ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರವರಿಗೆ ಅಭಿನಂದನೆ ಸಮರ್ಪಣೆ

ಮಂಗಳೂರು: ಮಂಜುನಾಥ್ ಎಜುಕೇಷನ್ ಟ್ರಸ್ಟ್ (ರಿ)ಮತ್ತು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ನಗರದ ಉರ್ವಾಸ್ಟೋರ್ ನ ಯುವವಾಹಿನಿ ಸಭಾಂಗಣದಲ್ಲಿ ‘ಕರಾವಳಿ ಸಾಂಸ್ಕೃತಿಕ ಸೌರಭ’ ವನ್ನು ಆಚರಿಸಲಾಯಿತು. ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ ಸಮಾರಂಭವನ್ನು ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ವಹಿಸಿದ್ದರು. ಬಳಿಕ ಮಾತನಾಡಿದ ದಯಾನಂದ ಕತ್ತಲ್ ಸಾರ್, ತುಳು ಭಾಷೆ ಕನ್ನಡದ ತಂಗಿ ಇದ್ದಂತೆ ತುಳುನಾಡಿನವರು ವಿಶಾಲ ಮನೋಭಾವದವರು. ನಾವು ನಮ್ಮಲ್ಲಿನ ವೃತ್ತಗಳಿಗೆ ದೇಶದ ವೀರರ, ಸಾಧಕರ ಹೆಸರನ್ನು ಇಟ್ಟಿದ್ದೇವೆ. ಆದರೆ ತುಳುನಾಡಿನ ವೀರರಾದ ಕೋಟಿ ಚೆನ್ನಯ, ಅಬ್ಬಕ್ಕರ ಹೆಸರು ಕರಾವಳಿಯ ಹೊರಗೆ ಎಲ್ಲೂ ಹಾಗೂ ಯಾವ ವೃತ್ತದಲ್ಲೂ ಕಾಣುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.

ತುಳು ಭಾಷೆಗೆ ಸ್ವಂತ ಲಿಪಿ ಇದೆ, ಸ್ವಂತ ಕ್ಯಾಲೆಂಡರ್ ಇದೆ. ಆದರೂ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ತುಳು ಭಾಷೆಯನ್ನು ಸೇರಿಸದೇ ಇರುವುದು ಅತ್ಯಂತ ಶೋಚನೀಯ. ತುಳುವಿಗಿಂತ ಚಿಕ್ಕ ಚಿಕ್ಕ ಭಾಷೆಗಳೂ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿರುವಾಗ ತುಳುವನ್ನು ಯಾಕೆ ಸೇರಿಸಬಾರದು ಎಂದು ಅವರು ಪ್ರಶ್ನಿಸಿದರು.

ಇದಕ್ಕಾಗಿ ತುಳುನಾಡಿನ ಹೊರಗಿನವರು ಕೂಡ ಹೋರಾಡಬೇಕು ಎಂದು ಕರೆಯಿತ್ತರು. ಕನ್ನಡ ಸಂಘ ಬಂಗಾರಪೇಟೆಯ ಅಧ್ಯಕ್ಷ ಸುಬ್ರಮಣಿ ಎಂ ಪಲ್ಲವಿ ಮಣಿ, ಬಂಧಿಖಾನೆ ವಿಭಾಗದ ಎಎಸ್ ಪಿ ಚಂದನ್ ಪಟೇಲ್, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ನಗರ ಮತ್ತು ಗ್ರಾಮೀಣ ಯೋಜನೆ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಪ್ರಸಾದ್ ಎ .ಬಿ, ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ರಂಜಿನಿ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಇದನ್ನೂ ಓದಿ: ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಗೌರವ 

ಮಂಜುನಾಥ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಕೆ.ಪಿ ಮಂಜುನಾಥ್ ಸಾಗರ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ನಾವು ಸ್ಥಳೀಯವಾಗಿ ಕರಾವಳಿ ಸಾಂಸ್ಕೃತಿಕ ಸೌರಭ, ರಾಜ್ಯ ಹೊರ ರಾಜ್ಯದಲ್ಲಿ ರಾಷ್ಟ್ರೀಯ ಸಂಸ್ಕೃತಿ ಸಮ್ಮೇಳನ ಮತ್ತು ವಿದೇಶಗಳಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭಗಳನ್ನು 14 ವರ್ಷಗಳಿಂದ ಸುಮಾರು 50 ಸಮಾರಂಭಗಳನ್ನು ಯಶಸ್ವಿಯಾಗಿ ಏರ್ಪಡಿಸಿದ ಹೆಗ್ಗಳಿಕೆ ನಮ್ಮದು ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ಕಾಸರಗೋಡು ಅಶೋಕ್ ಕುಮಾರ್ ಧನ್ಯವಾದ ಸಮರ್ಪಣೆ ಮಾಡಿದರು.

Comments

Leave a Reply

Your email address will not be published. Required fields are marked *