ನೀನು ವ್ಯಭಿಚಾರಿ, ನಿನ್ನ ಧ್ವನಿ ನಾಯಿಯಂತಿದೆ – ಮಹಿಳೆಗೆ ನೆರೆಮನೆಯರಿಂದ ಕಿರುಕುಳ

ಮುಂಬೈ: ಮಹಿಳೆಯೊಬ್ಬಳು ತನ್ನ ಕೂದಲನ್ನು ಕತ್ತರಿಸಿದ್ದಕ್ಕೆ ನೆರೆಮನೆಯವರಿಂದ ಕಿರುಕುಳಕ್ಕೆ ಒಳಗಾಗಿದ್ದಾಳೆ.

ಸಂತ್ರಸ್ತೆಯು ಖಾಸಗಿ ಸಂಸ್ಥೆಯೊಂದರಲ್ಲಿ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಡಿಸೆಂಬರ್‍ನಲ್ಲಿ ಮನೆ ಬದಲಾಯಿಸಿ ಅಪಾರ್ಟ್‍ಮೆಂಟ್ ನಲ್ಲಿ ವಾಸಿಸಲು ಆರಂಭಿಸಿದ್ದಾಳೆ. ಈ ವೇಳೆ 53 ವರ್ಷದ ಮಹಿಳೆಯೊಬ್ಬಳು ಸಂತ್ರಸ್ತೆ ನೋಡಲು ಮಂಗಳಮುಖಿಯಂತಿದ್ದಾಳೆ. ಆಕೆಯ ಧ್ವನಿ ನಾಯಿಯ ಧ್ವನಿಯಂತೆ ಇದೆ ಎಂದು ಹೇಳಿದ್ದಾಳೆ. ಇದರಿಂದ ಬೇಸರಗೊಂಡ ಸಂತ್ರಸ್ತೆ ಇದೀಗ ಮಹಿಳೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಈ ವಿಚಾರವಾಗಿ ಸಂತ್ರಸ್ತೆಯ ವಕೀಲರಾದ ಸಿದ್ದೇಶ್ ಬೋರ್ಕರ್, ಮಹಿಳೆ ಸಂತ್ರಸ್ತೆ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿದ್ದು, ಆಕೆಯನ್ನು ಮಂಗಳಮುಖಿ ಎಂದು ಅವಮಾನ ಮಾಡಿದ್ದಾಳೆ. ಸಂತ್ರಸ್ತೆಯು ಒಬ್ಬಂಟಿಯಾಗಿ ವಾಸಿಸುತ್ತಿರುವುದನ್ನೇ ಗುರಿಯಾಗಿಸಿಕೊಂಡು ಆರೋಪಿ ಆಕೆಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ.

ಮನೆ ಬದಲಿಸಿ ಸಂತ್ರಸ್ತೆ ಮೊದಲು ಅಪಾರ್ಟ್‍ಮೆಂಟ್ ಗೆ ಬಂದಾಗ ಮಹಿಳೆ ಆಕೆಗೆ ತಿಂಡಿ ನೀಡುತ್ತಿದ್ದಳು. ಆದರೆ ಸಂತ್ರಸ್ತೆ ತಿಂಡಿ ಇಷ್ಟವಾಗುತ್ತಿಲ್ಲ ಎಂದು ತಿಳಿಸಿದಾಗ ಮಹಿಳೆ ಸಂತ್ರಸ್ತೆಗೆ ತಿಂಡಿ ನೀಡುವುದನ್ನು ನಿಲ್ಲಿಸಿ ಅಷ್ಟು ದಿನ ನೀಡಿದ ತಿಂಡಿಗೆ ಹಣ ಪಾವತಿಸುವಂತೆ ತಿಳಿಸಿದ್ದಳು. ಅಲ್ಲದೆ ಡಿಸೆಂಬರ್ 12 ರಂದು ಮಹಿಳೆ ಮನೆಯಲ್ಲಿ ಆಕೆಯ ಮಗ ಪಾರ್ಟಿಯನ್ನು ಆಯೋಜಿಸಿ ಜೋರು ವಾಲ್ಯೂಮ್ ನೀಡಿ ಮುಂಜಾನೆ 3ವರೆಗೂ ಮ್ಯೂಸಿಕ್ ಹಾಕಿದ್ದಾನೆ. ಮುಂಜಾನೆಯಾದರೂ ಮ್ಯೂಸಿಕ್ ನಿಲ್ಲದ ಕಾರಣ ಸಂತ್ರಸ್ತೆ ಮಹಿಳೆ ಮನೆಯ ಬಾಗಿಲು ತಟ್ಟಿ ವಾಲ್ಯೂಮ್ ಕಡಿಮೆ ಮಾಡಲು ವಿನಂತಿಸಿದ್ದಾಳೆ. ಆದರೆ ಸಂತ್ರಸ್ತೆ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ತದನಂತರ ಸಂತ್ರಸ್ತೆ ಆರೋಪಿ ಕುಟುಂಬದೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಾಳೆ.

ಈ ಕಾರಣಕ್ಕೆ ಆರೋಪಿ ನನ್ನನ್ನು ಹುಚ್ಚಿ, ಪುರುಷ ಅಥವಾ ಮಹಿಳೆಯೋ ಎಂದು ಪ್ರಶ್ನಿಸಿದ್ದಾಳೆ. ಜೊತೆಗೆ ನನ್ನ ಧ್ವನಿ ನಾಯಿ ಧ್ವನಿಯನ್ನು ಹೋಲುತ್ತದೆ ಎಂದು ಹೇಳಿದ್ದಾಳೆ. ಜೊತೆಗೆ ನನ್ನನ್ನು ವೇಶ್ಯೆ ಎಂಬ ಅವಾಚ್ಯ ಪದಗಳಿಂದ ನಿಂದಿಸಿ ಕಿರುಕುಳ ನೀಡಿದ್ದಾಳೆ ಎಂದು ಸಂತ್ರಸ್ತೆ ಮಹಿಳೆ ವಿರುದ್ಧ ದೂರು ದಾಖಲಿಸಿದ್ದಾಳೆ.

Comments

Leave a Reply

Your email address will not be published. Required fields are marked *