ನಾಳೆಯೇ ವಿಚಾರಣೆಗೆ ಬನ್ನಿ – ರಾಗಿಣಿಗೆ ಠಕ್ಕರ್ ಕೊಟ್ಟ ಸಿಸಿಬಿ

ಬೆಂಗಳೂರು: ನಾಳೆಯೇ ವಿಚಾರಣೆಗೆ ಬನ್ನಿ ಎಂದು ನಟಿ ರಾಗಿಣಿಯವರಿಗೆ ಸಿಸಿಬಿ ಅಧಿಕಾರಿಗಳು ಮತ್ತೆ ಸಮನ್ಸ್ ನೀಡಿದ್ದಾರೆ.

ಬುಧವಾರ ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ವಿಚಾರವಾಗಿ ಸಿಸಿಬಿ ಪೊಲೀಸರು ನಟಿ ರಾಗಿಣಿಯವರಿಗೆ ನೋಟಿಸ್ ನೀಡಿದ್ದರು. ಜೊತೆಗೆ ಇಂದು 10 ಗಂಟೆಗೆ ಬಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ನನಗೆ ನೋಟಿಸ್ ಕಡಿಮೆ ಅವಧಿಯಲ್ಲಿ ಸಿಕ್ಕಿದೆ ಎಂಬ ಕಾರಣ ನೀಡಿ ರಾಗಿಣಿಯವರು ಸೋಮವಾರ ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದ್ದರು.

ಈಗ ಈ ವಿಚಾರವಾಗಿ ಮತ್ತೆ ರಾಗಿಣಿಯವರಿಗೆ ಸಮನ್ಸ್ ನೀಡಿರುವ ಸಿಸಿಬಿ ಪೊಲೀಸರು, ನಾಳೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರವಾಗಿ ಬೆಳಗ್ಗೆ ಟ್ವೀಟ್ ಮಾಡಿದ್ದ ರಾಗಿಣಿ, ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು ನಿಜ. ಕಡಿಮೆ ಅವಧಿಯಲ್ಲಿ ನೋಟಿಸ್ ನೀಡಿದ ಹಿನ್ನೆಲೆಯಲ್ಲಿಂದು ನಾನು ವಿಚಾರಣೆಗೆ ಹಾಜರಾಗುತ್ತಿಲ್ಲ. ನೋಟಿಸ್ ಕೊಟ್ಟ ಬಗ್ಗೆ ನನ್ನ ಪರವಾಗಿ ಕಾಳಜಿ ವ್ಯಕ್ತಪಡಿಸಿದ ಜನತೆಗೆ ಧನ್ಯವಾದಗಳು ಎಂದಿದ್ದರು.

ನಮ್ಮ ವಕೀಲರು ಪೊಲೀಸರು ಮುಂದೆ ಹಾಜರಾಗಿ ನಮ್ಮ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸಮಯದ ಅಭಾವ ಹಿನ್ನೆಲೆ ಸೋಮವಾರ ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾಗುತ್ತೇನೆ. ಪೊಲೀಸರ ನೀಡಿರುವ ನೋಟಿಸ್ ಪ್ರಕಾರ ವಿಚಾರಣೆಯಲ್ಲಿ ಭಾಗಿಯಾಗೋದು ಒಬ್ಬ ಪ್ರಜೆಯಾಗಿ ನನ್ನ ಕರ್ತವ್ಯ. ಪೊಲೀಸರಿಂದ ಮರೆ ಮಾಡುವ ವಿಷಯಗಳಿಲ್ಲ. ಕಾನೂನು ಬಾಹಿರ ಚಟುವಟಿಕೆಗಳಿಗೂ ನನಗೂ ಸಂಬಂಧವಿಲ್ಲ. ನನ್ನ ಬಗ್ಗೆ ಕಾಳಜಿ ತೋರಿಸಿದ ಜನತೆ ಕೃತಜ್ಞತೆ ಎಂದು ರಾಗಿಣಿ ತಿಳಿಸಿದ್ದರು.

Comments

Leave a Reply

Your email address will not be published. Required fields are marked *