ಪತ್ನಿ ತವರಿಗೆ ಹೋಗಿದ್ದಕ್ಕೆ ಮೊಬೈಲ್ ಟವರ್ ಏರಿದ ಪತಿ

ಬಾಗಲಕೋಟೆ: ಪತ್ನಿ ತವರು ಮನೆಗೆ ಹೋಗಿದ್ದಕ್ಕೆ ಕುಡಿದ ಮತ್ತಿನಲ್ಲಿದ್ದ ಪತಿ ಮೊಬೈಲ್ ಟವರ್ ಏರಿ ಕುಳಿತ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದಲ್ಲಿ ನಡೆದಿದೆ.

ಅರ್ಜುನ್ ನಾಟಿಕಾರ್ (23) ಮೊಬೈಲ್ ಟವರ್ ಏರಿ ಕುಳಿತ ಪತಿರಾಯ. ಇಂದು ಪತ್ನಿ ಮನೆ ಬಿಟ್ಟು ಹೋದಳೆಂದು ನೊಂದ ಪತಿ ಸಂಜೆ 5 ಗಂಟೆಗೆ ಮೊಬೈಲ್ ಟವರ್ ಏರಿ ಕುಳಿತಿದ್ದಾನೆ. ಅರ್ಜುನ್ ಮೊಬೈಲ್ ಟವರ್ ಏರಿ ಕುಳಿತ ಸುದ್ದಿ ಗ್ರಾಮದ ತುಂಬೆಲ್ಲ ಹರಡಿದೆ. ಮೊಬೈಲ್ ಟವರ್ ಬಳಿ ಸೇರಿದ ಗ್ರಾಮಸ್ಥರು ಅರ್ಜುನ್ ಮನವೊಲಿಸಲು ಪ್ರಯತ್ನಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಆಗಮಿಸಿ, ಅರ್ಜುನ್ ನನ್ನು ಕೆಳಗಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *