನ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಈ ಮಹತ್ವದ ಮಾತುಕತೆ ಹಿನ್ನೆಲೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸಿಡಿಎಸ್ ಬಿಪಿನ್ ರಾವತ್ ಭೂ ಸೇನೆ ಮುಖ್ಯಸ್ಥ ಎಂ.ಎಂ ನರವಾಣೆ ಚರ್ಚೆ ನಡೆಸಿದ್ದು ಪ್ರಮುಖ ಬೇಡಿಕೆಗಳ ಪಟ್ಟಿ ಮಾಡಿದ್ದು ಇದನ್ನು ಸಭೆಯಲ್ಲಿ ಪ್ರಸ್ತಾಪಿಸಲಿದ್ದಾರೆ. ಇದನ್ನೂ ಓದಿ: ಲಡಾಕ್ ಗಡಿಯಲ್ಲಿ ಉದ್ವಿಗ್ನತೆ- ಟ್ರಂಪ್ ಜೊತೆ ಮೋದಿ ಮಾತುಕತೆ ನಡೆಸಿಲ್ಲ

ಈಗಾಗಲೇ ಐದು ಸಭೆಗಳು ನಡೆದಿದ್ದು, ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಪ್ರತಿ ಬಾರಿ ಶಾಂತಿ ಕಾಪಡಲು ಒಪ್ಪುವ ಚೀನಾ ಸೇನೆ ಬಳಿಕ ಗಡಿಯಲ್ಲಿ ಯುದ್ಧೋನ್ಮಾದ ಪರಿಸ್ಥಿತಿ ನಿರ್ಮಾಣ ಮಾಡಲು ಪ್ರಯತ್ನ ಮಾಡುತ್ತಿದೆ. ಗುಂಡಿನ ದಾಳಿಯ ಬಳಿಕ ನಡೆಯುತ್ತಿರುವ ಮೊದಲ ಸಭೆ ಇದಾಗಿದ್ದು ಸಾಕಷ್ಟು. ಮಹತ್ವ ಪಡೆದುಕೊಂಡಿದೆ. ಇದನ್ನೂ ಓದಿ: ಚೀನಾ ಸಂಘರ್ಷದ ನಂತ್ರ ಲಡಾಕ್‍ಗೆ ಪ್ರಧಾನಿ ಮೋದಿ ದಿಢೀರ್ ಭೇಟಿ

Comments

Leave a Reply

Your email address will not be published. Required fields are marked *