ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2017ರಲ್ಲಿ ವಿವಾಹ ಆಗಿದ್ದರು. ಮದುವೆಯಾದ ಮೂರು ವರ್ಷದ ನಂತರ ಅನುಷ್ಕಾ ಅವರು ಗರ್ಭಿಣಿಯಾಗಿದ್ದಾರೆ. ತಂದೆಯಾಗುತ್ತಿರುವ ಖುಷಿ ವಿಚಾರವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಹಂಚಿಕೊಂಡಿರುವ, ಕೊಹ್ಲಿ ನಾವೂ ಈಗ ಮೂವರು, ಜನವರಿಯಲ್ಲಿ ಡೆಲಿವರಿ ಎಂದು ಬರೆದುಕೊಂಡಿದ್ದಾರೆ.
https://www.instagram.com/p/CEYZIPllBzF/?utm_source=ig_web_button_share_sheet
2017 ಡಿಸೆಂಬರ್ 11ರಂದು ಇಟಲಿಯಲ್ಲಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮದುವೆ ಆಗಿದ್ದರು. ಇಟಲಿಯಿಂದ ಬಂದ ನಂತರ ದೆಹಲಿ ಮತ್ತು ಮುಂಬೈನಲ್ಲಿ ಆರತಕ್ಷತೆಯನ್ನು ಆಯೋಜಿಸಿದ್ದರು. ದೆಹಲಿಯಲ್ಲಿ ನಡೆದ ಆರತಕ್ಷತೆಗೆ ಪ್ರಧಾನ ಮಂತ್ರಿ ಮೋದಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಆಗಮಿಸಿದ್ದರು. ದೆಹಲಿ ಬಳಿಕ ಮುಂಬೈನ ಸೆಂಟ್ ರೀಜಿಸ್ ನಲ್ಲಿ ಮಗದೊಮ್ಮೆ ಆರತಕ್ಷತೆ ಆಯೋಜನೆ ಮಾಡಲಾಗಿತ್ತು. ಮುಂಬೈನಲ್ಲಿ ಬಾಲಿವುಡ್ ತಾರೆಯರು ಮತ್ತು ಕೊಹ್ಲಿ ಸ್ನೇಹಿತರು ಆಗಮಿಸಿ ವಧು-ವರರಿಗೆ ಶುಭ ಕೋರಿದ್ರು.

ಸದ್ಯ ವಿರಾಟ್ ಕೊಹ್ಲಿಯವರು ಐಪಿಎಲ್‍ನಲ್ಲಿ ಭಾಗವಹಿಸಲು ಯುಎಇಗೆ ತೆರಳಿದ್ದಾರೆ. ಸದ್ಯ ಅಲ್ಲಿ ಆರು ದಿನಗಳ ಕಾಲ ಕೆಹ್ಲಿ ಕ್ವಾರಂಟೈನ್ ಆಗಿದ್ದಾರೆ. ಆದನಂತರ ಐಪಿಎಲ್ ಸಿದ್ಧತೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ಎಂದಿನಂತೆ ಕೊಹ್ಲಿ ಆರ್‌ಸಿಬಿ ತಂಡವನ್ನು ಮುನ್ನೆಡೆಸಲಿದ್ದಾರೆ. ಐಪಿಎಲ್‍ನಲ್ಲಿ ಸ್ಟಾರ್ ತಂಡ ಎಂದು ಗುರುತಿಸಿಕೊಂಡಿರುವ ಆರ್‌ಸಿಬಿತಂಡ ಈವರೆಗೂ ಒಂದು ಬಾರಿಯೂ ಕಪ್ ಗೆದ್ದಿಲ್ಲ.


Leave a Reply