-ಮುಂದುವರಿದ ಕೊರೊನಾ ಮ’ರಣ’ ಕೇಕೆ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಇಂದು 9,540 ಮಂದಿಗೆ ಸೋಂಕು ತಗುಲಿದೆ. ಕೊರೊನಾಗೆ ಇಂದು 128 ಸೋಂಕಿತರ ಬಲಿಯಾಗಿದ್ದು, ರಾಜ್ಯದಲ್ಲಿ ಇವತ್ತು 9,860 ಜನರು ಗುಣಮುಖರಾಗಿದ್ದಾರೆ.
ಇಂದಿನ 09/09/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp @drashwathcn @BSBommaihttps://t.co/YHtpD6QrYo pic.twitter.com/K0YmtmhrOa
— Karnataka Health Department (@DHFWKA) September 9, 2020
ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 3,15,433ಕ್ಕೆ ಏರಿಕೆಯಾಗಿದ್ದು, 99,470 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೊರೊನಾಗೆ ಇಂದಿನವರೆಗೂ 6,808 ಜನ ಮೃತಪಟ್ಟಿದ್ದು, ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 776 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 219, ಬಳ್ಳಾರಿ 559, ಬೆಳಗಾವಿ 390, ಬೆಂಗಳೂರು ಗ್ರಾಮಾಂತರ 79, ಬೆಂಗಳೂರು ನಗರ 3,419, ಬೀದರ್ 59, ಚಾಮರಾಜನಗರ 60, ಚಿಕ್ಕಬಳ್ಳಾಪುರ 141, ಚಿಕ್ಕಮಗಳೂರು 73, ಚಿತ್ರದುರ್ಗ 94, ದಕ್ಷಿಣ ಕನ್ನಡ 310, ದಾವಣಗೆರೆ 255, ಧಾರವಾಡ 226, ಗದಗ 155, ಹಾಸನ 270, ಹಾವೇರಿ 169, ಕಲಬುರಗಿ 241, ಕೊಡಗು 60, ಕೋಲಾರ 97, ಕೊಪ್ಪಳ 150, ಮಂಡ್ಯ 224, ಮೈಸೂರು 500, ರಾಯಚೂರು 214, ರಾಮನಗರ 109, ಶಿವಮೊಗ್ಗ 555, ತುಮಕೂರು 242, ಉಡುಪಿ 258, ಉತ್ತರ ಕನ್ನಡ 260, ವಿಜಯಪುರ 57 ಮತ್ತು ಯಾದಗಿರಿಯಲ್ಲಿ 95 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Leave a Reply