ನಾಳೆಯಿಂದ ದೆಹಲಿಯಲ್ಲಿ ಅನ್‍ಲಾಕ್ – ಹೋಟೆಲ್‍ಗಳಲ್ಲಿ ಶೇ.50, ಮಾಲ್ ಫುಲ್ ಓಪನ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ದೆಹಲಿ ಲಾಕ್‍ಡೌನ್ ನಿರ್ಬಂಧವನ್ನು ತೆರವುಗೊಳಿಸಿ ಮತ್ತೆ ಸಹಜ ರೀತಿಯಲ್ಲಿ ಎಲ್ಲವನ್ನೂ ಪುನಾರಂಭಿಸಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

ನಾಳೆಯಿಂದ ಅಂಗಡಿಗಳು, ಮಾರುಕಟ್ಟೆ ಮತ್ತು ಮಾಲ್‍ಗಳನ್ನು ಸಂಪೂರ್ಣವಾಗಿ ತೆರೆಯಬಹುದಾಗಿದೆ. ಅಲ್ಲದೇ ಹೋಟೆಲ್‍ಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಅನುಮತಿ ಸಿಕ್ಕಿದೆ.

ನಾಳೆ ಬೆಳಗ್ಗೆ 5 ಗಂಟೆಯ ನಂತರ ಕೆಲವು ಚಟುವಟಿಕೆಗಳಿಗೆ ನಿಯಮಗಳ ಅನುಸಾರವಾಗಿ ಕಾರ್ಯನಿರ್ವಹಿಸಲು ಅನುಮತಿ ನೀಡಿದ್ದು, ಉಳಿದ ಚಟುವಟಿಕೆಗಳನ್ನು ನಿಷೇಧಿಸಿರುವುದಾಗಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಮಾರುಕಟ್ಟೆ ಮತ್ತು ಮಾಲ್‍ಗಳನ್ನು ಒಂದು ವಾರ ಸಂಪೂರ್ಣವಾಗಿ ತೆರೆದು ನಂತರ ಪರಿಶೀಲಿಸಿ, ಕೊರೊನಾ ಪ್ರಕರಣಗಳು ಹೆಚ್ಚಾದರೆ ಈ ಹಿಂದೆ ಇದ್ದ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸುತ್ತೇವೆ. ಕಡಿಮೆ ಪ್ರಕರಣ ದಾಖಲಾದರೆ ಈ ಅನ್‍ಲಾಕ್ ನಿಯಮಗಳೇ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: IAS ಆಕಾಂಕ್ಷಿಗಳಿಗೆ ಫ್ರೀ ಕೋಚಿಂಗ್ ಆಫರ್ ನೀಡಿದ ಸೋನು ಸೂದ್

Comments

Leave a Reply

Your email address will not be published. Required fields are marked *