ಪತ್ನಿ ಜೊತೆಗಿನ ಲವ್ಲೀ ಫೋಟೋ ಶೇರ್ ಮಾಡಿದ ನಟ ನಿಖಿಲ್

ಬೆಂಗಳೂರು: ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾರಸ್ವಾಮಿ ಸಾಮಾಜಿ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ಫೋಟೋವನ್ನು ಶೇರ್ ಮಾಡಿಕೊಳ್ಳುವ ಮೂಲಕವಾಗಿ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿರುತ್ತಾರೆ. ಇದೀಗ ಪತ್ನಿ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದಾರೆ.

ಪತ್ನಿ ಜೊತೆಗೆ ಫೋಟೋವನ್ನು ಸೆರೆ ಹಿಡಿದು ಅದಕ್ಕೆ ಮುದ್ದಾದ ಬರಹವನ್ನು ಬರೆದುಕೊಂಡಿದ್ದಾರೆ. ನನ್ನ ಧರ್ಮ ಪತ್ನಿ ಜೊತೆಗೆ ಒಂದು ಸೆಲ್ಫಿ ಎಂದು ಬರೆದುಕೊಂಡು ಫೋಟೋವನ್ನು ಸೋಶಿಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮುದ್ದಾದ ಜೋಡಿಯ ಕ್ಯೂಟ್ ಮೂಮೆಂಟ್ ನೋಡಿದ ನೆಟ್ಟಿಗರು, ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದನ್ನೂ ಓದಿ:  ಹೌದು ತಂದೆಯಾಗುತ್ತಿರುವುದು ನಿಜ: ನಿಖಿಲ್

ಸೂಪರ್ ಅಣ್ಣ, ಅತ್ತಿಗೆ, ಹಾರ್ಟ್ ಎಮೋಜಿಗಳು ಹೀಗೆ ಅನೇಕ ರೀತಿಯ ಕಮೆಂಟ್ ಗಳನ್ನು ಅಭಿಮಾನಿಗಳು ಮಾಡುತ್ತಿದ್ದಾರೆ. ಫೋಟೋದಲ್ಲಿ ರೇವತಿ ಮತ್ತು ನಿಖಿಲ್ ಕೂಡ ತುಂಬಾ ಮುದ್ದಾಗಿ ಕಾಣಿಕೊಂಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್​ನಲ್ಲಿ ಅವಕಾಶ ಇಲ್ಲ, ಸಂಸತ್​ನಲ್ಲೂ ಮಾತಾಡೋಕೆ ಬಿಡಲ್ಲ: ರಾಹುಲ್ ಗಾಂಧಿ

ಕೆಲ ದಿನಗಳ ಹಿಂದೆಯಷ್ಟೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಾವು ಅಜ್ಜನಾಗುತ್ತಿರುವ ವಿಚಾರವನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದರು. ಸೊಸೆ ರೇವತಿ 5 ತಿಂಗಳ ಗರ್ಭಿಣಿ ಎಂದು ಸಂತಸದ ಸುದ್ದಿಯನ್ನು ರಿವೀಲ್ ಮಾಡಿದ್ದರು. ನಂತರ ನಿಖಿಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವಾಗ ಈ ಕುರಿತು ಈಗಾಗಲೇ ಸುದ್ದಿ ಹರಿದಾಡುತ್ತಿರುವುದು ಸತ್ಯ, ನಾವು ಮಗುವಿನ ನಿರೀಕ್ಷೆಯಲ್ಲಿದ್ದೇವೆ, ತಂದೆಯಾಗುತ್ತಿದ್ದೇನೆ ಎಂದು ಸ್ವತಃ ಅವರೇ ಸ್ಪಷ್ಟಪಡಿಸಿದ್ದರು.

2020ರ ಫೆಬ್ರವರಿ 10ರಂದು ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ ರೇವತಿ ಅವರ ಜೊತೆ ನಡೆದಿತ್ತು. ಮದುವೆಯನ್ನ ಅದ್ಧೂರಿಯಾಗಿ ನಡೆಸಲು ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬ ನಿರ್ಧರಿಸಿತ್ತು. ಕೊರೊನಾ ಹಿನ್ನೆಲೆ ಕೆಲ ಆಪ್ತರ ಸಮ್ಮುಖದಲ್ಲಿ 2020 ಏಪ್ರಿಲ್ 17ರಂದು ವಿವಾಹ ನಡೆದಿತ್ತು. ನಿಖಿಲ್ ಮತ್ತು ರೇವತಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಇದೀಗ ಈ ಮುದ್ದಾದ ಫೋಟೋ ಮತ್ತೆ ಸುದ್ದಿಯಾಗುತ್ತಿದೆ.

Comments

Leave a Reply

Your email address will not be published. Required fields are marked *