ಪತ್ರ, ರುಚಿಕರ ಫುಡ್‍ಗೆ ಕಿಚ್ಚನ ಪತ್ನಿ ಫಿದಾ- ಬಿಗ್ ಮನೆಯ ಸದಸ್ಯರಿಗೆ ಪ್ರಿಯ ಧನ್ಯವಾದ

ಬೆಂಗಳೂರು: ಅನಾರೋಗ್ಯ ನಿಮಿತ್ತ ಈ ವಾರದ ಪಂಚಾಯ್ತಿ ಕಟ್ಟೆಗೆ ಕಿಚ್ಚ ಸುದೀಪ್ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಸ್ಪರ್ಧಿಗಳು ಅಭಿನಯ ಚಕ್ರವರ್ತಿಗೆ ಅರ್ಥಪೂರ್ಣ ಪತ್ರದೊಂದಿಗೆ ರುಚಿಕರವಾದ ಆಹಾರ ರೆಡಿ ಮಾಡಿಕೊಟ್ಟಿದ್ದರು. ಬಿಗ್ ಮನೆಯ ಸದಸ್ಯರ ಪ್ರೀತಿಗೆ ಕಿಚ್ಚನ ಪತ್ನಿ ಫಿದಾ ಆಗಿದ್ದಾರೆ.

ಹೌದು. ಬಿಗ್ ಬಾಸ್ ಕಾರ್ಯಕ್ರಮ 50ನೇ ದಿನಕ್ಕೆ ಕಾಲಿಡುತ್ತಿದ್ದಂತೆಯೇ ಮನೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯ್ತು. ಅನಾರೋಗ್ಯ ಕಾರಣ ಕಿಚ್ಚ ಸುದೀಪ್ ಇಂದಿನ ಕಾರ್ಯಕ್ರಮ ನಡೆಸುತ್ತಿಲ್ಲ ಎಂದು ಹೇಳುತ್ತಿದ್ದಂತೆಯೇ ಸ್ಪರ್ಧಿಗಳಿಗೆ ಅಚ್ಚರಿ ಹಾಗೂ ನೋಡ ನೋಡುತ್ತಿದ್ದಂತೆಯೇ ಎಲ್ಲರ ಕಣ್ಣೀರ ಕೋಡಿ ಹರಿದೇ ಹೋಯಿತು.

ಹೊರ ಜಗತ್ತಿನ ಅರಿವೇ ಇಲ್ಲದಿರುವ ಸ್ಪರ್ಧಿಗಳನ್ನು ತಿದ್ದಲು ವಾರಾಂತ್ಯದಲ್ಲಿ ಕಿಚ್ಚ ಬರುತ್ತಿದ್ದರು. ಆದರೆ ಈವಾರ ಕಿಚ್ಚನ ತಾವು ನೋಡಲು ಸಾಧ್ಯವಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆಯೇ ಎಲ್ಲರೂ ಒಂದು ಬಾರಿ ವಿಚಲಿತರಾದರು ಜೊತೆಗೆ ಗದ್ಗದಿತರಾದರು. ಅಲ್ಲದೆ ಒಬ್ಬರನ್ನೊಬ್ಬರು ಸಮಾಧಾನ ಪಡಿಸಲು ಮುಂದಾದರು. ಕೊನೆಗೆ ಎಲ್ಲರೂ ಸೇರಿ ಒಂದು ನಿರ್ಧಾರಕ್ಕೆ ಬಂದರು. ನಂತರ ಅರವಿಂದ್ ಅವರು ಕ್ಯಾಮೆರಾ ಮುಂದೆ ಬಂದು ನಾವೆಲ್ಲ ಸೇರಿ ಸುದೀಪ್ ಅವರಿಗೆ ಪತ್ರ ಹಾಗೂ ಅಡುಗೆ ಮಾಡಿ ಕಳುಸಹಿಲು ನಿರ್ಧಾರ ಮಾಡಿರುವುದಾಗಿ ತಿಳಿಸಿದರು.

ಅಂತೆಯೇ ಪತ್ರ ಹಾಗೂ ಅಡುಗೆ ಬಗ್ಗೆ ವಾಯ್ಸ್ ಮೆಸೇಜ್ ಕಳುಹಿಸಿರುವ ಕಿಚ್ಚ, ನಿಮ್ಮ ಪ್ರೀತಿಗೆ ನಾನು ಆಭಾರಿ. ಪದಗಳಲ್ಲಿ ವರ್ಣಿಸಲು ಅಸಾಧ್ಯ. ಎರಡು ಮೂರು ದಿನಗಳ ವಿಶ್ರಾಂತಿ ಬಳಿಕ ನಿಮ್ಮ ಜೊತೆ ಮಾತನಾಡುವೆ ಎಂದು ಹೇಳಿದ್ದಾರೆ. ಇತ್ತ ಸುದೀಪ್ ಪತ್ನಿ ಪ್ರಿಯಾ ಟ್ವೀಟ್ ಮಾಡಿ, ಬಿಗ್ ಮನೆಯ ಸ್ಪರ್ಧಿಗಳು ತೋರಿಸಿರುವ ಅಪಾರ ಪ್ರೀತಿಗೆ ಮಾರು ಹೋಗಿದ್ದಾರೆ. ಭಾವುಕ ಪತ್ರ ಹಾಗೂ ರುಚಿಕರ ಆಹಾರ ಕಳುಹಿಸಿದ ಪ್ರತಿಯೊಬ್ಬ ಬಿಗ್ ಬಾಸ್ ಸ್ಪರ್ಧಿಗೂ ಧನ್ಯವಾದ. ಸುದೀಪ್ ಚೇತರಿಸಿಕೊಳ್ಳುತ್ತಿದ್ದು, ಶೀಘ್ರವೇ ನಿಮ್ಮ ಜೊತೆ ಮಾತನಾಡಲಿದ್ದಾರೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಸುದೀಪ್ ಅವರಿಗೆ ವೈದ್ಯರು ಎರಡು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಾರದ ವೀಕೆಂಡ್ ವಿಥ್ ಕಿಚ್ಚ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ವಾರ ಗಾಯಕ ವಿಶ್ವನಾಥ್ ಎಲಿಮಿನೇಟ್ ಆಗಿದ್ದಾರೆ.

Comments

Leave a Reply

Your email address will not be published. Required fields are marked *