ಪರ ಸ್ತ್ರೀ ಜೊತೆ ಸಿಕ್ಕಿಬಿದ್ದ ಗಂಡ – ಸಿಕ್ಕ ಸಿಕ್ಕವರ ಕಾಲಿಗೆ ಬಿದ್ದು ಕ್ಷಮೆ

ಧಾರವಾಡ: ಪರ ಸ್ತ್ರೀ ಜೊತೆ ಸಿಕ್ಕಿಬಿದ್ದ ವ್ಯಕ್ತಿಯೋರ್ವ ಸಿಕ್ಕ ಸಿಕ್ಕವರ ಕಾಲಿಗೆ ಬಿದ್ದು ಕ್ಷಮೆ ಕೇಳಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಲಕ್ಷ್ಮಿಸಿಂಗನಕೆರ ನಿವಾಸಿ ಮುತ್ತು ಗಂಬ್ಯಾಪುರ ಪರ ಸ್ತ್ರೀಯ ಬಾಹುಗಳಲ್ಲಿ ಬಂಧಿಯಾಗಿದ್ದ ಸಿಕ್ಕಿ ಬಿದ್ದಿದ್ದನು. ಎರಡು ದಿನದ ಹಿಂದೆ ಧಾರವಾಡ ತಾಲೂಕಿನ ಮುಗದ ಗ್ರಾಮದಲ್ಲಿ ಜ್ಯೋತಿ (ಹೆಸರು ಬದಲಾಯಿಸಲಾಗಿದೆ) ಜೊತೆಯಲ್ಲಿದ್ದ ಮುತ್ತುನನ್ನು ಪತ್ನಿ ಹಾಗೂ ಕುಟುಂಬಸ್ಥರು ರೆಡ್ ಹ್ಯಾಂಡಾಗಿ ಹಿಡಿದಿದ್ದರು. ಈ ಪ್ರಕರಣ ಜಿಲ್ಲಾ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.

ಮುತ್ತು ತಾನು ಮಾಡಿದ ತಪ್ಪಿಗೆ ಪೊಲೀಸ್ ಠಾಣೆ ಆವರಣದಲ್ಲಿದ್ದ ಎಲ್ಲರ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ. ಕಾಲಿಗೆ ನಮಸ್ಕರಿಸಲು ಬಂದಾಗ ಕೆಲವರು ಹಿಂದೆ ಸರಿದರೂ ಬಿಟ್ಟಿಲ್ಲ. ಸದ್ಯ ಪೊಲೀಸರು ಪತಿ-ಪತ್ನಿ ನಡುವೆ ರಾಜಿ ಮಾಡಿಸಿ ಎಲ್ಲರನ್ನ ಕಳುಹಿಸಿದ್ದಾರೆ.

Comments

Leave a Reply

Your email address will not be published. Required fields are marked *