ಪಿಎಫ್‍ಐ ಯುವಕರ ತಂಡದಿಂದ ಸೋಂಕಿತ ಶವಗಳಿಗೆ ಗೌರವದ ಅಂತ್ಯಕ್ರಿಯೆ

ಬೆಂಗಳೂರು: ಮಹಾಮಾರಿ ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ಅತ್ಯಂತ ಭೀಕರವಾಗಿತ್ತು. ಈ ಹಿಂದೆ ಕೊರೊನಾದಿಂದ ಮೃತಪಟ್ಟರೆ ಜೆಸಿಬಿಯಿಂದ ಶವವನ್ನು ತಂದು, ಗುಂಡಿಗಳಿಗೆ ಎಳೆದು ತಂದು ಬಿಸಾಕುವ ಮೂಲಕ ನಿರ್ಲಕ್ಷ್ಯವಾಗಿ ಅಂತ್ಯಕ್ರಿಯೆ ಮಾಡಲಾಗುತ್ತಿತ್ತು. ಆದರೆ ಇದೀಗ ಕೊರೊನಾ ರೋಗಿಗಳಿಗೆ ಮರ್ಯಾದೆಯ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ.

ಹೌದು. ಫ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ದಿಂದ ಕೊರೊನಾದಿಂದ ಮೃತಪಟ್ಟವರ ಗೌರವಯುತವಾಗಿ ಅಂತ್ಯಸಂಸ್ಕಾರ ನಡೆಸುವ ಕಾರ್ಯ ಮಾಡುತ್ತಿದೆ. ಪಿಎಫ್‍ಐ ಯುವಕರ ತಂಡ ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡುತ್ತಿದೆ. ಈ ತಂಡ ಇದುವರೆಗೆ 47 ಶವಗಳನ್ನು ಕರ್ನಾಟಕದಲ್ಲಿ ಅಂತ್ಯಸಂಸ್ಕಾರ ಮಾಡಿದೆ.

ಈ ತಂಡ ಮಾಡುತ್ತಿರುವ ಕೆಲಸ ನೋಡಿದರೆ ಭಯನೂ ಆಗುತ್ತೆ. ಮನಸ್ಸು ಭಾರನೂ ಆಗುತ್ತೆ. ಕೊರೊನಾದಿಂದ ಸಾವನ್ನಪ್ಪಿದರೆ ಮನೆಯವರೇ ಹತ್ತಿರ ಬಾರದ ಪರಿಸ್ಥಿತಿಯಲ್ಲೂ ಅಪರಿಚಿತರ ಶವಕ್ಕೆ ಯುವಕರು ಹೆಗಲು ಕೊಡುವ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಮುನ್ನಚ್ಚರಿಕೆಯೊಂದಿಗೆ, ಪಿಪಿಇ ಕಿಟ್ ಧರಿಸಿ ಸೋಂಕಿತರ ಅಂತ್ಯಕ್ರಿಯೆ ಮಾಡಿದ್ದಾರೆ.

ಶಿವಮೊಗ್ಗ, ಬೆಂಗಳೂರು ಸೇರಿ ರಾಜ್ಯದ ನಾನಾ ಭಾಗದಲ್ಲಿ ಅಂತಿಮಸಂಸ್ಕಾರ ಮಾಡುತ್ತಿದ್ದಾರೆ. ಈ ತಂಡ ವೈಜ್ಞಾನಿಕವಾಗಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳ ಅಂತಿಮ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆದಿದೆ.

Comments

Leave a Reply

Your email address will not be published. Required fields are marked *