ಪಾಕ್‍ನಲ್ಲಿರುವ ಇಬ್ಬರು ಭಾರತೀಯ ಅಧಿಕಾರಿಗಳು ನಿಗೂಢವಾಗಿ ನಾಪತ್ತೆ

ನವದೆಹಲಿ: ಪಾಕಿಸ್ತಾನದಲ್ಲಿನ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳು ಸೋಮವಾರ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‍ನಿಂದ ಇಬ್ಬರು ಅಧಿಕಾರಿಗಳು ಕೆಲ ಗಂಟೆಗಳ ಹಿಂದೆ ನಾಪತ್ತೆಯಾಗಿದ್ದಾರೆ. ರಾಯಭಾರ ಕಚೇರಿ ನಾಪತ್ತೆಯಾಗಿರುವ ಕುರಿತು ಭಾರತಕ್ಕೆ ತಿಳಿಸಿದ್ದು, ಈ ಸಂಬಂಧ ಪಾಕಿಸ್ತಾನದ ವಿದೇಶಾಂಗ ಸಚಿವಾಲಯಕ್ಕೂ ಮಾಹಿತಿ ರವಾನೆಯಾಗಿದೆ ಎಂದು ತಿಳಿದು ಬಂದಿದೆ.

ಭಾರತೀಯ ವಿದೇಶಾಂಗ ಸಚಿವಾಲಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪಾಕ್ ಸರ್ಕಾರದ ಗಮನಕ್ಕೆ ತರಲಾಗಿದೆ. ಈ ರೀತಿಯಾಗುತ್ತಿರುವುದು ಇದೇ ಮೊದಲಲ್ಲ. ಪಾಕಿಸ್ತಾನದ ಗೂಢಚರ್ಯ ಸಂಸ್ಥೆಗಳು ಪದೇ ಪದೇ ಈ ರೀತಿಯ ಕೆಲಸ ಮಾಡುತ್ತಿರುತ್ತವೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿ ಬಂದಿತ್ತು.

ಪ್ರಸ್ತುತ ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ಗೌರವ್ ಅಹ್ಲುವಾಲಿಯಾ ಅವರ ನಿವಾಸದ ಬಳಿ ಪಾಕ್ ಗುಪ್ತಚರ ಸಂಸ್ಥೆ ಐಎಸ್‍ಐ(ಇಂಟರ್ ಸರ್ವಿಸ್ ಇಂಟಲಿಜೆನ್ಸ್)ನವರು ಕಾವಲು ಕಾಯುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

ಕೆಲವು ದಿನಗಳ ಹಿಂದೆ ಭಾರತದಲ್ಲಿದ್ದ ಪಾಕಿಸ್ತಾನಿ ಅಧಿಕಾರಿಗಳು ಬೇಹುಗಾರಿಕೆ ನಡೆಸಿ, ಗೌಪ್ಯ ಮಾಹಿತಿ ಪಡೆಯಲು ಯತ್ನಿಸಿದ್ದರು. ಈ ವೇಳೆ ದೆಹಲಿಯಲ್ಲಿ ರೆಡ್‍ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ನಂತರ ಇಲ್ಲಿನ ದಕ್ಷಿಣ ಬ್ಲಾಕ್‍ನ ಅಧಿಕಾರಿಗಳು ಪಾಕಿಸ್ತಾನದ ಬೆಳವಣಿಗೆ ಕುರಿತು ನಿಗಾ ವಹಿಸಿದ್ದಾರೆ ಎಂದು ವರದಿಯಾಗಿದೆ.

Comments

Leave a Reply

Your email address will not be published. Required fields are marked *