ನಿನ್ನೆ ಬಿಎಸ್‍ವೈ, ಇಂದು ಡಿಕೆಶಿ – ದೇಗುಲಗಳಲ್ಲಿ ರಾಜಕಾರಣಿಗಳಿಗಿಲ್ವಾ ಕೊರೊನಾ ರೂಲ್ಸ್?

ಬೆಂಗಳೂರು: ರಾಜಕಾರಣಿಗಳಿಗೆ ಒಂದು ರೂಲ್ಸ್, ಜನ ಸಾಮಾನ್ಯರಿಗೆ ಇನ್ನೊಂದು ರೂಲ್ಸ್ ಎನ್ನುವಂತಾಗಿದೆ ರಾಜ್ಯದ ಪರಿಸ್ಥಿತಿ. ನಿಷೇಧವಿದ್ದರೂ ನಿನ್ನೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಿಡಯೂರಪ್ಪ, ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗಾಗಿ ದೇವಸ್ಥಾನದ ಬಾಗಿಲುಗಳನ್ನು ತೆರೆಯುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಹೌದು. ಡಿಕೆಶಿ ಹಾಗೂ ಅವರ ಧರ್ಮಪತ್ನಿ ಉಷಾ ಅವರು ದೊಡ್ಡಬಳ್ಳಾಪುರದ ಚಿಕ್ಕಮಧುರೆಯ ಶ್ರೀ ಶನಿಮಹಾತ್ಮ ದೇಗುಲಕ್ಕೆ ಇಂದು ಮುಂಜಾನೆ ತೆರಳಿ ಪೂಜೆ ಸಲ್ಲಿಸಿದರು. ಇವರ ಜೊತೆ ಸ್ಥಳೀಯ ಶಾಸಕ ವೆಂಕಟರಾಮಯ್ಯ ಹಾಗೂ ಅವರ ಪತ್ನಿ ಕೂಡ ಇದ್ದರು.

ಪಂಚಮಿ, ಆಷಾಢ ಶನಿವಾರ ದೇವಾಲಯಗಳಲ್ಲಿ ದರ್ಶನಕ್ಕೆ ಸಾರ್ವಜನಿಕರಿಗೆ ಇಲ್ಲ ಅವಕಾಶ. ಆದರೆ ರಾಜಕಾರಣಿಗಳು, ಅವರ ಕುಟುಂಬದವರು ಹೋದ್ರೆ ರಾಜ ಮಾರ್ಗದಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಈ ಸಂಬಂಧ ಸಾರ್ವಜನಿಕರು ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಡ್ಡಾಯ – ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ

ನಿನ್ನೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿರುವ ಘಾಟಿ ಸುಬ್ರಮಣ್ಯ ದೇವಾಲಯದ ಬಾಗಿಲು ಓಪನ್ ಮಾಡಲಾಗಿತ್ತು. ವೀಕೆಂಡ್ ಹಾಗೂ ವಿಶೇಷ ಹಾಗೂ ರಜಾ ದಿನಗಳಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ವ್ಯಾಪ್ತಿಯಲ್ಲಿರುವ ದೇವಾಲಯಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಶ್ರೀನಿವಾಸ್ ಆದೇಶ ಹೊರಡಿಸಿದ್ದರು. ನಾಗರ ಪಂಚಮಿಯಂದು ಭಕ್ತರು ಹೆಚ್ಚಿರ್ತಾರೆ ಎಂಬ ಕಾರಣಕ್ಕೆ ಘಾಟಿ ಸುಬ್ರಹ್ಮಣ್ಯಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಆದರೆ ನಿನ್ನೆ ಮಾಜಿ ಸಿಎಂ ಅವರಿಗೋಸ್ಕರ ದೇವಸ್ಥಾನವನ್ನು ಓಪನ್ ಮಾಡಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಯಡಿಯೂರಪ್ಪ ಬರ್ತಾರೆ ಎಂಬ ಕಾರಣಕ್ಕೆ ಉಳಿದ ಭಕ್ತರಿಗೂ ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗಿತ್ತು. ಈ ಮೂಲಕ ಯಡಿಯೂರಪ್ಪಗೆ ಮಾತ್ರ ಅವಕಾಶ ಎಂಬ ಆರೋಪ ತಪ್ಪಿಸಿಕೊಳ್ಳಲು ಯತ್ನ ಇದಾಗಿತ್ತು. ಒಟ್ಟಿನಲ್ಲಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಿಎಸ್‍ವೈಗೆ ಪುತ್ರ ವಿಜಯೇಂದ್ರ ಹಾಗೂ ಶಾಸಕ ಎಸ್ ಆರ್ ವಿಶ್ವನಾಥ್ ಸಾಥ್ ನೀಡಿದ್ದರು.

Comments

Leave a Reply

Your email address will not be published. Required fields are marked *