ಪವರ್ ಸ್ಟಾರ್ ಫಿಟ್ನೆಸ್ ನೋಡಿ ಅಲ್ಲು ಸಿರಿಶ್ ಫಿದಾ

ಬೆಂಗಳೂರು: ಚಂದನವದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಫಿಟ್ನೆಸ್ ವಿಡಿಯೋ ನೋಡಿ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ತಮ್ಮ ಅಲ್ಲು ಸಿರಿಶ್ ಅವರು ಫಿದಾ ಆಗಿದ್ದಾರೆ.

ಸ್ಯಾಂಡಲ್ ವುಡ್‍ನಲ್ಲಿ ಡ್ಯಾನ್ಸ್ ಫೈಟ್ ಸೇರಿದಂತೆ ಎಲ್ಲ ಪಾತ್ರಗಳಿಗೂ ಹೊಂದಿಕೊಳ್ಳುವ ನಟ ಎಂದರೆ ಅದು ನಮ್ಮ ಪುನೀತ್ ರಾಜ್‍ಕುಮಾರ್ ಎಂದರೆ ತಪ್ಪಾಗುವುದಿಲ್ಲ. ಲಾಕ್‍ಡೌನ್ ನಿಂದ ಮನೆಯಲ್ಲೇ ಉಳಿದಿರುವ ಅಪ್ಪು ಸದ್ಯ ಕಸರತ್ತು ಮಾಡುವುದರಲ್ಲಿ ಬ್ಯುಸಿಯಾಗಿದ್ದಾಋಎ. ಜೊತೆಗೆ ಅವರ ಕಸರತ್ತಿನ ಕೆಲ ವಿಡಿಯೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದು, ಆ ವಿಡಿಯೋಗಳು ವೈರಲ್ ಆಗುತ್ತಿವೆ.

https://www.instagram.com/p/CA9bgKxp9JJ/

ಅಪ್ಪು ಜಿಮ್‍ನಲ್ಲಿ ಕಷ್ಟಕರವಾದ ವ್ಯಾಯಾಮವನ್ನು ಮಾಡುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದರು. ಇದನ್ನು ನೋಡಿದ ಅಲ್ಲು ಸಿರಿಶ್, ಅಪ್ಪು ಅವರ ಟ್ವೀಟ್‍ಗೆ ರೀಟ್ವೀಟ್ ಮಾಡಿದ್ದಾರೆ. ನಿಮ್ಮನ್ನು ಫಾಲೋ ಮಾಡುವವರಿಗಾಗಿ ನೀವು ಒಳ್ಳೆಯ ಮಾನದಂಡವನ್ನು ಸೆಟ್ ಮಾಡಿದ್ದೀರಾ ಸರ್. ನಿಮಗೆ ಅದ್ಭುತವಾದ ಶಕ್ತಿ ಮತ್ತು ಸ್ಟ್ಯಾಮಿನ ಇದೆ ಎಂದು ಬರೆದುಕೊಂಡಿದ್ದಾರೆ.

https://twitter.com/AlluSirish/status/1268189587710660608

ಈ ಹಿಂದೆಯೂ ಕೂಡ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಹಲವಾರು ಫಿಟ್ನೆಸ್ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋಗಳು ಕೂಡ ಬಹಳ ವೈರಲ್ ಆಗಿದ್ದವು. 45ರ ವಯಸ್ಸಿನಲ್ಲೂ ಅಪ್ಪು ವ್ಯಾಯಾಮ ಮಾಡುತ್ತಿರುವುದನ್ನು ನೋಡಿದ ಅವರ ಅಭಿಮಾನಿಗಳು ನೆಚ್ಚಿನ ನಟನನ್ನು ಹಾಡಿಕೊಂಡಿದ್ದರು. ಜೊತೆಗೆ ಸ್ವತಃ ನಿರ್ದೇಶಕ ಸಂತೋಷ್ ಅನಂದ್‍ರಾಮ್ ಅವರು ಕೂಡ ಟ್ವೀಟ್ ಮಾಡಿ, ಅದಕ್ಕೆ ನಾವು ನಿಮ್ಮ ಪವರ್ ಸ್ಟಾರ್ ಎಂದು ಕರೆಯುವುದು ಎಂದಿದ್ದರು.

ಸದ್ಯ ಪುನೀತ್ ರಾಜ್‍ಕುಮಾರ್ ಅವರು ಸಂತೋಷ್ ಅನಂದ್‍ರಾಮ್ ಅವರ ನಿರ್ದೇಶನದ ‘ಯುವರತ್ನ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸುಮಾರು 20 ವರ್ಷದ ನಂತರ ಅಪ್ಪು ಸಿನಿಮಾದ ಬಳಿಕ ಪುನೀತ್ ಅವರು ಕಾಲೇಜು ಯುವಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆ ಶುಕ್ರವಾರ ಬಿಡುಗಡೆಯಾದ ಬದಲಾಗು ನೀನು ಬದಲಾಯಿಸು ನೀನು ಎಂಬ ಹಾಡಿನಲ್ಲೂ ಕೂಡ ಅಪ್ಪು ಅಭಿನಯಿಸಿದ್ದರು.

Comments

Leave a Reply

Your email address will not be published. Required fields are marked *