ನಿಧಿ ಸುಬ್ಬಯ್ಯ ಸಾಂಗ್‍ಗೆ ಮನೆ ಮಂದಿ ಫಿದಾ

ಬಿಗ್‍ಬಾಸ್ ಮನೆಯಲ್ಲಿ ಕೆಲವು ನಿಯಮಗಳಿವೆ ಅವುಗಳನ್ನು ಫಾಲೋ ಮಾಡಿಲ್ಲ ಎಂದರೆ ಬಿಗ್‍ಬಾಸ್ ನೀಡುವ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಬಿಗ್‍ಬಾಸ್ ಒಮ್ಮೊಮ್ಮೆ ಕಠಿಣ ಶಿಕ್ಷೆಯನ್ನು ನೀಡಿತ್ತಾರೆ ಕೆಲವೊಮ್ಮೆ ತುಂಬಾ ಕ್ಯೂಟ್ ಆಗಿರುವ ಶಿಕ್ಷೆಯನ್ನು ನೀಡುತ್ತಾರೆ. ಇದೀಗ ಮನೆಯಲ್ಲಿರುವ ಒಬ್ಬ ಸ್ಪರ್ಧಿ ಮಾಡಿರುವ ತಪ್ಪಿಗೆ ಒಂದು ಒಳ್ಳೆಯ ಶಿಕ್ಷೆಯನ್ನು ಬಿಗ್‍ಬಾಸ್ ನೀಡಿದ್ದಾರೆ.

ಬಿಗ್‍ಬಾಸ್ ಮನೆಯಲ್ಲಿರುವ ಯಾವ ವಸ್ತುಗಳಿಗೂ ಹಾನಿ ಮಾಡುವಂತಿಲ್ಲ. ಬಿಗ್‍ಬಾಸ್ ನಿಯಮಗಳನ್ನು ಸ್ಪರ್ಧಿಗಳು ಚಾಚುತಪ್ಪದೇ ಪಾಲಿಸಬೇಕು ಇಲ್ಲವಾದರೆ ಬಿಗ್‍ಬಾಸ್ ನೀಡುವ ಶಿಕ್ಷೆಗೆ ಸಿದ್ಧರಾಗಿರಬೇಕು. ಹೀಗಿರುವಾಗ ನಿಧಿ ಮನೆಯಲ್ಲಿರುವ ಗ್ಲಾಸ್ ಒಂದನ್ನು ಒಡೆದು ಹಾಕಿದ್ದಾರೆ. ಇದಕ್ಕೆ ಬಿಗ್‍ಬಾಸ್ ಒಂದು ಕ್ಯೂಟ್ ಆಗಿರುವ ಶಿಕ್ಷೆಯನ್ನು ನೀಡಿದ್ದಾರೆ.

ನಿಧಿಗೆ ಕೆಲವು ಹಾಡುಗನ್ನು ನೀಡಲಾಗಿದೆ. ನಿಧಿನೀರು ಕುಡಿಯಬೇಕು ಎಂದು ಅನ್ನಸಿದಾಗಲೇಲ್ಲಾ ಒಂದು ಹಾಡನ್ನು ತಪ್ಪಿಲ್ಲದೇ ಹಾಡಬೇಕು ಅವರು ಸರಿಯಾಗಿ ಹಾಡಿದ್ದೀರಾ ಎಂದು ಮನೆಯ ಸದಸ್ಯರಲ್ಲಿ ಒಬ್ಬರು ಹೇಳಿದ ಮೇಲೆ ಬಿಗ್‍ಬಾಸ್ ನೀಡಿರುವ ಗ್ಲಾಸ್‍ನಲ್ಲಿ ನೀರು ಕುಡಿಯ ಬಹುದು ಎಂದು ಬಿಗ್‍ಬಾಸ್ ಹೇಳಿದ್ದರು. ನಿಧಿ ಬಿಗ್‍ಬಾಸ್ ಹೇಳಿದಂತೆ ಇಂಪಾಗಿ ಹಾಡುತ್ತಿದ್ದಾರೆ. ನಿಜಕ್ಕೂ ನಿಧಿ ವಾಯ್ಸ್ ಇಷ್ಟೊಂದು ಸ್ವೀಟ್ ಆಗಿದೆಯಾ ಎಂದು ಮನೆಮಂದಿ ಹೇಳುತ್ತಿದ್ದಾರೆ. ನಿಧಿಗೆ ನೀರುಬೇಕು ಎಂದರೆ ಹಾಡು ಹೇಳಲೇ ಬೇಕಾಗಿದೆ.

ಈ ಹಿಂದೆ ಅರವಿಂದ್, ಮಂಜು, ವೈಷ್ಣವಿ ಕೂಡ ಈ ಶಿಕ್ಷೆಯನ್ನು ಅನುಭವಿಸಿದ್ದಾರೆ. ವೈಷ್ಣವಿ ಡಬ್ಬಾ ಜೋಕ್, ಡಾನ್ಸ್ ಕಲಿಸುವುದು, ಅರವಿಂದ್‍ಗೆ ದಿವ್ಯಾ ನೀರು ಕುಡಿಸುವುದು, ಚಿಕ್ಕಕಪ್‍ನಲ್ಲಿ ಮಂಜು ನೀರು ಕುಡಿಯುವುದು ಸಖತ್ ಮಜಾ ಕೊಟ್ಟಿದ್ದವು. ಮನೆ ಗ್ಲಾಸ್ ಒಡೆದ ಸ್ಪರ್ಧಿಗಳು ನೀರು ಕುಡಿಯಬೇಕಾದರೆ ಸರ್ಕಸ್ ಮಾಡಬೆಕಾಗಿತ್ತು. ಇದೀಗ ನಿಧಿ ಸರದಿಯಾಗಿದೆ. ಮುಂದೆ ಮತ್ತೇ ಯಾರು ಈ ಶಿಕ್ಷೆಯನ್ನು ಅನುಭವಿಸುತ್ತಾರೆ? ಬಿಗ್‍ಬಾಸ್ ಯಾವ ಶಿಕ್ಷೆಯನ್ನು ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Comments

Leave a Reply

Your email address will not be published. Required fields are marked *