ಪಕ್ಕದ ಮನೆಯ ಶ್ವಾನದ ಖಾಸಗಿ ಅಂಗ ಕತ್ತರಿಸಿ ವಿಕೃತಿ ಮೆರೆದ ಭೂಪ..!

ಲಕ್ನೋ: ವ್ಯಕ್ತಿಯೊಬ್ಬ ಪಕ್ಕದ ಮನೆಯ ಶ್ವಾನದ ಜನನಾಂಗ ಕತ್ತರಿಸಿ ವಿಕೃತಿ ಮೆರೆದ ಘಟನೆ ಉತ್ತರಪ್ರದೇಶದ ಕಾನ್ಪುರ್ ದೇಹತ್ ಪ್ರದೇಶದಲ್ಲಿ ನಡೆದಿದೆ.

ಈ ಶ್ವಾನ ಸುರೇಶ್ ಸಿಂಗ್ ಎಂಬವರಿಗೆ ಸೇರಿದ್ದಾಗಿದೆ. ಘಟನೆಯಿಂದಾಗಿ ಗಂಭೀರ ಗಾಯಗೊಂಡ ಶ್ವಾನವನ್ನು ಕುಡಲೇ ಕೋರೆಹಲ್ಲು ಪಶುವೈದ್ಯಕೀಯ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು.

ಸಾಂದರ್ಭಿಕ ಚಿತ್ರ

ಸುಜಾನ್ಪುರದ ನಿವಾಸಿಯಾಗಿರುವ ಸುರೇಶ್ ಸಿಂಗ್, ನೆರೆಹೊರೆಯವರು ತಮ್ಮ ಸಾಕು ನಾಯಿಯ ಜನನಾಂಗಗಳನ್ನು ಕತ್ತರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ತನ್ನ ನೆರೆಮನೆಯವ ಮತ್ತು ಆತನ ಹೆಂಡತಿ ಹರಿತವಾದ ಆಯುಧದಿಂದ ಶ್ವಾನದ ಜನನಾಂಗವನ್ನು ಕತ್ತರಿಸಿದ್ದಾರೆ ಎಂದು ದೂರಿದ್ದಾರೆ.

ಶ್ವಾನದ ಕೂಗು ಕೇಳಿದ ತಕ್ಷಣ ನಾವು ಸ್ಥಳಕ್ಕೆ ಧಾವಿಸಿದೆವು. ಈ ವೇಳೆ ಶ್ವಾನ ನೋವು ತಡೆದುಕೊಳ್ಳಲು ಸಾಧ್ಯವಾಗದೆ ನಡುಗುತ್ತಿತ್ತು. ಇದನ್ನು ಗಮನಿಸಿದ ನಾವು ಕೂಡಲೇ ಅದನ್ನು ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ನಂತರ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಸಿಂಗ್ ತಿಳಿಸಿದರು.

ಗಟನೆ ಸಂಬಂಧ ಸುರೇಶ್ ಅವರು ದೂರು ನಿಡಿದ ಬಳಿಕ ತನಿಖೆ ಆರಂಭಿಸಿದ್ದೇವೆ ಎಂದು ರಸೂಲಾಬಾದ್ ಪೊಲೀಸರು ಹೇಳಿದ್ದಾರೆ. ಸುರೇಶ್ ಸಿಂಗ್ ದೂರಿನ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನಿಡಿ ಪರಿಶೀಲನೆ ನಡೆಸಲಾಗಿದೆ.

ಈ ಸಂಬಂಧ ರಸೂಲಾಬಾದ್ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಶಶಿ ಭೂಷಣ್ ಮಿಶ್ರಾ ಪ್ರತಿಕ್ರಿಯಿಸಿ, ಪ್ರಕರಣದ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 429 (ಪ್ರಾಣಿಗಳನ್ನು ಕೊಲ್ಲುವ ಅಥವಾ ದುರುಪಯೋಗಪಡಿಸಿಕೊಳ್ಳುವ ಮೂಲಕ ಕಿಡಿಗೇಡಿತನ) ಮತ್ತು 11ನೇ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *