ನೆಲಮಂಗಲ ಪೊಲೀಸರ ಭರ್ಜರಿ ಕಾರ್ಯಾಚರಣೆ – 1.08 ಕೋಟಿ ಮೌಲ್ಯದ ಚಿನ್ನ, ನಗದು ವಶ

ನೆಲಮಂಗಲ: ನೆಲಮಂಗಲ ಉಪವಿಭಾಗ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ವಿವಿಧ ಪ್ರಕರಣವನ್ನ ಭೇದಿಸಿ ಜನರು ಹಾಗೂ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕಳೆದ ಜನವರಿ ಹಾಗೂ ಲಾಕ್ ಡೌನ್ ಸಮಯದಲ್ಲಿ ಮನೆಗಳ ಕಳವು, ಹೆದ್ದಾರಿಯಲ್ಲಿ ದರೋಡೆ, ಸುಲಿಗೆ, ಸರಗಳ್ಳತನ, ಸೇರಿದಂತೆ ಇನ್ನಿತರ ಪ್ರಕರಣಗಳಲ್ಲಿ ಬರೋಬ್ಬರಿ 1 ಕೋಟಿ 8 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಲಕ್ಷಾಂತರ ರೂ. ಹಣವನ್ನ ವಶ ಪಡಿಸಿಕೊಂಡಿದ್ದು, ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ನೇತೃತ್ವದಲ್ಲಿ ಸಿಬ್ಬಂದಿಗೆ ಪ್ರಶಂಸೆ ನೀಡಲಾಯಿತು. ಇದನ್ನು ಓದಿ: ಕೊರೊನಾ ನಿಯಮ ಮರೆತು ಲಸಿಕೆಗೆ ಮುಗಿಬಿದ್ದ ಜನರು

ಇದೇ ವೇಳೆ ಚಿನ್ನಾಭರಣ, ಹಣ ಕಳೆದುಕೊಂಡ ಜನರಿಗೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ವಾಪಸ್ ನೀಡಿದರು. ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ.ಚನ್ನಣ್ಣವರ್, ಎಎಸ್ಪಿ ಲಕ್ಷ್ಮಿ ಗಣೇಶ್, ಡಿವೈಎಸ್ ಪಿ ಜಗದೀಶ್ ವೃತ್ತ ನಿರೀಕ್ಷಿತರಾದ ಕುಮಾರ್, ಹರೀಶ್, ಮಂಜುನಾಥ್, ಅರುಣ್, ಉಪ ವಿಭಾಗದ ಪಿಎಸ್‍ಐ ಸಿಬ್ಬಂದಿ ಉಪಸ್ಥಿತರಿದ್ದರು. ಇದೇ ವೇಳೆ ಅಪರಾಧ ವಿಭಾಗದಲ್ಲಿ ಪ್ರಕರಣ ಭೇದಿಸಿದ ಸಿಬ್ಬಂದಿಗೆ ಪ್ರಶಂಸೆ ಪತ್ರವನ್ನ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನು ಓದಿ: ಇಬ್ಬರು ಮನೆಗಳ್ಳರ ಬಂಧನ- ಭಾರೀ ಪ್ರಮಾಣ ಚಿನ್ನಾಭರಣ, ನಗದು ವಶ

Comments

Leave a Reply

Your email address will not be published. Required fields are marked *