ನಿಜವಾಗಿಯೂ ಆರೋಗ್ಯ ಸಮಸ್ಯೆ ಇದ್ಯಾ? – ನಟಿಯರ ಹೈಡ್ರಾಮಾಕ್ಕೆ ಇಂದೇ ಬೀಳುತ್ತೆ ತೆರೆ

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಸಿಸಿಬಿ ವಿಚಾರಣೆ ಎದುರಿಸುತ್ತಿದ್ದು, ಈ ಮಧ್ಯೆ ನಟಿಮಣಿಯರಿಬ್ಬರು ಅನಾರೋಗ್ಯದ ನೆಪ ಹೇಳಿಕೊಂಡು ತನಿಖೆಗೆ ಸರಿಯಾಗಿ ಸಹಕಾರ ನೀಡದ ಹಿನ್ನೆಲೆಯಲ್ಲಿ ಈಗ ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

ಹೌದು. ರಾಗಿಣಿ ಹಾಗೂ ಸಂಜನಾಳನ್ನು ಈಗಾಗಲೇ ನಗರದ ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಈ ಮೂಲಕ ಅನಾರೋಗ್ಯ ಇದೆಯಾ ಅಥವಾ ನಟಿಮಣಿಗಳಿಬ್ಬರು ಸುಳ್ಳು ಹೇಳುತ್ತಿದ್ದಾರಾ ಎಂಬುದನ್ನು ಪತ್ತೆ ಹಚ್ಚುವ ಕೆಲಸಕ್ಕೆ ಪೊಲೀಸರು ಈಗ ಮುಂದಾಗಿದ್ದಾರೆ.

ಅರೆಸ್ಟ್ ಆದ ಸಂದರ್ಭದಲ್ಲಿ ನಡೆದ ಟೆಸ್ಟ್ ನಲ್ಲಿ ರಕ್ತದ ಮಾದರಿ ತೆಗೆದುಕೊಂಡಿಲ್ಲ. ಹೀಗಾಗಿ ಇಂದು ರಕ್ತದ ಮಾದರಿಯನ್ನ ಪಡೆಯಲು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೊದಲು ನಾರ್ಮಲ್ ಚೆಕಪ್ ನಡೆಸಿ ನಂತರ ರಕ್ತದ ಮಾದರಿಯನ್ನ ಪಡೆಯಲಿದ್ದಾರೆ.

ರಕ್ತದ ಮಾದರಿ ಪಡೆಯಲು ಕೋರ್ಟಿನಿಂದ ಪರ್ಮೀಷನ್ ಪಡೆಯಬೇಕು. ನಿನ್ನೆ ಕೋರ್ಟಿನಿಂದ ಪರ್ಮೀಷನ್ ಸಿಕ್ಕಿತ್ತು. ಹೀಗಾಗಿ ಇವತ್ತು ರಕ್ತದ ಸ್ಯಾಂಪಲ್ ಪಡೆಯಲು ಸಿದ್ಧತೆ ನಡೆಸಲಾಗುತ್ತಿದೆ.

ಇಬ್ಬರ ರಕ್ತದ ಮಾದರಿ ಹಾಗೂ ಯೂರಿನ್ ಸ್ಯಾಂಪಲ್ ಸಂಗ್ರಿಹಸಲಾಗುತ್ತೆ. ಇಬ್ಬರು ನಟಿ ಮಣಿಯರ ಓವರ್ ಆ್ಯಕ್ಟಿಂಗ್ ಕೂಡ ಈ ಪರೀಕ್ಷೆಗೆ ಕಾರಣ ಎಂದು ಹೇಳಲಾಗುತ್ತಿದೆ. ಯಾಕೆಂದರೆ ತನಿಖೆ ನಡೆಸುವಾಗ ಪದೇ ಪದೇ ಅನಾರೋಗ್ಯದ ನೆಪವೊಡ್ಡಿ ನಟಿಯರು ನಾಟಕವಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರ ಸಂಪೂರ್ಣ ಆರೋಗ್ಯ ತಪಾಸಣೆಗೆ ನಿರ್ಧರಿಸಿದ್ದಾರೆ.

ಪರೀಕ್ಷೆಯ ವೇಳೆ ಇಬ್ಬರ ಬಿಪಿ ನಾರ್ಮಲ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂಬುವುದು ಮೂಲಗಳಿಂದ ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *