ಪತ್ನಿಯನ್ನು ಕೊಲ್ಲಲು 5 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟ ಪತಿ

ಭೋಪಾಲ್: ಪತಿ ತನ್ನ ಪತ್ನಿಯನ್ನು ಕೊಲ್ಲಲು 5 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಪತ್ನಿಯ ಕೊಲೆಗೆ ಸುಪಾರಿ ಕೊಟ್ಟಿರುವಾತನನ್ನು ಅರ್ಜುನ್ ಫೌಜಿ ಎಂದು ಗುರುತಿಸಲಾಗಿದೆ. ಪತಿಯ ಸಂಚಿಗೆ ಬಲಿಯಾದ ಪತ್ನಿ ಕಾಮಾಕ್ಷಿಯಾಗಿದ್ದಾಳೆ. ಇವರು ಮೂಲತಃ ಚಿಂದ್ವಾರದವರಾಗಿದ್ದಾರೆ. ಕೊಲೆಯ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ. ಅರ್ಜುನ್ ಗಾಗಿ ಹುಡುಕಾಟ ನಡೆಯುತ್ತಿದೆ.

ಜನವರಿ 14 ರಂದು ಸುಸ್ನರ್ ಪೊಲೀಸ್ ಠಾಣೆ ಪ್ರದೇಶದ ಓಫ್ಡಾ ಗ್ರಾಮದ ಸಮೀಪದ ಜನನಿಬೀಡ ಪ್ರದೇಶದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಈ ವೇಳೆ ಮಹಿಳೆಯ ದೇಹದಲ್ಲಿ ಸಂಪೂರ್ಣ ಬಟ್ಟೆಯನ್ನು ತೆಗೆದು ಹಾಕಲಾಗಿತ್ತು. ದೇಹದ ಮೇಲೆ ಹೊಡೆದಿರುವ ಗುರುತುಗಳು ಇದ್ದವು. ಮರಣೋತ್ತರ ಪರೀಕ್ಷೆ ನಡೆಸಿದಾಗ, ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಮಹಿಳೆಯ ಕೊಲೆ ಕುರಿತಾಗಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆಕೆಯ ಪತಿಯ ಸುಳಿವು ಸಿಕ್ಕಿದೆ.

ಈಕೆ ಪತಿ ಅರ್ಜುನ್ ಫೌಜಿ ಎಂದು ತಿಳಿದುಬಂದಿದೆ. ಮಹಿಳೆಯ ಹೆಸರು ಕಾಮಾಕ್ಷಿ ಎಂದು ತಿಳಿದಿದೆ. ನಂತರ ಮೃತ ಮಹಿಳೆಯ ಕುಟುಂದವರಿಗೆ ಈ ಘಟನೆಯ ಕುರಿತಾಗಿ ಮಾಹಿತಿಯನ್ನು ನೀಡಿದ್ದೆವು. ಈ ಮೊದಲು ಅರ್ಜುನ್ ತನ್ನ ಸಹೋದರಿಯೊಂದಿಗೆ ವಿವಾಹದ ನೆಪದಲ್ಲಿ ಅಕ್ರಮ ಸಂಬಂಧ ಹೊಂದಿದ್ದನು. ನಂತರ ಇಬ್ಬರು ಮದುವೆಯಾದರು ಎಂದು ಮೃತ ಕಾಮಾಕ್ಷಿಯ ಸಹೋದರ ಪೊಲೀಸರಿಗೆ ತಿಳಿಸಿದ್ದಾನೆ.

ಅರ್ಜುನ್ ಗೆ ಕಾಮಾಕ್ಷಿಯನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಆದರೆ ಮಹಿಳೆಯ ಕುಟುಂಬಸ್ಥರು ಕಾಮಾಕ್ಷಿಗೆ ನಂಬಿಸಿ ಮೋಸ ಮಾಡುತ್ತಿದ್ದಾನೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟ ನಂತರ ಭಯದಿಂದ ವಿವಾಹವಾಗಿದ್ದನು. ನಂತರ ತನ್ನ ಪತ್ನಿಯನ್ನು ಕೊಲೆ ಮಾಡಲು ತನ್ನ ಸಂಬಂಧಿಕರಿಗೆ 5 ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದನು. ಆಕೆಯನ್ನು ನಂಬಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಮಹಿಳೆ ಪತಿಯ ಸಂಬಂಧಿಕರಾಗಿರುವ ಕಾರಣದಿಂದ ನಂಬಿ ಹೋಗಿದ್ದಾಳೆ. ಆದರೆ ಮೂವರು ದುಷ್ಕರ್ಮಿಗಳು ಸೇರಿ ಆಕೆಯ ಕತ್ತು ಹಿಸುಕಿ ಕೊಂದು ಪಲಾಡಾ ಕಾಡಿಗೆ ಎಸೆದಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ.

ಅಪರಿಚಿತ ಮಹಿಳೆ ಶವ ಸಿಕ್ಕ 7 ದಿನಗಳ ಒಳಗಾಗಿ ಪ್ರಕರಣ ಬಹಿರಂಗ ಪಡಿಸಿದ್ದೇವೆ. ಮಾಸ್ಟರ್ ಮೈಂಡ್ ಪತಿ ಅರ್ಜುನ್ ಹುಡುಕಾಟ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *