ನೋಡ ನೋಡುತ್ತಲೇ ಸಿಂಹದ ಬೋನಿಗೆ ಬಿದ್ದ

– ಸಿಬ್ಬಂದಿಯ ಹರಸಾಹಸದಿಂದ ವ್ಯಕ್ತಿ ಪಾರು

ಕೋಲ್ಕತ್ತಾ: ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ಅಲಿಪೋರ್ ಮೃಗಾಲಯದಲ್ಲಿ ಸಿಂಹವನ್ನು ನೋಡ ನೋಡುತ್ತ ಬೋನಿಗೆ ಬಿದ್ದು ಸಿಂಹದ ದಾಳಿಯಿಂದ ಗಾಯಗೊಂಡು ಅದೃಷ್ಟವಶತ್ ಪಾರಾಗಿದ್ದಾನೆ.

ಮೃಗಾಲಯದಲ್ಲಿ ಪ್ರಾಣಿಗಳನ್ನು ನೋಡುತ್ತಿದ್ದ ವ್ಯಕ್ತಿ ಏಕಾಏಕಿ ಸಿಂಹದ ಬೋನಿಗೆ ನುಗ್ಗಿದ್ದಾನೆ. ಇದನ್ನು ಗಮನಿಸಿದ ಸಿಂಹ ಆತನ ಮೇಲೆ ದಾಳಿ ಮಾಡಿದೆ. ನಂತರ ರಕ್ಷಣಾ ಸಿಂಬಂದಿ ಹರಸಾಹಸಪಟ್ಟು ನಿರಂತರ ಕಾರ್ಯಚರಣೆಯ ಮೂಲಕ ವ್ಯಕ್ತಿಯನ್ನು ಬೋನಿನಿಂದ ಹೊರತಂದು ರಕ್ಷಣೆ ಮಾಡಲಾಗಿದೆ.

ಗಾಯಗೊಂಡ ವ್ಯಕ್ತಿಯನ್ನು ಎಸ್‍ಎಸ್‍ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟದಲ್ಲಿ ಇಡಲಾಗಿದೆ. ಆಸ್ಪತ್ರೆಯ ವೈದ್ಯರ ಪ್ರಕಾರ ವ್ಯಕ್ತಿಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಿಂಹವು ವ್ಯಕ್ತಿಯ ಕಾಲಿನ ತೊಡೆಯ ಭಾಗಕ್ಕೆ ತೀವ್ರವಾಗಿ ಗಾಯಗೊಳಿಸಿದ್ದು ರಕ್ಷಣಾ ಸಿಬ್ಬಂದಿ ಸಿಂಹದ ಗಮನವನ್ನು ಬೇರೆಡೆಗೆ ಸೆಳೆದು ವ್ಯಕ್ತಿಯನ್ನು ರಕ್ಷಿಸಿದ್ದಾರೆ.

ಮೃಗಾಲಯದಲ್ಲಿನ ಸಿಂಹದ ಬೋನಿಗೆ ಆ ವ್ಯಕ್ತಿ ಹೇಗೆ ಪ್ರವೇಶಿಸಿದ್ದಾನೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು. ವ್ಯಕ್ತಿಯು ಮಾನಸಿಕ ಅಸ್ವಸ್ಥ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *