ಕಿಡ್ನಾಪ್ ಮಾಡಿ ನೌಕಾಪಡೆಯ ಅಧಿಕಾರಿಯನ್ನು ಪಾಲ್ಘಾರ್‌ನಲ್ಲಿ ಜೀವಂತ ಸುಟ್ಟರು

ಮುಂಬೈ: ನೌಕಾಪಡೆಯ ಅಧಿಕಾರಿಯೊಬ್ಬರನ್ನು ಅಪಹರಣ ಜೀವಂತವಾಗಿ ಸುಟ್ಟಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ನಡೆದಿದೆ.

ಹತ್ಯೆಯಾದ ನೌಕಾಪಡೆಯ ಅಧಿಕಾರಿಯನ್ನು ಸೂರಜ್ ಕುಮಾರ್ ದುಬೆ (27) ಎಂದು ಗುರುತಿಸಲಾಗಿದೆ. ಮೂಲತಃ ಜಾರ್ಖಂಡ್ ರಾಂಚಿಯವರಾದ ಸೂರಜ್ ಕುಮಾರ್ ಅವರನ್ನು ಚೆನ್ನೈ ವಿಮಾನ ನಿಲ್ದಾಣದಿಂದ 3 ಜನ ಅಪಹರಣಕಾರರು ಅಪಹರಣ ಮಾಡಿ ಮೊಬೈಲ್ ಕಸಿದುಕೊಂಡು ಕಾರಿನಲ್ಲಿ 3ದಿನ ಚೆನ್ನೈನಲ್ಲಿ ಇರಿಸಿ ನಂತರ ಪಾಲ್ಘರ್‍ ನ ವಿವಾಜಿಗೆ ಕರೆದುಕೊಂಡು ಹೋಗಿ ಇರಿಸಿಕೊಂಡಿದ್ದಾರೆ.

ಅಪಹರಣಕಾರರು 10 ಲಕ್ಷ ರೂಪಾಯಿಗಾಗಿ ನೌಕಾಪಡೆಯ ಅಧಿಕಾರಿಯೊಂದಿಗೆ ಬೇಡಿಕೆ ಇಟ್ಟಿದ್ದರು. ಅದರೆ ಈ ಹಣವನ್ನು ಕೊಡಲು ಒಪ್ಪದ ಕಾರಣ ಫೆಬ್ರವರಿ 5ರಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸೂರಜ್ ಕುಮಾರ್ ಅವರನ್ನು ಕೊಂದಿದ್ದಾರೆ.

ತೀವ್ರ ಸುಟ್ಟಗಾಯವಾಗಿದ್ದ ದುಬೆ ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆದಿತ್ತು. ಆದರೆ ಅಷ್ಟರಲ್ಲಾಗಲೇ ಕೊನೆಯುಸಿರೆಳೆದಿದ್ದರು ಎಂದು ಪಾಲ್ಘರ್ ಎಸ್.ಪಿ ದತ್ತಾತ್ರೇಯ ಶಿಂಧೆ ತಿಳಿಸಿದ್ದಾರೆ.

ಪಾಲ್ಘರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಹರಣಕಾರರನ್ನು ಪತ್ತೆಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಹಿಂದೆ ಇಬ್ಬರು ಸಾಧುಗಳನ್ನು ಪಾಲ್ಘರ್‍ ನಲ್ಲಿ ಹತ್ಯೆ ಮಾಡಲಾಗಿತ್ತು, ಇದು ದೇಶಾದ್ಯಂತ ಬಾರಿ ಸುದ್ದಿಗೆ ಗ್ರಾಸವಾಗಿತ್ತು.

Comments

Leave a Reply

Your email address will not be published. Required fields are marked *