ನಿನಗಾಗಿ ಕಾಯುತ್ತಿರುವೆ, ವಾಪಸ್ ಬಾ ಗೆಳೆಯ – ರಿಯಾ ಚಕ್ರವರ್ತಿ

ಮುಂಬೈ: ನಿನಗಾರಿ ಕಾಯುತ್ತಿರುವೆ, ವಾಪಸ್ ಬಾ ಗೆಳೆಯ ಎಂದು ನಟಿ ರಿಯಾ ಚಕ್ರವರ್ತಿ ಸೋಶಿಯಲ್ ಮೀಡಿಯಾದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ನೆನಪಿನಲ್ಲಿ ಕೆಲವು ಸಾಲುಗಳನ್ನು ಬರೆದುಕೊ0ಡಿದ್ದಾರೆ.

ನೀನು ನನ್ನೊಂದಿಗೆ ಇಲ್ಲ ಎಂದು ಒಂದು ಕ್ಷಣವೂ ಯೋಚಿಸಲು ಆಗುತ್ತಿಲ್ಲ. ಸಮಯದೊಂದಿಗೆ ಎಲ್ಲವೂ ಸರಿ ಆಗುತ್ತೆ ಅಂತ ಹೇಳ್ತಾರೆ. ಆದ್ರೆ ನನ್ನ ಸಮಯ ಮತ್ತು ಎಲ್ಲವೂ ನೀನೇ ಆಗಿದ್ದೆ. ನೀನು ನನ್ನ ಗಾರ್ಡಿಯನ್ ಆಗಿರೋದು ನನಗೆ ಗೊತ್ತು. ಚಂದ್ರನಲ್ಲಿರುವ ನೀನು ಅಲ್ಲಿ ಟೆಲಿಸ್ಕೋಪ್ ನಿಂದ ನೋಡಿ ನನ್ನನ್ನು ರಕ್ಷಿಸುತ್ತಿದ್ದೀಯಾ ಅಲ್ವಾ ಎಂದು ಭಾವನಾತ್ಮಕ ಸಾಲುಗಳ ಜೊತೆ ಗೆಳೆಯನನ್ನು ಸ್ಮರಿಸಿಕೊಂಡಿದ್ದಾರೆ.

ನಾನು ಪ್ರತಿದಿನ ನಿನಗಾಗಿ ಕಾಯುತ್ತಿರುತ್ತೇನೆ. ನೀನು ಬಂದು ನನ್ನನ್ನು ಪಿಕ್ ಮಾಡುತ್ತೀಯಾ ಅಂತ ನಿರೀಕ್ಷೆಯಲ್ಲಿರುತ್ತೇನೆ. ಪ್ರತಿ ದಿನ ನಿನಗಾಗಿ ಹುಡುಕಾಟ ನಡೆಸಿ, ಕೊನೆಗೆ ಸೋತು ಕುಸಿಯುತ್ತೇನೆ. ವಾಪಸ್ ಬಾ ಗೆಳೆಯ. ನೀನು ಇಲ್ಲ ಅಂತ ತಿಳಿದಾಗ ನಿನ್ನ ಮುಖ ಕಣ್ಮುಂದೆ ಬಂದು, ಬೇಬೋ ನೀನು ಮಾಡಬಲ್ಲೆ ಅಂತ ಹೇಳುತ್ತಿದ್ದ ಆ ಮಾತುಗಳು ನೆನಪು ಬರುತ್ತವೆ. ನಿನ್ನ ಬಗ್ಗೆ ಯೋಚನೆ ಮಾಡ್ತಿದ್ರೆ ನನ್ನ ಇಡೀ ಭಾವನೆಗಳು ಹೊರ ಬರುತ್ತವೆ. ಭಾರವಾದ ಮನಸ್ಸಿನಿಂದ ಈ ಸಾಲುಗಳನ್ನ ಬರೆಯುತ್ತಿದ್ದೇನೆ. ನನ್ನ ಜೊತೆಯಲ್ಲಿ ನೀನಿದ್ದಿಯಾ ಅಂತ ಅನ್ನೋ ಭಾವನೆ ಇದೆ ಎಂದು ಬರೆದು ಸುಶಾಂತ್ ಜೊತೆಗಿನ ಕ್ಯೂಟ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ಕೊನೆಯ ಮೂರು ಗಂಟೆ ಹೇಗಿತ್ತು?

 

View this post on Instagram

 

A post shared by Rhea Chakraborty (@rhea_chakraborty)

ಜೂನ್ 14, 2020ರಂದು ಮುಂಬೈನ ಬಾಂದ್ರಾ ನಿವಾಸದಲ್ಲಿ ಸುಶಾಂತ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಡ್ರಗ್ಸ್ ತಿರುವು ಪಡೆದುಕೊಂಡಿತ್ತು. ನಂತರ ಇದೇ ಪ್ರಕರಣದಲ್ಲಿ ರಿಯಾ ಚಕ್ರವರ್ತಿ, ಶೌವಿಕ್ ಚಕ್ರವರ್ತಿ ಜೈಲು ವಾಸ ಅನುಭವಿಸಿದ್ದಾರೆ. ಸುಶಾಂತ್ ಸಾವಿನ ಬಳಿಕ ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತ ವಿಷಯ ಮುನ್ನಲೆಗೆ ಬಂದಿತ್ತು. ಇದನ್ನೂ ಓದಿ: ಕಳೆದ ವರ್ಷ ಈ ದಿನ ಸುಶಾಂತ್, ಈ ವರ್ಷ ಸಂಚಾರಿ ವಿಜಯ್ – ಪ್ರತಿಭಾನ್ವಿತ ನಟರಿಗೆ ಅಭಿಮಾನಿಗಳ ಕಂಬನಿ

Comments

Leave a Reply

Your email address will not be published. Required fields are marked *