ನೈಟ್ ಕರ್ಫ್ಯೂ ಇಲ್ಲ ಅಂದ್ರೂ ಬಿಗ್ ರೂಲ್ಸ್ ಇರುತ್ತೆ: ಬೊಮ್ಮಾಯಿ

ಬೆಂಗಳೂರು: ನೈಟ್ ಕರ್ಫ್ಯೂ ಆದೇಶವನ್ನು ಈಗಾಗಲೇ ವಾಪಸ್ ಪಡೆಯಲಾಗಿದೆ. ಹಾಗಂತ ಹೊಸ ವರ್ಷಾಚರಣೆ ನಿಮ್ಮ ಇಷ್ಟದಂತೆ ನಡೆಸಲು ಅವಕಾಶ ಇರಲ್ಲ. ನೈಟ್ ಕರ್ಫ್ಯೂ ಇಲ್ಲವಾದರೂ ಬಿಗ್ ರೂಲ್ಸ್ ಇರುತ್ತೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಬೆಂಗಳೂರಿಗೆ ಹೊಸ ಮಾರ್ಗಸೂಚಿ ಜಾರಿಯಾಗಲಿದೆ. ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ ತರುವಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್‍ಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಹೊಸ ವರ್ಷದ ದಿನ, ಹಿಂದಿನ ದಿನ ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ಬೆಂಗಳೂರಿಗೆ ಪ್ರತ್ಯೇಕ ಗೈಡ್ ಲೈನ್ಸ್ ತರಲು ನಗರ ಪೊಲೀಸ್ ಆಯುಕ್ತರಿಗೆ ಪ್ರತ್ಯೇಕ ರೂಲ್ಸ್ ತರಲು ಸೂಚಿಸಿದ್ದೇನೆ. ಕಮಿಷನರ್ ರೂಲ್ಸ್ ಜಾರಿಗೆ ತರುತ್ತಾರೆ ಎಂದು ಹೇಳಿದ್ದಾರೆ.

ನೈಟ್ ಕರ್ಫ್ಯೂ ಬಗ್ಗೆ ಬುಧವಾರ ಹೊರಡಿಸಿದ್ದ ಆದೇಶವನ್ನು ಕೇವಲ 24 ಗಂಟೆಗಳಲ್ಲಿ ಸರ್ಕಾರ ವಾಪಸ್ ಪಡೆದಿತ್ತು. ನೈಟ್ ಕರ್ಫ್ಯೂಗೆ 6 ಗಂಟೆ ಇರುವಾಗ ಆದೇಶ ವಾಪಸ್ ಪಡೆಯೋ ಮೂಲಕ ಮತ್ತೊಮ್ಮೆ ಬಿಎಸ್‍ವೈ ಸರ್ಕಾರ ನಗೆಪಾಟಲಿಗೀಡಾಗಿದೆ. ಬೆಳಗ್ಗೆಯಷ್ಟೇ ಸರ್ಕಾರ ನೈಟ್ ಕರ್ಫ್ಯೂ ಸಮರ್ಥಿಸಿಕೊಂಡಿತ್ತು. ನೈಟ್ ಕರ್ಫ್ಯೂ ಇದ್ದರೂ ಬಸ್, ಆಟೋ, ಟ್ಯಾಕ್ಸಿ ಎಲ್ಲವೂ ಇರೋ ಬಗ್ಗೆ ಜನ ಸಾಮಾನ್ಯರು, ವಿರೋಧಪಕ್ಷದವರು, ಸ್ವಪಕ್ಷದ ನಾಯಕರೂ ಸಹಿತ ಎಲ್ಲರೂ ಪ್ರಶ್ನಿಸಿದ್ದರು. ಈ ಹಿನ್ನಲೆಯಲ್ಲಿ ಸಂಜೆ 5 ಗಂಟೆ ಹೊತ್ತಿಗೆ ದಿಢೀರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದ ಸಿಎಂ ಯಡಿಯೂರಪ್ಪ, ನೈಟ್ ಕರ್ಫ್ಯೂ ಇಲ್ಲ ಅಂತ ಪ್ರಕಟಣೆ ಹೊರಡಿಸಿದ್ದಾರೆ.

ನೈಟ್ ಕರ್ಫ್ಯೂ ವಾಪಸ್ಸಿಗೆ ಕಾರಣಗಳು..?
* ಕಾರಣ 1- ರಾತ್ರಿ 11ರ ನಂತರ ನೈಟ್ ಕರ್ಫ್ಯೂಗೆ ಜನರ ತೀವ್ರ ವಿರೋಧ
* ಕಾರಣ 2- ವಿಪಕ್ಷಗಳ ಜೊತೆ ಸ್ವಪಕ್ಷೀಯರಿಂದಲೂ ವ್ಯಕ್ತವಾದ ಟೀಕೆ
* ಕಾರಣ 3- ಆಟೋ, ಹೋಟೆಲ್, ಬಾರ್ ಮಾಲೀಕರಿಂದ ವ್ಯಕ್ತವಾದ ಪ್ರತಿರೋಧ
* ಕಾರಣ 4- ನೈಟ್ ಕರ್ಫ್ಯೂ ಉದ್ದೇಶ, ಪ್ರಯೋಜನ ವಿವರಿಸುವಲ್ಲಿ ವಿಫಲ
* ಕಾರಣ 5- ಮಾಧ್ಯಮಗಳು ಹೇರಿದ ಒತ್ತಡ

Comments

Leave a Reply

Your email address will not be published. Required fields are marked *