ಪುಟ್ಟ ಮಕ್ಕಳ ಗಣಪತಿ ಹಬ್ಬ – ಸೈಕಲಿನಲ್ಲಿ ತಂದು ವಿಸರ್ಜನೆ

ಮಡಿಕೇರಿ: ಗಣೇಶ ಹಬ್ಬ ಎಂದರೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಖುಷಿ. ಆನೆ ತಲೆಯ, ಡೊಳ್ಳು ಹೊಟ್ಟೆಯ ಗಣೇಶನನ್ನು ಹೊತ್ತು ಸಾಗುವ ಮೂಷಿಕ ಎಂದರೆ ಎಲ್ಲರಿಗೂ ಕುತೂಹಲ.

ಅಷ್ಟು ದೊಡ್ಡ ಗಣಪನನ್ನು ಇಷ್ಟು ಪುಟ್ಟ ಇಲಿಯು ಹೇಗೆ ಕರೆದೊಯ್ಯುತ್ತದೆ. ಮೂಷಿಕ ಹೇಗೆ ಗಣಪತಿ ದೇವರ ವಾಹನವಾಯಿತು ಎಂದೆಲ್ಲ ಮಕ್ಕಳು ದೊಡ್ಡವರಲ್ಲಿ ಪ್ರಶ್ನೆ ಕೇಳುವ ಮಕ್ಕಳು ಗಣೇಶ ಹಬ್ಬದ ದಿನವಾದ ಇಂದು ತಾವೇ ಸ್ವತಃ ಗಣಪತಿ ಮೂರ್ತಿಯನ್ನು ಜೆಡ್ಡಿಮಣ್ಣಿನಲ್ಲಿ ಮಾಡಿದ್ದಾರೆ. ಜೊತೆಗೆ ಮನೆಯ ಮುಂಭಾಗ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿ. ನಂತರ ಗ್ರಾಮದಲ್ಲಿ ಮಕ್ಕಳು ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಿದ್ದಾರೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಐವತ್ತೋಕ್ಲು ಗ್ರಾಮದ ಮೂರು ಪುಟ್ಟ ಮಕ್ಕಳಾದ ಬಬ್ಬಿರ ವರ್ಷ, ಬಬ್ಬಿರ ಮೊಣ್ಣಪ್ಪ ಮತ್ತು ಕಾರ್ಯಪ್ಪ ಪರಿಸರ ಸ್ಹೇಹಿ ಗಣಪತಿಯನ್ನು ಮಾಡಿ ಅದನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಮಾಡಿದ್ದಾರೆ. ನಂತರ ಸಂಜೆ ಸೈಕಲಿನಲ್ಲಿ ತೆರಳಿ ಗ್ರಾಮದ ಚಿಕ್ಕ ಕೊಳದಲ್ಲಿ ವಿಸರ್ಜನೆ ಮಾಡಿದ್ದಾರೆ. ಈ ಬಾರಿ ಕೊಡಗಿನಲ್ಲಿ ಅಗಿರುವ ಅನಾಹುತ, ಕೊರೊನಾ ಮಾಹಾಮಾರಿಯನ್ನು ಹೋಗಲಾಡಿಸು ಎಂದು ಪುಟಾಣಿಗಳು ಬೇಡಿಕೊಂಡು ಇದ್ದಾರೆ.

Comments

Leave a Reply

Your email address will not be published. Required fields are marked *