ನಿಮ್ಮನ್ನು ನನ್ನ ಅಣ್ಣನಾಗಿ ಪಡೆದಿರೋದು ನನ್ನ ಸೌಭಾಗ್ಯ: ಅಭಿಷೇಕ್

ಬೆಂಗಳೂರು: ನಿಮ್ಮನ್ನು ನನ್ನ ಅಣ್ಣನಾಗಿ ಪಡೆದಿರುವುದು ನನ್ನ ಸೌಭಾಗ್ಯ ಎಂದು ದಿವಂಗತ ಹಿರಿಯ ನಟ ಅಂಬರೀಶ್ ಪುತ್ರ ಅಭಿಷೇಕ್ ಹೇಳಿದ್ದಾರೆ.

ನಟ ಅಭಿಷೇಕ್ ಇನ್‍ಸ್ಟಾಗ್ರಾಂನಲ್ಲಿ ದರ್ಶನ್ ಫೋಟೋ ಹಾಕಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ. ಯಾಕೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಆಗಸ್ಟ್ 11ಕ್ಕೆ 23 ವರ್ಷ ಆಗಲಿದೆ. ಹೀಗಾಗಿ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ #23YearsOfBossism’ ಎಂಬ ಹ್ಯಾಷ್‍ಟ್ಯಾಗ್ ಬಳಸಿ ಸಂಭ್ರಮಿಸುತ್ತಿದ್ದಾರೆ.

ಅದೇ ರೀತಿ ನಟ-ನಟಿಯರು, ನಿರ್ದೇಶಕರು ಸೋಶಿಯಲ್ ಮಿಡಿಯಾದಲ್ಲಿ ದರ್ಶನ್ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅಭಿಷೇಕ್ ಅಂಬರೀಶ್ ಕೂಡ ಇನ್ಸ್ಟಾಗ್ರಾಂನಲ್ಲಿ ದರ್ಶನ್ ಬಗ್ಗೆ ಬರೆದುಕೊಂಡಿದ್ದಾರೆ.

“ನಿಮ್ಮನ್ನು ನನ್ನ ಅಣ್ಣನಾಗಿ ಪಡೆದಿರುವುದು ನನ್ನ ಸೌಭಾಗ್ಯ. 23 ವರ್ಷಗಳಲ್ಲಿ ನೀವು ಮಾಡಿದ ಅತ್ಯುತ್ತಮ ಕೆಲಸ, ಸಾಧನೆಗೆ ಅಭಿನಂದನೆಗಳು. ನಿಮ್ಮನ್ನು ಅಣ್ಣಾ ಎಂದು ಕರೆಯುವುದು ಗೌರವ ಮತ್ತು ಹೆಮ್ಮೆ ತಂದುಕೊಡುತ್ತೆ” ಎಂದಿದ್ದಾರೆ.

ಅಲ್ಲದೇ ಇಂದಿನ ಸಂಭ್ರಮ ನಿಮ್ಮ ಎಲ್ಲ ಪ್ರೀತಿಯ ಅಭಿಮಾನಿಗಳಿಗೆ ಖುಷಿ ನೀಡಿದೆ. ನಿಮ್ಮಂತ ಸೀನಿಯರ್ ಇನ್ನೊಬ್ಬರು ಇಲ್ಲ ಎಂದು ಅಭಿಷೇಕ್ ಪ್ರೀತಿಯಿಂದ ಹೇಳಿಕೊಂಡಿದ್ದಾರೆ. ಅಭಿಷೇಕ್ ಮಾತ್ರವಲ್ಲದೇ ನಿರ್ದೇಶಕ ತರುಣ್, ನೆನಪಿರಲಿ ಪ್ರೇಮ್ ಸೇರಿದಂತೆ ಅನೇಕರು ದರ್ಶನ್‍ಗೆ ಧನ್ಯವಾದ ಅರ್ಪಿಸುತ್ತಿದ್ದಾರೆ.

https://www.instagram.com/p/CDsg-CkAJGJ/?igshid=v0tmzlxl5i39

ದರ್ಶನ್ ಮೊದಲ ಬಾರಿಗೆ ಎಸ್.ನಾರಾಯಣ್ ನಿರ್ದೇಶನ ‘ಮಹಾಭಾರತ’ ಸಿನಿಮಾದಲ್ಲಿ ಅಭಿನಯಿಸಿದ್ದರು. ಈ ಸಿನಿಮಾ 1997 ಆಗಸ್ಟ್ 11 ರಂದು ಬಿಡುಗಡೆಯಾಗಿತ್ತು. ಹೀಗಾಗಿ ಮಂಗಳವಾರ ಈ ಸಿನಿಮಾ ಬಿಡುಗಡೆಯಾಗಿ 23 ವರ್ಷ ಆಗಲಿದೆ. ನಂತರ ‘ದೇವರ ಮಗ’, ‘ಎಲ್ಲರ ಮನೆ ದೋಸೆನೂ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2002ರಲ್ಲಿ ‘ಮೆಜೆಸ್ಟಿಕ್’ ಸಿನಿಮಾದ ಮೂಲಕ ನಾಯಕ ನಟನಾಗಿ ದರ್ಶನ್ ಅಭಿನಯಿಸಿದ್ದಾರೆ.

Comments

Leave a Reply

Your email address will not be published. Required fields are marked *