ಅಂದು-ಇಂದು ನಾವೆಲ್ಲರೂ ಒಂದು, ಏನಂತೀರಿ: ಚಿರು ಕೊನೆಯ ಪೋಸ್ಟ್

ಬೆಂಗಳೂರು: ವಿಧಿವಶರಾಗಿರೋ ನಟ ಚಿರಂಜೀವಿ ಸರ್ಜಾ ನಿನ್ನೆ ಇನ್‍ಸ್ಟಾಗ್ರಾಂನಲ್ಲಿ ತಮ್ಮ ಧೃವ ಸರ್ಜಾ ಜೊತೆಗಿನ ಫೋಟೋ ಹಾಕಿಕೊಂಡಿದ್ದರು. ಅಂದು-ಇಂದು ನಾವೆಲ್ಲರೂ ಒಂದೇ. ನೀವು ಏನ್ ಹೇಳ್ತೀರಿ ಎಂದು ಬರೆದುಕೊಂಡಿದ್ದರು.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಶೂಟಿಂಗ್ ಕ್ಯಾನ್ಸಲ್ ಆಗಿತ್ತು. ಆದ್ದರಿಂದ ಕುಟುಂಬದ ಜೊತೆಯಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಕುಟುಂಬದ ಜೊತೆ ಲಾಕ್‍ಡೌನ್ ಸಮಯವನ್ನು ಕಳೆಯುತ್ತಿರೋ ಬಗ್ಗೆ ಅಭಿಮಾನಿಗಳಿಗೆ ಅಪ್‍ಡೇಟ್ ನೀಡುತ್ತಿದ್ದರು.

 

View this post on Instagram

 

Then and now.. we r still the same… what say guys..??

A post shared by Chirranjeevi Sarja (@chirusarja) on

ಶನಿವಾರ ರಾತ್ರಿಯೇ ಚಿರಂಜೀವಿ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ಅಪೋಲೋ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನ 3.30ಕ್ಕೆ ಅಪಾಯಿಂಟ್ ಮೆಂಟ್ ತೆಗೆದುಕೊಂಡಿದ್ದರು. ಮಧ್ಯಾಹ್ನ ಆಸ್ಪತ್ರೆಗೆ ಹೋಗಿದ್ದ ಚಿರಂಜೀವಿ ಸುಮಾರು 4 ಗಂಟೆಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

Comments

Leave a Reply

Your email address will not be published. Required fields are marked *