ಪಾಕಿಸ್ತಾನದಲ್ಲಿ ಮಹಿಳೆಯರು ಬೈಕ್ ಓಡ್ಸಂಗಿಲ್ಲ- ಲೈಸೆನ್ಸ್ ನೀಡದ ಅಧಿಕಾರಿ ವಿರುದ್ಧ ಮಹಿಳೆ ಗರಂ

– ಟ್ವಿಟ್ಟರ್ ನಲ್ಲಿ ಇಮ್ರಾನ್ ಖಾನ್ ತರಾಟೆಗೆ ತೆಗೆದುಕೊಂಡ ಮಹಿಳೆ

ಇಸ್ಲಾಮಾಬಾದ್: ಬೈಕ್ ಓಡಿಸಲು ಲೈಸೆನ್ಸ್ ಕೇಳಿದ್ದಕ್ಕೆ ಕಿರಿಕ್ ಮಾಡಿದ ಅಧಿಕಾರಿ ವಿರುದ್ಧ ಮಹಿಳೆಯೊಬ್ಬರು ಪಾಕ್ ಪ್ರಧಾನಿಗೆ ದೂರು ನೀಡಿದ್ದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬೈಕ್ ಓಡಿಸಲು ಲೈಸೆನ್ಸ್ ಕೇಳಿದ್ದಕ್ಕೆ ಮಹಿಳೆಯಾಗಿ ಬೈಕ್ ಓಡಿಸುತ್ತಿಯಾ ಎಂದು ಪಾಕಿಸ್ತಾನ ಅಧಿಕಾರಿ ಅಧಿಕಾರಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತು ಮಹಿಳೆ ಗರಂ ಆಗಿದ್ದು, ಟ್ವೀಟ್ ಮಾಡಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‍ಗೆ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ.

ವಿಶ್ವಾದ್ಯಂತ ಮಹಿಳಾ ಹಕ್ಕುಗಳಿಗಾಗಿ ಹೋರಾಟ ನಡೆಯುತ್ತಿರುವಾಗ, ಬದಲಾವಣೆಯಾಗುತ್ತಿರುವಾಗ ಪಾಕಿಸ್ತಾನದಲ್ಲಿ ಇನ್ನೂ ಶಿಲಾಯುಗದ ರೀತಿಯ ಸಂಸ್ಕೃತಿ ಇದೆ. ಈ ಘಟನೆಯಿಂದಾಗಿ ಇದೀಗ ಹೊರ ಬಿದ್ದಿದೆ. ಇತ್ತೀಚೆಗೆ ಕರಾಚಿಯಲ್ಲಿ ಮಹಿಳೆಯೊಬ್ಬರು ಲೈಸೆನ್ಸ್ ಪಡೆಯಲು ಸರ್ಕಾರಿ ಕಚೇರಿಗೆ ತೆರಳಿದಾಗ ಅಲ್ಲಿನ ಅಧಿಕಾರಿ ಮಹಿಳೆಯಾಗಿ ಬೈಕ್ ಓಡಿಸುತ್ತೀಯಾ ಎಂದು ಬೈದು ಕಳುಹಿಸಿದ್ದಾರೆ. ಗೆಟ್ ಔಟ್, ಮಹಿಳೆಯರಿಗೆ ಪರವಾನಗಿ ನೀಡುವುದಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ.

ಮಹಿಳೆಯನ್ನು ಶಿರೀನ್ ಫೆರೋಝಿಪುರ್ವಾಲ್ಲಾ ಎಂದು ಗುರುತಿಸಲಾಗಿದ್ದು, ಘಟನೆ ಕುರಿತು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‍ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದು, ಪಾಕಿಸ್ತಾನದಲ್ಲಿ ಒಬ್ಬ ಮಹಿಳೆ ಬೈಕ್ ಓಡಿಸಬಾರದೇ? ಸರ್ಕಾರಿ ಕಚೇರಿಗೆ ಹೋಗಿ ಬೈಕ್ ಓಡಿಸಲು ಪರವಾನಗಿ ಕೇಳಿದರೆ, ಮಹಿಳೆಯರಿಗೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ನಾನು ಉತ್ತರಿಸಿ ಹುಡುಗಿಯರಿಗೆ ಬೈಕ್ ಲೈಸೆನ್ಸ್ ನೀಡುವುದಿಲ್ಲವೇ, ನೀವು ಮಾತ್ರ ಗಾಡಿ ಓಡಿಸಬೇಕೆ? ಇದ್ಯಾವ ರೀತಿಯ ನಿಯಮ? ದಯವಿಟ್ಟು ಪ್ರತಿಕ್ರಿಯಿಸಿ ಎಂದು ಬರೆದುಕೊಂಡಿದ್ದಾರೆ.

ಅಧಿಕಾರಿಗಳು ನಿರಾಕರಿಸುತ್ತಿದ್ದಂತೆ ಮಹಿಳೆ ಹೊರ ಬಂದಿದ್ದು, ಇದನ್ನು ಖಚಿತಪಡಿಸಿಕೊಳ್ಳಲು ಲೈಸೆನ್ಸ್ ಆಫೀಸ್‍ನಲ್ಲಿ ಕೆಲಸ ಮಾಡುವ ಮತ್ತೊಬ್ಬ ತನ್ನ ಪರಿಚಿತನಿಗೆ ಕರೆ ಮಾಡಿದ್ದಾರೆ. ಈ ವೇಳೆ ಅವರೂ ಇದೇ ಉತ್ತರ ನೀಡಿದ್ದು, ನಾವು ಮಹಿಳೆಯರಿಗೆ ಬೈಕ್ ಲೈಸೆನ್ಸ್ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಧಿಕಾರಿಗಳ ಈ ಪುರಾತನ ವರ್ತನೆ ವಿರುದ್ಧ ಫೆರೋಝಿಪುರ್ವಾಲ್ಲಾ ಟ್ವಿಟ್ಟರ್ ಬರೆದುಕೊಂಡ ನಂತರ ಅನೇಕ ಮಹಿಳೆಯರು ಒತ್ತಡ ಹೇರಿದ ಬಳಿಕ ಬೈಕ್ ಲೈಸೆನ್ಸ್ ಪಡೆದುಕೊಂಡಿದ್ದಾರೆ. ಅಧಿಕಾರಿಗಳು ತಮ್ಮ ಕೆಲಸವನ್ನು ಯಾಕೆ ಮಾಡುತ್ತಿಲ್ಲ ಎಂದು ಮಹಿಳೆ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫೆರೋಝಿಪುರ್ವಾಲ್ಲಾ ಈ ಕುರಿತು ಟ್ವಿಟ್ಟರ್ ನಲ್ಲಿ ಬರೆದುಕೊಂಡ ಎರಡು ದಿನದ ಬಳಿಕ ಕ್ಲಿಫ್ಟೋನ್ ಡಿಎಸ್‍ಪಿ ಅವರನ್ನು ಸಂಪರ್ಕಿಸಿದ್ದಾರೆ. ಅಲ್ಲದೆ ಅವರನ್ನು ಲೈಸೆನ್ಸ್ ಆಫೀಸ್‍ಗೆ ಕರೆಸಿಕೊಂಡಿದ್ದಾರೆ. ಕೊನೆಗೂ ಹೆಚ್ಚಿನ ಸಮಸ್ಯೆಯಾಗದಂತೆ ಲೈಸೆನ್ಸ್ ಪಡೆದುಕೊಂಡೆ. ಸಮಸ್ಯೆ ಬಗೆಹರಿಸುವಂತೆ ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *