ಪುತ್ರಿ ಸಮಿಶಾಗೆ ಹುಟ್ಟುಹಬ್ಬದ ಸಂಭ್ರಮ- ಕುಟುಂಬ ಸಮೇತರಾಗಿ ದೇವರ ದರ್ಶನ ಪಡೆದ ಶಿಲ್ಪಾ ಶೆಟ್ಟಿ

ಮುಂಬೈ: ಬಾಲಿವುಡ್ ಬೆಡಗಿ, ಮಂಗಳೂರು ಸುಂದರಿ ಶಿಲ್ಪಾ ಶೆಟ್ಟಿ ಪುತ್ರಿ ಸಮಿಶಾಳಿಗೆ ಮೊದಲ ವರ್ಷದ ಬರ್ತ್‍ಡೇ. ಈ ಹಿನ್ನೆಲೆಯಲ್ಲಿ ಸಿದ್ಧಿವಿನಾಯಕನ ದೇವಸ್ಥನಾಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.

ಶಿಲ್ಪಾ ಶೆಟ್ಟಿ ಅವರ ಪುತ್ರಿ ಸಮಿಶಾಗೆ ಫೆಬ್ರವರಿ 15ರಂದು ಮೊದಲ ವರ್ಷದ ಬರ್ತ್‍ಡೇ ಸಂಭ್ರಮವಾಗಿದೆ. ಮಗಳ ಹುಟ್ಟುಹಬ್ಬದ ನಿಮಿತ್ತ ದೇವರ ದರ್ಶನ ಪಡೆದಿದ್ದಾರೆ. ಈ ವೇಳೆ ಫೋಟೋ ಗ್ರಾಫರ್‍ಗಳ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿರುವ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಬಾಡಿಗೆ ತಾಯಿ ಮೂಲಕ 2020ರ ಫೆಬ್ರವರಿ 15ರಂದು ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಅವರು ಹೆಣ್ಣು ಮಗುವನ್ನು ಪಡೆದುಕೊಂಡಿದ್ದರು. ಮಗಳಿಗೆ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಲಾಗಿದೆ. ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಹೋಗಿದ್ದರು. ಶಿಲ್ಪಾ ಶೆಟ್ಟಿ ಅವರು ಮಗಳ ಸಲುವಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾಧ್ಯಮದ ಕ್ಯಾಮರಾಗಳಿಗೂ ಅವರು ಪೋಸ್ ನೀಡಿದ್ದಾರೆ. ಒಂದು ವರ್ಷದ ಪುಟಾಣಿ ಸಮಿಶಾಗೆ ಅಭಿಮಾನಿಗಳಿಂದ ಮತ್ತು ಸೆಲೆಬ್ರಿಟಿಗಳಿಂದ ಶುಭಾಶಯ ಹರಿದು ಬರುತ್ತಿದೆ.

 

View this post on Instagram

 

A post shared by Viral Bhayani (@viralbhayani)

ಪುತ್ರಿ ಸಮಿಶಾ ಹುಟ್ಟುಹಬ್ಬದ ಸಂಭ್ರಮ ಹಿನ್ನೆಲೆಯಲ್ಲಿ ಶಿಲ್ಪಾ ಶೆಟ್ಟಿ ಮುದ್ದಾದ ವೀಡಿಯೊವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ಗುಲಾಬಿ ಮತ್ತು ಬಿಳಿ ಉಡುಪು ತೊಟ್ಟಿರುವ ಸಮಿಶಾ ತೊದಲು ನುಡಿಯಲ್ಲಿ ಮಾತನಾಡುತ್ತಿದ್ದಾಳೆ. ಶಿಲ್ಪಾ ಶೆಟ್ಟಿ ಮಗುವಿನ ಬಳಿ ಸಮಿಶಾ ಯಾರ ಮಗು ಎಂದು ಕೇಳುವ ಪ್ರಶ್ನೆಗೆ ಪುಟ್ಟ ಕಂದಮ್ಮ ತೊದಲುತ್ತಲೇ ಮಮ್ಮಾ ಎಂದು ಹೇಳುತ್ತದೆ. ಈ ವೀಡಿಯೋ ಎಷ್ಟು ಮುದ್ದಾಗಿದೆ. ನಟ್ಟಿಗರು ಈ ವೀಡಿಯೋವನ್ನು ನೋಡಿ ಕಮೆಂಟ್‍ಗಳ ಸುರಿಮಳೆ ಗೈದಿದ್ದಾರೆ.

ಅಮ್ಮಾ ಎಂದು ನೀನು ಕರೆದಾಗ ನಾನು ತಿರುಗಿ ನೋಡಲು ಖುಷಿಯಾಗುತ್ತದೆ. ನಿನ್ನ ನೋಟ, ಹಲ್ಲು, ನೀನು ಹೇಳಿದ ಮೊದಲ ಪದ, ನಿನ್ನ ಮೊದಲ ಸ್ಮಲ್‍ಗೆ ಪ್ರತಿಯೊಂದು ನನಗೆ ವಿಶೇಷವಾಗಿದೆ. ನಮ್ಮ ಏಂಜಲ್ ಆಗಿರುವ ನಿನಗೆ ಮೊದಲ ವರ್ಷದ ಜನ್ಮದಿನದ ಶುಭಾಶಯಗಳು. ಈ ಹಿಂದಿನ ವರ್ಷದ ಪ್ರತಿದಿನ ನಮ್ಮ ಜೀವನದಲ್ಲಿ ಪ್ರೀತಿ, ಸಂತೋಷ ಮತ್ತು ಬೆಳಕನ್ನು ತಂದಿದ್ದೀಯಾ ನೀನು. ನಾವೆಲ್ಲರೂ ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ. ನೀನು ಆರೋಗ್ಯವಾಗಿರಬೇಕು ಎಂದು ಆಶೀರ್ವದಿಸಬೇಕೆಂದು ನಾನು ಪ್ರಾರ್ಥಿಸುತ್ತೇನೆ ಮಗಳೇ ಎಂದು ಬರೆದುಕೊಂಡು ವೀಡಿಯೋ ಶೇರ್ ಮಾಡಿದ್ದಾರೆ.

ಫಿಟ್ನೆಸ್ ಐಕಾನ್ ಶಿಲ್ಪಾ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ತಮ್ಮ ಕುಟುಂಬ, ಶೂಟಿಂಗ್‍ನ ವಿಚಾರವನ್ನೇಲ್ಲಾ ಶಿಲ್ಪಾ ಸಾಮಾಜಿಕ ಮಾಧ್ಯಮದ ಮೂಲಕ ತನ್ನ ಫ್ಯಾನ್ಸ್ ಜೊತೆ ಶೇರ್ ಮಾಡಿಕೊಳ್ಳುತ್ತಾರೆ. ಸಮಿಶಾ ಈ ವಿಡಿಯೋಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Comments

Leave a Reply

Your email address will not be published. Required fields are marked *