– ಫನ್ನಿ ಪೋಸ್ಟ್ ಮೂಲಕ ಜಾಗೃತಿ
ಮುಂಬೈ: ಹೊಸ ತಳಿಯ ಕೊರೊನಾ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರ ಜನವರಿ 31 ರವರೆಗೆ ಲಾಕ್‍ಡೌನ್ ಘೋಷಣೆ ಮಾಡಿದ್ದು, ಇಂದು ಸಂಜೆಯಿಂದ ಮುಂಬೈ ನಗರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಜನರಿಗೆ ಮನೆಯಲ್ಲಿಯೇ ಹೊಸ ವರ್ಷ ಆಚರಿಸಿ ಎಂದು ಹೇಳಿರುವ ಪೊಲೀಸರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಮುಂಬೈ ಪೊಲೀಸರು ಟ್ವಿಟ್ಟರ್ ನಲ್ಲಿ ಇಬ್ಬರು ಗೆಳೆಯರ ವಾಟ್ಸಪ್ ಚಾಟ್ ಸ್ಕ್ರೀನ್ ಶಾಟ್ ಶೇರ್ ಮಾಡಿಕೊಳ್ಳುವ ಮೂಲಕ ಜಾಗೃತಿ ಮೂಡಿಸಿದ್ದಾರೆ. ನೆಟ್ಟಿಗರು ಫನ್ನಿ ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿ ಮನೆಯಲ್ಲಿಯೇ ನ್ಯೂ ಇಯರ್ ಆಚರಿಸೋದಾಗಿ ಹೇಳಿದ್ದಾರೆ. ಕೊರೊನಾ ಸೋಂಕು ಹಬ್ಬುವ ಆತಂಕದಿಂದ ಪೊಲೀಸರು ನೈಟ್‍ಕರ್ಫ್ಯೂ ವಿಧಿಸಿವೆ.
https://twitter.com/MumbaiPolice/status/1344485533876105217
ಏನದು ಪೋಸ್ಟ್?: ಇಬ್ಬರು ಗೆಳೆಯರು ಸಂಭಾಷಣೆ ನಡೆಸಿರುವಂತಿರುವ ವಾಟ್ಸಪ್ ಚಾಟ್ ಫೋಟೋವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಒಬ್ಬ ಗೆಳೆಯ, ಇವತ್ತಿನ ರಾತ್ರಿ ಏನು ಪ್ಲಾನ್? ನಿನ್ನ ಮನೆನಾ ಅಥವಾ ನನ್ನ ಮನೆಯಲ್ಲಾ? ಎಂದು ಕೇಳಿದ್ದಾನೆ. ಇದಕ್ಕೆ ಉತ್ತರಿಸಿರೋ ಗೆಳೆಯ ನೀನು ನಿನ್ನ ಮನೆಯಲ್ಲಿ, ನಾನು ನನ್ನ ಮನೆಯಲ್ಲಿ ಎಂದು ಹೇಳಿದ್ದಾನೆ. ಪೊಲೀಸರು ಸಿಂಗಲ್ ಆಗಿದ್ರೆ ಮಿಂಗಲ್ ಆಗಿ, ಅದು ಆನ್‍ಲೈನ್ ನಲ್ಲಿ ಎಂದು ಹೇಳಿದ್ದಾರೆ.

Leave a Reply