ಪಾಕಿಸ್ತಾನ ಸ್ಟಾರ್ ಕ್ರಿಕೆಟಿಗನ ಪತ್ನಿಗೆ ಕೊಹ್ಲಿ ಎಂದರೆ ಪಂಚಪ್ರಾಣವಂತೆ

ಇಸ್ಲಾಮಬಾದ್: ಭಾರತ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ವಿಶ್ವದಾದ್ಯಂತ ಹಲವಾರು ಮಂದಿ ಫ್ಯಾನ್ಸ್ ಇದ್ದಾರೆ. ಇದೀಗ ಈ ಫ್ಯಾನ್ಸ್ ಪಟ್ಟಿಗೆ ಹೊಸದಾಗಿ ಪಾಕಿಸ್ತಾನ ತಂಡದ ಸ್ಟಾರ್ ಬೌಲರ್ ಒಬ್ಬರ ಪತ್ನಿ ಸೇರಿಕೊಂಡಿದ್ದಾರೆ.

ನನಗೆ ಕೊಹ್ಲಿ ಫೇವ್‍ರೇಟ್ ಕ್ರಿಕೆಟರ್. ಅವರ ಬ್ಯಾಟಿಂಗ್‍ನಿಂದಾಗಿ ನಾನು ಅವರ ದೊಡ್ಡ ಅಭಿಮಾನಿಯಾಗಿದ್ದೇನೆ ಎಂದು ಪಾಕಿಸ್ತಾನ ತಂಡದ ಬೌಲರ್ ಹಸನ್ ಅಲಿ ಅವರ ಪತ್ನಿ ಶಾಮಿಯಾ ಆರ್ಜೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಅಭಿಮಾನಿಗಳು ನಿಮ್ಮ ಫೇವ್‍ರೇಟ್ ಬೌಲರ್ ಯಾರು ಎಂದು ಕೇಳಿದಾಗ ಶಾಮಿಯಾ ಆರ್ಜೂ ನನ್ನ ಫೇವ್‍ರೇಟ್ ಬೌಲರ್ ಗಂಡ ಹಸನ್ ಅಲಿ ಎಂದಿದ್ದಾರೆ. ಬಳಿಕ ನಿಮ್ಮ ನೆಚ್ಚಿನ ಬ್ಯಾಟ್ಸ್‌ಮ್ಯಾನ್ ಎಂದಾಗ ವಿರಾಟ್ ಕೊಹ್ಲಿ ಎಂದು ತುಂಬಾ ಅಭಿಮಾನದಿಂದ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಇಂಗ್ಲೆಂಡ್ ಟಾಪ್ ಬೌಲರ್ ಜೀವನಕ್ಕೆ ಮುಳುವಾಯ್ತು 9 ವರ್ಷ ಹಿಂದಿನ ಟ್ವೀಟ್‍


ಶಾಮಿಯಾಗೆ ವಿರಾಟ್ ಕೊಹ್ಲಿ ಫೇವ್‍ರೇಟ್ ಆಟಗಾರನಾಗಲು ಅಸಲಿ ಕಾರಣ ಏನೆಂದರೆ ಶಾಮಿಯಾ ಮೂಲತಃ ಭಾರತದ ಹರಿಯಾಣದವರು. ಈ ಹಿಂದೆ ಕುಟುಂಬ ಸಮೇತರಾಗಿ ಹರಿಯಾಣದಲ್ಲಿ ನೆಲೆಸಿದ್ದರಂತೆ ಈ ಸಂದರ್ಭ ಕ್ರಿಕೆಟ್ ನೋಡುವ ಹವ್ಯಾಸ ಇತ್ತು ಆಗ ನನಗೆ ಕೊಹ್ಲಿ ಬ್ಯಾಟಿಂಗ್ ತುಂಬಾ ಇಷ್ಟವಾಗುತ್ತಿತ್ತು ಎಂದಿದ್ದಾರೆ. ಇದನ್ನೂ ಓದಿ:ಆರ್​ಸಿಬಿ ಬಿಟ್ಟರೆ ಈ ತಂಡದಲ್ಲಿ ಆಡುವ ಬಯಕೆ ಇದೆ ಎಂದ ಚಹಲ್

ಶಾಮಿಯಾ ದುಬೈನ ಎಮಿರೇಟ್ಸ್ ಏರ್‍ಲೈನ್ಸ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಪರಸ್ಪರ ಭೇಟಿಯಾದ ಹಸನ್ ಅಲಿ ಮತ್ತು ಶಾಮಿಯಾ ಸ್ನೇಹಿತರಾಗಿ ಬಳಿಕ 2019ರಲ್ಲಿ ವಿವಾಹವಾಗಿದ್ದರು. ಇದೀಗ ಶಾಮಿಯಾ ಅವರು ಬರೆದುಕೊಂಡಿರುವ ಸಾಮಾಜಿಕ ಜಾಲತಾಣದ ಪೋಸ್ಟ್ ವೈರಲ್ ಆಗ ತೊಡಗಿದೆ.

Comments

Leave a Reply

Your email address will not be published. Required fields are marked *