ಅಹ್ಮದಾಬಾದ್: 14 ವರ್ಷದ ಬಾಲಕ ತನ್ನ ತಾಯಿಯ ಪ್ರಿಯತಮನನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಗುಜರಾತ್‍ನ ಅಹ್ಮದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ತನ್ನ ಹಾಗೂ ತಾಯಿಯ ಮೇಲೆ ದೈಹಿಕವಾಗಿ ಹಿಂಸೆ ನೀಡಿದ್ದರಿಂದ ಕೃತ್ಯ ಎಸಗಿರುವುದಾಗಿ ಬಾಲಕ ಹೇಳಿದ್ದಾನೆ.

ಹತ್ತು ವರ್ಷಗಳ ಹಿಂದೆ ಮಹಿಳೆ ಬಾಲಕನೊಂದಿಗೆ ತನ್ನ ಪ್ರಿಯಕರನ ಜೊತೆ ಆಗಮಿಸಿ ಒಟ್ಟಿಗೆ ಜೀವಿಸುತ್ತಿದ್ದರು. ಇತ್ತೀಚೆಗೆ ಪ್ರಿಯಕರ ಪ್ರತಿ ನಿತ್ಯ ಬಾಲಕನ ತಾಯಿ ಮೇಲೆ ಹಲ್ಲೆ ನಡೆಸುತ್ತಿದ್ದ. ಇದನ್ನು ತಡೆಯಲು ಹೋದ ಬಾಲಕನನ್ನು ಸಹ ಹೊಡೆಯುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.
ಪ್ರಿಯತಮೆ ಜೊತೆಗೆ ಆಕೆಯ ಮಗನನ್ನು ಸಹ ಮನಬಂದಂತೆ ನಿತ್ಯ ಥಳಿಸುತ್ತಿದ್ದ. ಇದರಿಂದ ಸಿಟ್ಟಿಗೆದ್ದ 14 ವರ್ಷದ ಬಾಲಕ ತನ್ನ ತಾಯಿಯ ಪ್ರಿಯಕರನನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ. ಮೇ 17ರಂದು ಅಹ್ಮದಾಬಾದ್‍ನ ಬೆಹ್ರಾಂಪುರದ ಕ್ಯಾಲಿಕೊ ಮಿಲ್ ಕಾಂಪೌಂಡ್ ಬಳಿಯ ನಿರ್ಜನ ಪ್ರದೇಶಕ್ಕೆ ಬೈಕ್‍ನಲ್ಲಿ ಕರೆದೊಯ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಅಪರಾಧ ವಿಭಾಗದ ಪೊಲೀಸರು ಬಾಲಕ ಬಳಸಿದ ಚಾಕುವನ್ನು ವಶಪಡಿಸಿಕೊಂಡಿದ್ದು, ತನ್ನ ತಾಯಿಯ ಪ್ರಿಯತಮನನ್ನು ಕೊಲೆ ಮಾಡಲೆಂದೇ ಬಾಲಕ ಹೊಸ ಚಾಕು ಖರೀದಿಸಿದ್ದ, ಅಲ್ಲದೆ ಬಾಲಕ ಸಂತ್ರಸ್ತನನ್ನು ಕರೆದೊಯ್ದಿದ್ದ ಬೈಕ್‍ನ್ನು ಸಹ ಪೊಲೀಸರು ಸೀಜ್ ಮಾಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಅಪರಾಧ ವಿಭಾಗದ ಪೊಲೀಸರು ಪ್ರಕರಣವನ್ನು ಡ್ಯಾನಿಲಿಮ್ಡಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

Leave a Reply