ನೋಡ ನೋಡ್ತಿದ್ದಂತೆ ಕೊಚ್ಚಿ ಹೋದ ಸೇತುವೆ

-ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಶ್ರೀನಗರ: ಇಂದು ಸುರಿದ ಭಾರೀ ಮಳೆಗೆ ಸೇತುವೆಗೆ ಮಧ್ಯ ಭಾಗ ಧಾರಾಶಾಯಿ ನದಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಜಮ್ಮುವಿನ ಗಡಿಗಢನಲ್ಲಿ ನಡೆದಿದೆ. ಸೇತುವೆ ಕೊಚ್ಚಿಕೊಂಡು ಹೋಗ್ತಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜಮ್ಮು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು , ನದಿಗಳು ತುಂಬಿ ಹರಿಯುತ್ತಿವೆ. ಜಮ್ಮುವಿನ ಹಲವು ಭಾಗಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಸೋಮವಾರ ಜಾನುವಾರಗಳನ್ನು ಮೇಯಿಸಲು ಹೋದ ನಾಲ್ವರು ಭೂಕುಸಿತದಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.

ಭಾರೀ ಮಳೆಯಿಂದಾಗಿ ಜಮ್ಮು-ಶ್ರೀನಗರ ನಡುವಿನ 270 ಕಿ.ಮೀ. ಉದ್ದದ ಹೆದ್ದಾರಿ ಎರಡನೇ ದಿನವೂ ಬಂದ್ ಆಗಿದೆ. ಇನ್ನು ರಾಮಬನ್ ಜಿಲ್ಲೆಯ ಹಲವಡೆ ಭೂಕುಸಿತವಾಗಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಮಳೆ ಹಿನ್ನೆಲೆ ಕಾಶ್ಮೀರಿ ಘಾಟಿ ಸಂಪರ್ಕ ಕಲ್ಪಿಸುವ ಹೆದ್ದಾರಿಯನ್ನ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರವೇ ಬಂದ್ ಮಾಡಲಾಗಿದೆ.

 

Comments

Leave a Reply

Your email address will not be published. Required fields are marked *