ಬೆಂಗಳೂರು: ಪಾದರಾಯನಪುರದ ಜೆಡಿಎಸ್ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕಂಟೈನ್‍ಮೆಂಟ್ ಝೋನ್‍ನಲ್ಲಿ ಓಡಾಡಿದ್ದ ಇಮ್ರಾನ್ ಪಾಷಾ ಅವರು ಶುಕ್ರವಾರ ಬೆಳ್ಳಗ್ಗೆ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು. ಸಂಜೆ ಬಂದ ರಿಪೋರ್ಟ್ ನಲ್ಲಿ ಸೋಂಕು ತಗುಲಿರುವುದು ಪತ್ತೆಯಾಗಿದೆ. ಹೀಗಾಗಿ ಇಮ್ರಾನ್ ಪಾಷ ಅವರ ಮನೆ ಇರುವ ಪಾದರಾಯನಪುರದ 13ನೇ ಕ್ರಾಸ್ ಅನ್ನು ಸೀಲ್‍ಡೌನ್ ಮಾಡಲಾಗಿದೆ. ಇದನ್ನೂ ಓದಿ: ಮಹಿಳೆಯರನ್ನ ಮುಂದೆ ಬಿಟ್ಟು ಪಾದರಾಯನಪುರದಲ್ಲಿ ಮತ್ತೆ ಗಲಾಟೆ

ಇಮ್ರಾನ್ ಪಾಷ ಅವರ ಪ್ರಾರ್ಥಮಿಕ ಸಂಪರ್ಕದಲ್ಲಿ ಪತ್ನಿ, ಮೂವರು ಮಕ್ಕಳು, ಇಬ್ಬರು ಕಾರ್ ಚಾಲಕರು, ಇಬ್ಬರು ಮನೆ ಕೆಲಸದವರು, ಏಳು ಜನ ಕಚೇರಿ ಕೆಲಸದವರು ಸೇರಿ ಒಟ್ಟು 21 ಜನರಿದ್ದರು. ಎಲ್ಲರನ್ನೂ ಕ್ವಾರಂಟೈನ್ ಮಾಡಲು ಸಿದ್ಧತೆ ನಡೆದಿದೆ.
ರಂಜಾನ್ ಹಬ್ಬದ ಪ್ರಯುಕ್ತ ಇಮ್ರಾನ್ ಪಾಷ ಅವರು ವಾರ್ಡಿನಲ್ಲಿ ಪ್ರತಿ ಮನೆಮನೆಗೆ ತೆರಳಿ ರೇಷನ್ ವಿತರಣೆ ಮಾಡಿದ್ದರು. ಸೀಲ್‍ಡೌನ್ ಆಗಿದ್ದ ಏರಿಯಾದ ಮನೆಗಳಿಗೂ ತೆರಳಿ ಕಿಟ್ ನೀಡಿದ್ದರು. ಪ್ರತಿನಿತ್ಯ ನೂರಾರು ಜನರನ್ನ ಭೇಟಿ ಮಾಡಿದ್ದಾರೆ. ಹೀಗಾಗಿ ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ಅವರನ್ನು ಪತ್ತೆ ಹಚ್ಚುವುದು ಬಿಬಿಎಂಪಿ ಅಧಿಕಾರಿಗಳಿಗೆ ಸವಾಲಿನ ಕೆಲಸವಾಗಿದೆ.

ತಪ್ಪಿದ ಭಾರೀ ಅನಾಹುತ: ಇಮ್ರಾನ್ ಪಾಷಾ ಅವರು ಗುರುವಾರ ಪಾಲಿಕೆ ಸಭೆಯಲ್ಲಿ ಭಾಗಿಯಾಗಿಲ್ಲ. ಸಭೆಯಲ್ಲಿ 150ಕ್ಕೂ ಹೆಚ್ಚು ಜನ ಕಾರ್ಪೊರೇಟರ್, 50 ಜನ ಅಧಿಕಾರಿಗಳು ಭಾಗಿಯಾಗಿದ್ದರು. ಹೀಗಾಗಿ ಭಾರೀ ಅನಾಹುತವೇ ತಪ್ಪಿದೆ.

Leave a Reply