ಪತ್ನಿಯೊಂದಿಗೆ ಕಾರು ಕದ್ದ ಖದೀಮರು – ಪೊಲೀಸರಿಗೆ ದೂರು ನೀಡಿದ ಪತಿ

ಛತ್ತೀಸ್‍ಗಡ: ವ್ಯಕ್ತಿಯೊಬ್ಬನ ಪತ್ನಿ ಮತ್ತು ಆತನ ಟಾಟಾ ಟಿಗೋ ಕಾರನ್ನು ಅಪರಿಚಿತ ವ್ಯಕ್ತಿಗಳಿಬ್ಬರು ಕದ್ದು ಬಳಿಕ ಮಹಿಳೆಯನ್ನು ಹೆದ್ದಾರಿಯೊಂದರಲ್ಲಿ ಎಸೆದು ಸ್ಥಳದಿಂದ ಪರಾರಿಯಾಗಿರುವ ಘಟನೆ ಪಂಜಾಬ್ ಡೇರಾ ಬಸ್ಸಿ ಸಮೀಪದ ಛತ್ತೀಸ್‍ಗಡದಲ್ಲಿ ನಡೆದಿದೆ.

ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ರಾಜೀವ್ ಚಂದ್ ಮತ್ತು ಅವರ ಪತ್ನಿ ರಿತು ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ತಮ್ಮ ಮಕ್ಕಳ ಶಾಲೆಯ ಫೀಸ್ ಕಟ್ಟಲು ಹೋಗಿದ್ದರು. ಈ ವೇಳೆ ರಿತು ಕಾರಿನಲ್ಲಿಯೇ ಕಾಯುವುದಾಗಿ ರಾಜೀವ್‍ಗೆ ತಿಳಿಸಿದ್ದಾರೆ. ಹೀಗಾಗಿ ರಾಜೀವ್ ಕಾರು ಕೀಯನ್ನು ವಾಹನದಲ್ಲಿಯೇ ಬಿಟ್ಟು ಫೀಸ್ ಕಟ್ಟಲು ಶಾಲೆಯೊಳಗೆ ಹೋಗಿದ್ದಾರೆ.

ಅದೇ ವೇಳೆ ಇದ್ದಕ್ಕಿದ್ದಂತೆ ಮಾಸ್ಕ್ ಇಲ್ಲದೆ ಬಂದ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಕುಳಿತುಕೊಂಡಿದ್ದಾರೆ. ಅವರಲ್ಲಿ ಒಬ್ಬ ಡ್ರೈವರ್ ಸೀಟಿನಲ್ಲಿ ಕುಳಿತರೆ ಮತ್ತೊಬ್ಬ ಹಿಂದಿನ ಸೀಟಿನಲ್ಲಿ ಕುಳಿತಿದ್ದ ರಿತುವನ್ನು ಆಕ್ರಮಿಸಿ ಅವಳ ಮುಖವನ್ನು ಮುಚ್ಚಿದರು. ಬಳಿಕ ಸುಮಾರು 5 ಕಿಮೀವರೆಗೂ ವಾಹನವನ್ನು ಚಲಾಯಿಸಿ ರಾಷ್ಟ್ರೀಯ ಹೆದ್ದಾರಿಯ ಅಂಬಾಲಾ ಟೋಲ್ ಪ್ಲಾಜಾದಲ್ಲಿ ರಿತುವನ್ನು ಕಾರಿನಿಂದ ಹೊರಕ್ಕೆ ತಳ್ಳಿ ಅಲ್ಲಿಂದ ಪರಾರಿಯಾಗಿದ್ದಾರೆ.

ನಂತರ ದಂಪತಿ ಪೊಲೀಸರನ್ನು ಸಂಪರ್ಕಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಈ ವಿಚಾರವಾಗಿ ಪೊಲೀಸರು ತನಿಖೆ ಆರಂಭಿಸಿದ್ದೇವೆ. ಟೋಲ್ ಪ್ಲಾಜಾದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಾಗಿದ್ದು, ದರೋಡೆಕೋರರನ್ನು ಗುರುತಿಸಿ ಬಂಧಿಸುವ ಪ್ರಯತ್ನ ನಡೆಯುತ್ತಿದೆ. ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *