ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗಿದೆ

ಉಡುಪಿ: ಒಂದೆಡೆ ಕೊರೊನಾ ಮಹಾಮಾರಿ, ಇನ್ನೊಂದೆಡೆ ಮಹಾಮಳೆ, ಚಂಡಮಾರುತ ಈ ಎಲ್ಲ ಗಂಡಾಂತರಗಳಿಂದಾಗಿ ಮೀನುಗಾರರು ಅಕ್ಷರ ಸಹ ನಲುಗಿ ಹೋಗಿದ್ದು, ಕೆಲಸವಿಲ್ಲದಂತಾಗಿ ಅಂತರಾಜ್ಯ ಮೀನುಗಾರರು ತಮ್ಮ ರಾಜ್ಯಗಳತ್ತ ಪಯಣ ಬೆಳೆಸಿದ್ದಾರೆ. ದೋಣಿಗಳನ್ನು ಟೆಂಪೋ ಮೇಲೆ ಹಾಕಿಕೊಂಡು ಸಪ್ಪೆ ಮೋರೆ ಹೊತ್ತು ಊರಿನತ್ತ ನಡೆದಿದಿದ್ದಾರೆ. ಈ ಮೂಲಕ ದೋಣಿ ನೀರ ಬಿಟ್ಟು ನೆಲದ ಮೇಲೆ ಸಾಗಿದೆ.

ಕೊರೊನಾ, ಮಹಾಮಳೆ ಹಾಗೂ ಚಂಡಮಾರುತದ ಎಫೆಕ್ಟ್ ನಿಂದಾಗಿ ಕಡಲ ಮಕ್ಕಳು ಕೆಲಸವಿಲ್ಲದೆ ಹತಾಶರಾಗಿದ್ದಾರೆ. ಅದರಲ್ಲೂ ಮಲ್ಪೆ ಮೀನುಗಾರಿಕಾ ಬಂದರನ್ನು ನಂಬಿ ಬಂದಿದ್ದ ಹೊರ ರಾಜ್ಯದ ಮೀನುಗಾರರು ಬರಿಗೈಯಲ್ಲಿ ವಾಪಾಸ್ ಹೊರಟಿದ್ದಾರೆ. ಪ್ರಾಕೃತಿಕ ವಿಕೋಪದ ಜೊತೆ ಕೊರೊನಾ ಸಾಂಕ್ರಾಮಿಕ ರೋಗ ಮೀನುಗಾರರ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ. ಇದರಿಂದಾಗಿ ಸಂಕಷ್ಟಕ್ಕೊಳಗಾಗಿರುವ ಮೀನುಗಾರರು ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ.

ಕೇರಳ, ತಮಿಳುನಾಡಿನ ಮೀನುಗಾರರು ಕೆಲಸವಿಲ್ಲದೆ ತಮ್ಮ ಊರುಗಳಿಗೆ ವಾಪಾಸಾಗುತ್ತಿದ್ದು, ಟೆಂಪೋ ಮೇಲೆ ದೋಣಿ ಹೊತ್ತು ತೆರಳಿದ್ದಾರೆ. ಈ ದೃಶ್ಯ ಕಂಡ ಎಂತಹವರಿಗೂ ಕಣ್ಣಂಚಲ್ಲಿ ನೀರು ಬರದಿರದು. ಆ ರೀತಿಯ ಸ್ಥಿತಿಯಲ್ಲಿ ಕಡಲ ಮಕ್ಕಳು ಹೊರಟಿದ್ದಾರೆ. ಟೆಂಪೋಗಳ ಮೇಲೆ ದೊಡ್ಡ ದೋಣಿಗಳನ್ನು ಕಟ್ಟಿಕೊಂಡು ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದ್ದಾರೆ. ಚಂಡಮಾರುತ, ಮಹಾಮಳೆ, ಕೊರೊನಾ ಎಲ್ಲದರಿಂದಾಗಿ ಮೀನುಗಾರಿಕೆಯೇ ನಡೆದಿಲ್ಲ ಹೀಗಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸುಮಾರು 6-7 ತಿಂಗಳುಗಳ ಕಾಲ ಮಲ್ಪೆಗೆ ಬಂದು ಮೀನುಗಾರಿಗೆ ನಡೆಸುತ್ತಾರೆ. ಮಳೆಗಾಲ ಬರುತ್ತಿದ್ದಂತೆ ವಾಪಾಸಾಗುತ್ತಿದ್ದರು. ಆದರೆ ಈ ಬಾರಿ ಜೂನ್ ವರೆಗೆ ಲಾಕ್‍ಡೌನ್ ಇದ್ದಿದ್ದರಿಂದ ಮೀನುಗಾರಿಕೆ ನಡೆದಿಲ್ಲ. ನಂತರ ನಿಸರ್ಗ ಚಂಡಮಾರುತದಿಂದಾಗಿ ವಾಯುಭಾರ ಕುಸಿತ ಉಂಟಾಯಿತು. ಹೀಗಾಗಿ ಮೀನುಗಾರಿಕೆಗೆ ಭಾರೀ ಪ್ರಮಾಣದಲ್ಲಿ ಹೊಡೆತ ಬಿದ್ದಿದೆ.

Comments

Leave a Reply

Your email address will not be published. Required fields are marked *