ಬೆಂಗಳೂರು: ನೀವು ಮಾಡಿದ್ದು ತಪ್ಪು ಅಂತ ನಿಮಗೆ ಈಗಲಾದರೂ ಅನ್ನಿಸುತ್ತಿದೆಯೇ? ಎಂದು ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಕೆಜಿ ಹಳ್ಳಿ ಗಲಾಟೆ-ಮಾಜಿ ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ

ಸಿದ್ದರಾಮಯ್ಯ ನಗರದಲ್ಲಿ ನಡೆದಿರುವ ಗಲಭೆಯ ಬಗ್ಗೆ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದರು. ಸಿದ್ದರಾಮಯ್ಯ ಮಾಡಿದ್ದ ಟ್ವೀಟ್‍ಗೆ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು, ಎಸ್‍ಡಿಪಿಐ ಮತ್ತು ಕೆಎಫ್‌ಡಿ 1600 ಪುಂಡರ ವಿರುದ್ಧ ಇದ್ದ 175 ಕ್ರಿಮಿನಲ್ ಕೇಸುಗಳನ್ನು ನೀವು 2015ರಲ್ಲಿ ವಾಪಸ್ಸು ತೆಗೆದುಕೊಂಡಿದ್ದು ತಪ್ಪು. ನೀವು ಮಾಡಿದ್ದು ತಪ್ಪು ಅಂತ ನಿಮಗೆ ಈಗಲಾದರೂ ಅನ್ನಿಸುತ್ತಿದೆಯೇ ಸಿದ್ದರಾಮಯ್ಯನವರೇ?” ಎಂದು ವ್ಯಂಗ್ಯ ಮಾಡಿದ್ದಾರೆ.
ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿ ಖಂಡನೀಯ. ಇದರಿಂದ ಪೊಲೀಸರು ನೈತಿಕ ಸ್ಥೈರ್ಯ ಕಳೆದು ಕೊಳ್ಳಬಾರದು.
ಇಂತಹ ಪ್ರಕರಣಗಳ ಸಂದರ್ಭಗಳಲ್ಲಿ ಪೊಲೀಸರು ತಕ್ಷಣ ವಿವೇಚನೆಯಿಂದ ನಿರ್ಧಾರ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು
ಸಣ್ಣ ನಿರ್ಲಕ್ಷ್ಯ ಅನಾಹುತಕ್ಕೆ ದಾರಿಮಾಡಿಕೊಡುತ್ತದೆ. #Kavalbyrasandra
4/4— Siddaramaiah (@siddaramaiah) August 12, 2020
ಅಲ್ಲದೇ “ಇಷ್ಟಾಗಿಯೂ ಪುಂಡ ಮುಸಲ್ಮಾನರನ್ನು ಖಂಡಿಸಲು ಏಕೆ ನಿಮಗೆ ಮನಸ್ಸು ಬರುತ್ತಿಲ್ಲ ಸಾರ್?” ಎಂದು ಪ್ರತಾಪ್ ಸಿಂಹ ಮಾಜಿ ಸಿದ್ದರಾಮಯ್ಯ ಅವರ ಕಾಳೆದಿದ್ದಾರೆ.
ಸಿದ್ದರಾಮಯ್ಯ “ಕಳೆದ ರಾತ್ರಿ ಕಾವಲಭೈರಸಂದ್ರದಲ್ಲಿ ನಡೆದ ಗಲಭೆ ಮತ್ತು ಅದಕ್ಕೆ ಪ್ರಚೋದನೆ ನೀಡಿದ ಘಟನೆಗಳೆರಡೂ ಖಂಡನೀಯ. ಹಿಂದೂ-ಮುಸ್ಲಿಮ್ ಎರಡು ಸಮುದಾಯದವರು ಸಂಯಮದಿಂದ ವರ್ತಿಸಿ ಶಾಂತಿ ಕಾಪಾಡಬೇಕೆಂದು ಕೈಮುಗಿದು ಮನವಿ ಮಾಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದರು.
ಎಸ್‍ಡಿಪಿಐ ಮತ್ತು ಕೆಯಫ್ಡಿಯ 1600 ಪುಂಡರ ವಿರುದ್ಧ ಇದ್ದ 175 ಕ್ರಿಮಿನಲ್ ಕೇಸುಗಳನ್ನು ನೀವು 2015ರಲ್ಲಿ ವಾಪಸ್ಸು ತೆಗೆದುಕೊಂಡಿದ್ದು ತಪ್ಪು ಅಂತ ನಿಮಗೆ ಈಗಲಾದರೂ ಅನ್ನಿಸುತ್ತಿದೆಯೇ ಸಿದ್ದರಾಮಯ್ಯನವರೇ? ಇಷ್ಟಾಗಿಯೂ ಪುಂಡ ಮುಸಲ್ಮಾನರನ್ನು ಖಂಡಿಸಲು ಏಕೆ ನಿಮಗೆ ಮನಸ್ಸು ಬರುತ್ತಿಲ್ಲ ಸಾರ್? https://t.co/rU8wSFQR51
— Prathap Simha (@mepratap) August 12, 2020
ಗಲಭೆಗೆ ಪ್ರಚೋದಿಸಿದ್ದ ಮತ್ತು ಹಿಂಸಾಚಾರದ ಮೂಲಕ ಪ್ರತಿಕ್ರಿಯಿಸಿದ್ದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸ್ ಕಮಿಷನರ್‍ಗೆ ತಿಳಿಸಿದ್ದೇನೆ. ಶಾಂತಿ ಸ್ಥಾಪನೆಯ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ನಮ್ಮ ಪಕ್ಷದ ಸಂಪೂರ್ಣ ಸಹಕಾರ ಇದೆ ಎಂದಿದ್ದರು.

Leave a Reply