ನೀನಾ-ನಾನಾ ಜಗಳಕ್ಕಿಳಿದ ಚಕ್ರವರ್ತಿ, ಪ್ರಶಾಂತ್..!

ಬಿಗ್‍ಬಾಸ್ ಮನೆಯಲ್ಲಿ ಗೇಮ್ ಕಿಚ್ಚು ಶುರುವಾಗಿದೆ ಕುಚುಕು ಗೆಳೆಯರಾಗಿದ್ದ ಸಂಬರಗಿ, ಪ್ರಶಾಂತ್ ಕಿತ್ತಾಡಿಕೊಂಡಿದ್ದಾರೆ. ದೊಡ್ಮನೆಯಲ್ಲಿ ಎಲ್ಲಿ ನೋಡಿದರೂ ಒಟ್ಟಿಗೆ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುವ ಇವರಿಬ್ಬರ ಮಧ್ಯೆ ಟಾಸ್ಕ್ ವೇಳೆ ಜೋರಾದ ವಾಗ್ವಾದ ನಡೆದಿದೆ.

ತಾರಾಬಲದ ಅಂತಿಮ ಟಾಸ್ಕ್ ಆಗಿರುವ ‘ಜಾರಿಗೆದ್ದೆ ಟಾಸ್ಕ್’ನಲ್ಲಿ 2 ತಂಡಗಳಿಗೆ ಪ್ರತ್ಯೇಕವಾದ ಡ್ರಮ್‍ಗಳನ್ನು ಇಡಲಾಗಿತ್ತು. ಬಜರ್ ಆದಾಗ ಎರಡು ತಂಡದ ಸದಸ್ಯರು ಸರದಿಯಲ್ಲಿ ಡ್ರಮ್‍ನಿಂದ ಮಗ್‍ನಲ್ಲಿ ನೀರು ತಂಬಿಸಿಕೊಂಡು ಹೋಗಿ ಕೊನೆಯ ಬದಿಯಲ್ಲಿ ಇರಿಸಲಾದ ಜಾರಿಗೆ ಸುರಿಬೇಕಿತ್ತು. ಹೀಗೆ ಸಾಗುವಾಗ ತಮಗೆ ಮೀಸಲಾದ ಹಾಸಿಗೆಯಲ್ಲಿ ಸ್ಲೈಡ್ ಮಾಡಿಕೊಂಡು ಜಾರುತ್ತಾ ಟ್ರ್ಯಾಕ್‍ನಲ್ಲಿ ಹೋಗಬೇಕು. ನೀರನ್ನು ಜಾರಿಗೆ ಸುರಿದು ಅದೇ ಟ್ರ್ಯಾಕ್‍ನಲ್ಲಿ ಹಿಂದಿರುಗಿ ಆರಂಭದ ತುದಿಯಲ್ಲಿ ನಿಂತಿರುವ ತಂಡದ ಮತ್ತೊಬ್ಬ ಸದಸ್ಯನಿಗೆ ಮಗ್ ಕೊಡಬೇಕಿತ್ತು. ಹೀಗೆ ರಿಲೇ ಮಾದರಿಯಲ್ಲಿ ಆಡುತ್ತಾ ತಮ್ಮ ಜಾರನ್ನು ಮಾರ್ಕ್ ವರೆಗೆ ಮೊದಲು ತುಂಬಿಸುವ ತಂಡ ಈ ಟಾಸ್ಕ್‍ನಲ್ಲಿ ಗೆದ್ದು ಕ್ಯಾಪ್ಟನ್ಸಿ ಆಯ್ಕೆಯ ಸ್ಪರ್ಧೆಗೆ ಭಾಗವಹಿಸಲು ಅವಕಾಶ ಪಡೆಯುತ್ತದೆ ಎಂದು ಬಿಗ್‍ಬಾಸ್ ಸೂಚಿಸಿದ್ದರು.

ಸೂರ್ಯ ಸೈನೆ ತಂಡ ಆಟವನ್ನು ಬೇಗ ಮುಗಿಸಿದೆ. ಆಟದ ವೇಳೆ ಶಮಂತ್ ಪೌಲ್ ಮಾಡಿದ್ದಾನೆ ಎಂದು ಚಕ್ರವರ್ತಿ ಹೇಳಿದ್ದಾರೆ. ಆಗ ಪ್ರಶಾಂತ್ ನಮ್ಮ ನಮ್ಮಲ್ಲೇ ತಪ್ಪು ಕಂಡುಹಿಯಬಾರದು ಎಂದು ಪ್ರಶಾಂತ್ ಶಮಂತ್‍ಗೆ ಸಪೋರ್ಟ್ ಮಾಡಿ ಹೇಳಿದ್ದಾರೆ. ಆಗ ಸಿಟ್ಟಿಗೆದ್ದ ಚಕ್ರವರ್ತಿ ಆಟ ಎಂದರೆ ಹೇಳುವುದು ಇದ್ದದ್ದೇ, ನಾನು ಅವನಿಗೆ ಹೇಳಿದೆ ನೀನು ಯಾಕೆ ಮಧ್ಯಕ್ಕೆ ಬರ್ತಿಯಾ? ಎಲ್ಲಾ ವಿಚಾರಗಳಿಗೂ ಕೊಂಕು ತೆಗೆಯುತ್ತಿಯಾ ಎಂದು ಕಿತ್ತಾಡಿಕೊಂಡಿದ್ದಾರೆ ಅಲ್ಲೇ ಇದ್ದ ಅರವಿಂದ್ ಜಗಳವನ್ನು ಬಿಡಿಸಲು ಪ್ರಯತ್ನಿಸಿದ್ದಾರೆ. ಆದರೂ ಗೆಳಯರಿಬ್ಬರ ನಡುವೆ ಮನಸ್ತಾಪ ಉಂಟಾಗಿದೆ.

ಯಾಕೆ ಕಿರುಚುತ್ತಾ ಇದ್ದೀಯಾ ಎಂದು ನಾನು ಕೇಳಿದೆ ಅಷ್ಟೇ ಎಂದು ಸಂಬರಗಿ ಹೇಳಿದ್ದಾರೆ. ನೀನೂ ಹಾಗೇ ಹೇಳಿಲ್ಲ ನೀನು ಹಾಗೇ ಹೇಳಿದರೆ ನಾನು ಸುಮ್ಮನೇ ಆಗುತ್ತಿದ್ದೆನು. ನೀನು ಪ್ರೀತಿಯಿಂದ ಬಂದು ಆಟ ಗೆದ್ದೆವು ಎಂದು ಹೇಳಿದ್ದರೆ ನಾನು ಸುಮ್ಮನೇ ಆಗುತ್ತಿದ್ದೆನು. ನನ್ನ ಮೇಲೆ ಪ್ರೀತಿ ಇಲ್ಲ ನಿನಗೆ, ಭಯ ನನಗೆ ಮತ್ತೇ ಸೋತರೆ ಹೀಗಾಗಿ ನಾನು ಶಮಂತ್‍ಗೆ ಪೌಲ್ ಮಾಡಬೇಡ ಎಂದು ಹೇಳಿದ್ದೂ ಅಷ್ಟೇ. ನನ್ನದು ತಪ್ಪು ಎಂದು ಯಾಕೆ ಹೇಳುತ್ತಿರಾ? ಶಮಂತ್ ಹೇಳಿದ್ದರೆ ನಾನು ಸುಮ್ಮನೇ ಆಗುತ್ತಿದ್ದೆನು. ಸಂಬರಗಿ ಬಂದು ಯಾಕೆ ಹೇಳುತ್ತಾರೆ ಎಂದು ಹೀಗೆ ಕೂಗಾಡಿದ್ದಾರೆ. ಆಗ ದಿವ್ಯಾ, ಅರವಿಂದ್ ಇಬ್ಬರು ಬಂದು ಸುಮ್ಮನಾಗುವಂತೆ ಸಮಾಧಾನ ಮಾಡಿದ್ದಾರೆ. ಅರವಿಂದ್ ಕೈ ಮುಗಿದು ಸುಮ್ಮನಾಗುವಂತೆ ಕೇಳಿದಾಗ ಇಬ್ಬರ ಜಗಳ ಅಲ್ಲೇ ತಣ್ಣಗಾಗಿದೆ.

ಇಷ್ಟು ದಿನ ಮನೆಯ ಸ್ಪರ್ಧಿಗಳ ಬಗ್ಗೆ ಚರ್ಚೆ ನಡೆಸುತ್ತಿದ್ದ ಈ ಜೋಡಿ, ಇದಿಗ ನೀನಾ ನಾನಾ ಎಂದು ಜಗಳಕ್ಕೆ ನಿಂತಿದ್ದಾರೆ. ಬಿಗ್‍ಬಾಸ್ ಮನೆಯ ದೋಸ್ತರ ನಡುವೆ ಬೆಂಕಿ ಹೊತ್ತಿ ಉರಿಯುತ್ತಿದೆ. ಇಬ್ಬರು ಸರಿ ಹೋಗುತ್ತಾರಾ ಅಥವಾ ಹೀಗೆ ದ್ವೇಷ ಮುಂದುವರಿಯಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ.

Comments

Leave a Reply

Your email address will not be published. Required fields are marked *