ನಾವು ಪಾತ್ರಧಾರಿಗಳಷ್ಟೇ, ನಿಜವಾದ ಹೀರೋಗಳು ನೀವು: ಸೈನಿಕರಿಗೆ ಶ್ವೇತಾ ನಮನ

ಬೆಂಗಳೂರು: ಪ್ರಾಣಕ್ಕೆ ಅಂಜದೇ ನಮ್ಮೆಲ್ಲರಿಗೋಸ್ಕರ ಹೋರಾಡುತ್ತಿರುವ ಯೋಧರೇ ನಿಜವಾದ ಹೀರೋಗಳು ಎಂದು ನಟಿ ಮತ್ತು ನಿರೂಪಕಿ ಶ್ವೇತಾ ಚಂಗಪ್ಪ ಅವರು ಹೇಳಿದ್ದಾರೆ.

ಭಾರತ ಮತ್ತು ಚೀನಾ ಗಡಿ ಭಾಗದಲ್ಲಿ ಕುತಂತ್ರಿ ಚೀನಾ ತನ್ನ ನರಿ ಬುದ್ಧಿಯನ್ನು ತೋರುತ್ತಿದೆ. ಕಳೆದ ಸೋಮವಾರ ರಾತ್ರಿ ಚೀನಾ ಹಾಗೂ ಭಾರತೀಯ ಸೈನಿಕರ ನಡುವೆ ಸಂಘರ್ಷ ನಡೆದಿದೆ. ಚೀನಾದ ಸೈನಿಕರ ಜೊತೆ ಕೆಚ್ಚೆದೆಯಿಂದ ಹೋರಾಡಿದ ನಮ್ಮ ಭಾರತೀಯ ಸೇನೆಯ 20 ಜನರ ಯೋಧರು ಹುತಾತ್ಮರಾಗಿದ್ದಾರೆ. ಯೋಧರು ಹುತಾತ್ಮರಾಗಿದ್ದಕ್ಕೆ ಇಡೀ ದೇಶವವೇ ಕಂಬನಿ ಮಿಡಿದಿದೆ.

https://www.instagram.com/p/CBkRRKEjoUU/

ಈಗ ಈ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಶ್ವೇತಾ ಚಂಗಪ್ಪ. ದೇಶ ಕಾಯುವ ಯೋಧರೇ, ನೀವು ನಮ್ಮೆಲ್ಲರ ಜೀವನದ ನಿಜವಾದ ಹೀರೋಗಳು. ನಿಮ್ಮನ್ನು ಬಣ್ಣಿಸಲು ಪದಗಳು ಸಿಗುವುದಿಲ್ಲ. ಪರದೆಯ ಮೇಲೆ ಪಾತ್ರ ಮಾಡುವ ನಾವು ನಟ ನಟಿಯರು ಹಾಗೂ ಕೇವಲ ಪಾತ್ರಧಾರಿಗಳು ಅಷ್ಟೇ. ಆದರೆ ನೀವು ನಿಜವಾದ ಹೀರೋಗಳು ಎಂದು ಯೋಧರನ್ನು ಹಾಡಿಹೊಗಳಿದ್ದಾರೆ.

ಜೊತೆಗೆ ನಿಮ್ಮ ಪ್ರಾಣಕ್ಕೆ ಅಂಜದೆ ನಮ್ಮ ದೇಶಕ್ಕಾಗಿ, ನಮ್ಮೆಲ್ಲರಿಗೋಸ್ಕರ ಹೋರಾಟ ಮಾಡುತ್ತೀರಿ. ನಿಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿರುವ ಪ್ರತಿಯೊಬ್ಬ ಭಾರತೀಯ ಸೈನಿಕನಿಗೂ ನನ್ನ ಕೋಟಿ ಕೋಟಿ ನಮನ. ನಿಮ್ಮ ಬಲಿದಾನಕ್ಕೆ ನಾನು ಚಿರಋಣಿ. ಯುದ್ಧದಲ್ಲಿ ಅಮರರಾಗಿರುವ ಎಲ್ಲಾ ಯೋಧರ ಕುಟುಬದವರಿಗೆ ಆ ಭಗವಂತ ಹೆಚ್ಚಿನ ಶಕ್ತಿಯನ್ನೂ ಕೊಡಲಿ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಡಿರುವ ಶ್ವೇತಾ ಭಾರತೀಯ ಸೇನೆಯ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ಗಾಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೆ 17 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಗೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆಯು ಚೀನಾದ 40ಕ್ಕೂ ಹೆಚ್ಚು ಮಂದಿ ಯೋಧರನ್ನು ಸೆದೆಬಡಿದಿದೆ. ಇದರಲ್ಲಿ 100ಕ್ಕೂ ಹೆಚ್ಚು ಚೀನಾ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ತನ್ನ ಯೋಧರ ಮೃತದೇಹವನ್ನು ಹೊತ್ತೊಯ್ಯಲು ಚೀನಾ ಹೆಲಿಕಾಪ್ಟರ್ ಗಳು ಎಲ್‍ಎಸಿ ಬಳಿ ಹಾರಾಟ ನಡೆಸಿವೆ ಎಂದು ವರದಿಯಾಗಿತ್ತು.

Comments

Leave a Reply

Your email address will not be published. Required fields are marked *