ನಿಮ್ಮಲ್ಲಿ ಇಡಿ ಇದ್ರೆ, ನಾನು ನಿಮಗೆ ಸಿಡಿ ತೋರಿಸ್ತೇನೆ: ಏಕನಾಥ್ ಖಡ್ಸೆ

ಮುಂಬೈ: ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಏನಕಾಥ್ ಜಿ ಖಡ್ಸೆ ಅವರು ಬಿಜೆಪಿ ತೊರೆದು ಎನ್‍ಸಿಪಿ ಸೇರಿದ್ದಾರೆ.

ಬಳಿಕ ಮಾತನಾಡಿದ ಅವರು, ನಿಮ್ಮಲ್ಲಿ ಇಡಿ ಇದ್ದರೆ, ನಾನು ನಿಮಗೆ ಸಿಡಿ ತೋರಿಸುತ್ತೇನೆ ಎಂದು ಹೇಳಿದ್ದಾರೆ. ಕಳೆದ 4 ವರ್ಷ ತಾವು ಪಕ್ಷದಲ್ಲಿ ಎದುರಿಸಿದ್ದ ಅವಮಾನ ಹಾಗೂ ಹಿಂಸೆಯನ್ನು ಇದೇ ವೇಳೆ ಖಡ್ಸೆ ನೆನಪಿಸಿಕೊಂಡರು.

ಕೊನೆಯ ಕ್ಷಣದ ತನಕ ಹಿರಿಯ ಬಿಜೆಪಿ ನಾಯಕರು ನನ್ನ ಮನಸ್ಸು ಬದಲಾಯಿಸಲು ಯತ್ನಿಸಿದರು. ಆದರೆ ಕೇಂದ್ರದಲ್ಲಿ ಕೆಲವರು ನನಗೆ ಈಗಿನ ಸನ್ನಿವೇಷದಲ್ಲಿ ಭವಿಷ್ಯ ಇಲ್ಲ ಎಂದು ಹೇಳಿ ಪಕ್ಷ ತೊರೆದು ಎನ್‍ಸಿಪಿ ಸೇರಲು ಸೂಚಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ಖಡ್ಸೆ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಎನ್‍ಸಿಪಿ ರಾಜ್ಯಾಧ್ಯಕ್ಷ, ಸಚಿವ ಜಯಂತ್ ಪಾಟೀಲ್ ಮಾತನಾಡಿ, ಟೈಗರ್ ಜಿಂದಾ ಹೈ, ಪಿಕ್ಚರ್ ಅಭಿ ಬಾಕಿ ಹೈ’ ಎಂಬ ಸಂದೇಶ ಖಡ್ಸೆ ಅವರ ಎನ್‍ಸಿಪಿ ಸೇರ್ಪಡೆ ಬಿಜೆಪಿಗೆ ರವಾನಿಸುತ್ತದೆ. ಇನ್ನೂ ಹಲವರು ಬಿಜೆಪಿ ಪಕ್ಷ ತೊರಲಿದ್ದಾರೆ ಎಂಬ ಸುಳಿವು ಕೂಡ ನೀಡಿದರು.

Comments

Leave a Reply

Your email address will not be published. Required fields are marked *